ಬೀದರ್‌ನಿಂದ ತಿರುಪತಿಗೆ ಪ್ರಾಯೋಗಿಕ ರೈಲು ಸೇವೆ: ಕೇಂದ್ರ ಸಚಿವ ಖೂಬಾ
ಪೂರ್ಣಾ ಜಂಕ್ಷನ್‌ನಿಂದ ಬೀದರ್ ಮೂಲಕ ತಿರುಪತಿಗೆ, ತಿಂಗಳ ಐದು ಭಾನುವಾರ ಈ ವಿಶೇಷ ರೈಲು ಸೌಲಭ್ಯ
ಬೀದರ್(ಅ.02): ಬೀದರ್‌ನಿಂದ ತಿರುಪತಿಗೆ ತೆರಳಲು ಮತ್ತೊಂದು ರೈಲಿನ ವ್ಯವಸ್ಥೆ ಮಾಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಈ ರೈಲು ಪೂರ್ಣಾ ಜಂಕ್ಷನ್‌ನಿಂದ ಬೀದರ್ ಮೂಲಕ ತಿರುಪತಿವರೆಗೆ ಪ್ರಾಯೋಗಿಕವಾಗಿ ಚಲಿಸಲಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಮಾಹಿತಿ ನೀಡಿದ್ದಾರೆ.
ಅ.2, 9, 16, 23, 30 ಐದು ಭಾನುವಾರ ರಾತ್ರಿ 11.15ಕ್ಕೆ ಪೂರ್ಣಾ ಜಂಕ್ಷನ್‌ನಿಂದ ಹೊರಟು, ಪರಭಣಿ, ಪರಳಿ ವೈಜಿನಾಥ, ಉದಗಿರ ಮೂಲಕ ಭಾಲ್ಕಿಗೆ ಮರುದಿನ ಸೊಮವಾರ ಬೆಳಗ್ಗೆ 5.50ಕ್ಕೆ ಹಾಗೂ ಬೀದರ್‌ಗೆ ಬೆಳಗ್ಗೆ 6.30ಕ್ಕೆ ಬರಲಿದೆ. ಜಹಿರಾಬಾದ್, ವಿಕಾರಾಬಾದ್, ಚಿತ್ತಾಪೂರ, ಯಾದಗಿರಿ, ರಾಯಚೂರ, ಮಂತ್ರಾಲಯ ರೋಡ, ರೇನಿಗುಂಟಾ ಮಾರ್ಗವಾಗಿ ಸೊಮವಾರ ರಾತ್ರಿ 10.10ಕ್ಕೆ ತಿರುಪತಿ ತಲುಪಲಿದೆ. ಅ.3, 10, 17, 24, 31 ರಂದು ಐದು ಸೋಮವಾರ ರಾತ್ರಿ 11.50ಕ್ಕೆ ತಿರುಪತಿಯಿಂದ ಹೊರಟು ಬಂದ ಮಾರ್ಗವಾಗಿ ಮರುದಿನ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಬೀದರ್ ಹಾಗೂ 12.45ಕ್ಕೆ ಭಾಲ್ಕಿ ತಲುಪಲಿದೆ. ಸಾಯಂಕಾಲ 6.30ಕ್ಕೆ ಪೂರ್ಣಾ ಜಂಕ್ಷನ್ ತಲುಪಲಿದೆ.
ಕೇಂದ್ರ ಸರ್ಕಾರದ ಕ್ರಮ ಖಂಡಿಸುವವರು ದೇಶದ್ರೋಹಿಗಳು: ಕೇಂದ್ರ ಸಚಿವ ಖೂಬಾ
ತಿರುಪತಿಯಿಂದ ಬೀದರ್‌ಗೆ ಬರಲು ವಿಕಾರಾಬಾದ್‌ವರೆಗೆ ಹಲವಾರು ರೈಲುಗಳಿವೆ, ತದನಂತರ ವಿಕಾರಾಬಾದ್‌ನಿಂದ ಬೀದರ್ ಬರಲು ಸಹ 4-5 ರೈಲುಗಳಿವೆ ಹಾಗಾಗಿ ಬೀದರ್‌ನಿಂದ ತಿರುಪತಿಗೆ ಈ ವಿಶೇಷ ರೈಲಿನ ಮೂಲಕ ಪ್ರಯಾಣಿಸಿ, ಬರುವಾಗ ವಿಶೇಷ ರೈಲಿಗಾದರು ಅಥವಾ ಬೇರೆ ರೈಲಿಗಾದರೂ ಬೀದರ್‌ಗೆ ಬರಬಹುದು. ಈ ಪ್ರಾಯೋಗಿಕ ರೈಲಿನ ಸದೂಪಯೋಗವನ್ನು ಎಲ್ಲಾ ಜನರು ಪಡೆದುಕೊಳ್ಳಬೇಕೆಂದು ಕೇಂದ್ರ ಸಚಿವ ಭಗವಂತ ಖೂಬಾ ಕೋರಿದ್ದಾರೆ.