ಸುಮಲತಾ ಆಗಮನ ಸುದ್ದಿ ಸ್ಫೋಟಕಗಳನ್ನು ಅಡಗಿಸಿದ್ದ ಗಣಿ ಮಾಲಿಕರು..?
- ಕೃಷ್ಣರಾಜಸಾಗರ ಅಣೆಕಟ್ಟೆ ಸರಹದ್ದಿನಲ್ಲಿ ಬರುವ ತಾಲೂಕಿನ ಬೇಬಿ ಬೆಟ್ಟದ ಜಮೀನೊಂದರಲ್ಲಿ ಜೀವಂತ ಸ್ಫೊಟಕಗಳು ಪತ್ತೆ
- ಮಳೆ ನೀರು ಹಾಗೂ ಮಣ್ಣಿನಿಂದ ಕೂಡಿರುವ ಜೀವಂತ ಸ್ಫೋಟಕ ವಸ್ತುಗಳು ಪತ್ತೆ
ಪಾಂಡವಪುರ (ಜು.17): ಕೃಷ್ಣರಾಜಸಾಗರ ಅಣೆಕಟ್ಟೆ ಸರಹದ್ದಿನಲ್ಲಿ ಬರುವ ತಾಲೂಕಿನ ಬೇಬಿ ಬೆಟ್ಟದ ಜಮೀನೊಂದರಲ್ಲಿ ಜೀವಂತ ಸ್ಫೊಟಕಗಳು ಪತ್ತೆಯಾಗಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.
ಮಳೆ ನೀರು ಹಾಗೂ ಮಣ್ಣಿನಿಂದ ಕೂಡಿರುವ ಜೀವಂತ ಸ್ಫೋಟಕ ವಸ್ತುಗಳು ಜಾನುವಾರುಗಳನ್ನು ಮೇಯಿಸುತ್ತಿದ್ದವರ ಕಣ್ಣಿಗೆ ಬಿದ್ದಿವೆ. ಸ್ಥಳದಲ್ಲಿ ಜಿಲೆಟಿನ್ ಕಡ್ಡಿಗಳು ಮತ್ತು ತೋಟಗಳು ಪತ್ತೆಯಾಗಿವೆ. ಇವೇನಾದರೂ ಮಕ್ಕಳಿಗೆ ದೊರೆತು ಅಪಾಯ ಸಂಭವಿಸಿದ್ದರೆ ಯಾರು ಹೊಣೆ ಎಂದು ಜನರು ಪ್ರಶ್ನಿಸಿದ್ದಾರೆ.
ಗಣಿಗಾರಿಕೆ: 'ಅಡಿಪಾಯಕ್ಕೆ ಧಕ್ಕೆಯಾದ್ರೆ KRS ಕುಸಿದು ಬೀಳುವ ಅಪಾಯ'
ಈ ಸ್ಫೋಟಕ ವಸ್ತುಗಳು ಎಲ್ಲಿಂದ ಬಂದವು ಯಾರಿಗೆ ಸೇರಿದವು. ಜೀವಂತ ಸ್ಫೋಟಕ ವಸ್ತುಗಳನ್ನು ಜಮೀನಿನ ಮಣ್ಣಿನೊಳಗೆ ಹೂತಿಟ್ಟದ್ದು ಏಕೆ ಎನ್ನುವುದಕ್ಕೆ ಇದುವರೆಗೂ ಉತ್ತರ ಸಿಕ್ಕಿಲ್ಲ. ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ನಿಂತ್ತಿಲ್ಲ ಎನ್ನುವುದನ್ನು ಈ ಸ್ಫೋಟಕ ವಸ್ತುಗಳು ಸಾಬೀತುಪಡಿಸುತ್ತಿವೆ ಎಂದು ಬೇಬಿ ಬೆಟ್ಟ ವ್ಯಾಪ್ತಿಯಲ್ಲಿ ಕೇಳಿಬರುತ್ತಿರುವ ಮಾತಾಗಿದೆ.
ಒಂದು ಮೂಲದ ಪ್ರಕಾರ ಸಂಸದೆ ಸುಮಲತಾ ಅಂಬರೀಶ್ ಬೇಬಿ ಬೆಟ್ಟದ ಪರಿವೀಕ್ಷಣೆಗೆ ಆಗಮಿಸುತ್ತಿದ್ದ ಸಮಯದಲ್ಲಿ ಗಣಿ ಇಲಾಖೆ ಅಧಿಕಾರಿಗಳು ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬಹುದೆಂಬ ಕಾರಣಕ್ಕೆ ಸ್ಫೋಟಕಗಳನ್ನು ಬಚ್ಚಿಡುವ ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ.