ಜಿಎಸ್‌ಟಿಯಿಂದ ಬೀಡಿಗೆ ವಿನಾಯ್ತಿ: ವೀರಪ್ಪ ಮೊಯ್ಲಿ ಒತ್ತಾಯ

ಕೇಂದ್ರ ಸರ್ಕಾರ ಬಡವರ ಬೀಡಿ ಉದ್ಯಮದ ಮೇಲೆ ಶೇ.28ರಷ್ಟು ಜಿಎಸ್‌ಟಿ ಬರೆ ಎಳೆದಿದೆ. ಇದು ಸರಿಯಲ್ಲ ಜಿಎಸ್‌ಟಿಯಿಂದ ವಿನಾಯಿತಿ ನೀಡುವಂತೆ ಮಾಜಿ ಮುಖ್ಯಮಂತ್ರಿ ಡಾ.ಎಂ. ವೀರಪ್ಪ ಮೊಯ್ಲಿಒತ್ತಾಯಿಸಿದ್ದಾರೆ

Exemption of beedi industry from GST: Veerappa Moily insistsrav

ಮಂಗಳೂರು (ಜು.25} : ಸರ್ಕಾರ ಬಡವರ ಉದ್ಯಮವಾದ ಬೀಡಿ ಉದ್ಯಮಕ್ಕೆ ಶೇ.28 ಜಿಎಸ್‌ಟಿ ವಿಧಿಸಿರುವುದು ಸರಿಯಲ್ಲ. ಕೇಂದ್ರ ಸರ್ಕಾರದ ಈ ನಡೆಯಿಂದ ಬಡವರು ಮತ್ತಷ್ಟು ಬಡತನದ ಕೂಪಕ್ಕೆ ಬಿದ್ದಿದ್ದಾರೆ. ಜಿಎಸ್‌ಟಿಯಿಂದ ವಿನಾಯಿತಿ ನೀಡಬೇಕು ಅಥವಾ ಕನಿಷ್ಠ ಶೇ.5 ಜಿಎಸ್‌ಟಿ ವಿಧಿಸಬಹುದು ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ. ವೀರಪ್ಪ ಮೊಯ್ಲಿ ಸಲಹೆ ನೀಡಿದ್ದಾರೆ.

ಕರ್ನಾಟಕ ಕರಾವಳಿ ಬೀಡಿ ಕೆಲಸಗಾರರ ಸಂಘ (beedi contractors and workers association Karnataka), ದಕ್ಷಿಣ ಕನ್ನಡ- ಉಡುಪಿ ಜಿಲ್ಲೆ ಬೀಡಿ ಕಂಟ್ರಾಕ್ಟರ್‌ದಾರರ ಸಂಘದ ಆಶ್ರಯದಲ್ಲಿ ನಗರದ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ಭಾನುವಾರ ಬೀಡಿ ಕೆಲಸಗಾರರ ಸಮ್ಮೇಳನದ ಉದ್ಘಾಟನೆ ಹಾಗೂ ಸಂಶೋಧನಾ ಪುಸ್ತಕ ‘ಬೀಡಿ ಬದುಕು’ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಮಂಗಳೂರು : ಗಾರೆ, ಕೂಲಿ, ಬೀಡಿ ಕೆಲಸಕ್ಕಿಳಿದ ಖಾಸಗಿ ಶಿಕ್ಷಕರು!

ದಕ್ಷಿಣ ಕನ್ನಡ(Dakshina kannada) ಮತ್ತು ಉಡುಪಿ(Udupi) ಜಿಲ್ಲೆಗಳಿಗೆ ಬೀಡಿ ಉದ್ಯಮ ದೊಡ್ಡ ಶಕ್ತಿ ನೀಡಿದೆ. ಇತರ ಉದ್ಯಮಗಳ ಜೊತೆಗೆ ಬೀಡಿಯನ್ನು ಹೋಲಿಸುವುದು ಸರಿಯಲ್ಲ. ಬೀಡಿ ಕಾರ್ಮಿಕರ ಆದಾಯದ ಶೇ.50 ಭಾಗ ಅವರ ಕುಟುಂಬ ಸದಸ್ಯರ ಆರೋಗ್ಯ ಖರ್ಚಿಗೆ ವ್ಯಯವಾಗುತ್ತದೆ. ಶೇ.28 ಜಿಎಸ್‌ಟಿ ಹಾಕುವುದರಿಂದ ಬೀಡಿ ಕಾರ್ಮಿಕರಿಗೆ ಇನ್ನಷ್ಟುಸಮಸ್ಯೆಯಾಗುತ್ತದೆ ಎಂದು ಹೇಳಿದರು.

ಕಾನೂನು ರಚನೆಯಾಗಲಿ: ಸಾವಿರಾರು ಸಂಖ್ಯೆಯಲ್ಲಿರುವ ಬೀಡಿ ಕಾರ್ಮಿಕರು ಕಡು ಕಷ್ಟದಲ್ಲಿ ಬದುಕುತ್ತಿದ್ದಾರೆ. ಅವರ ಏಳಿಗೆಗಾಗಿ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದಲ್ಲಿ ಬಲವಾದ ಕಾನೂನು ರಚನೆಯಾಗಬೇಕು ಎಂದು ವೀರಪ್ಪ ಮೊಯ್ಲಿ ಒತ್ತಾಯಿಸಿದರು.

ಪ್ರತ್ಯೇಕ ನಿಗಮ ಬೇಡಿಕೆ: ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ. ಖಾದರ್‌ ಮಾತನಾಡಿ, ಬೀಡಿ ಕಾರ್ಮಿಕರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸೌಲಭ್ಯಗಳನ್ನು ಒಂದೇ ಕಡೆ ಪಡೆಯಲು ಸಾಧ್ಯವಾಗುವಂತೆ ಪ್ರತ್ಯೇಕ ನಿಗಮ ಮಾಡುವ ಅಗತ್ಯವಿದೆ ಎಂದು ಹೇಳಿದರು.

ಕೊರಗ ಸಮುದಾಯದ ಮೊದಲ ಎಂಫಿಲ್ ಪದವೀಧರೆಗೆ ಬೀಡಿ ಕಟ್ಟೋದೇ ಕಾಯಕ!

ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ.ವೇದವ್ಯಾಸ ಕಾಮತ್‌ ಮಾತನಾಡಿ, ಬೀಡಿ ಕಾರ್ಮಿಕರ ಬೇಡಿಕೆಗಳನ್ನು ಸರ್ಕಾರದ ಮಟ್ಟದಲ್ಲಿ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಜಾತ್ಯತೀತ ಜನತಾದಳ ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ, ಬೀಡಿ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಹರೀಶ್‌ ಕೆ.ಎಸ್‌. ಇಸ್ಮಾಯಿಲ್‌, ಸಂಜೀವ, ಪ್ರಧಾನ ಕಾರ್ಯದರ್ಶಿ ಸಂಜೀವ ಪೂಜಾರಿ, ಕೋಶಾಧಿಕಾರಿ ಇಸ್ಮಾಯಿಲ್‌, ಕಾಳಿದಾಸ ಮತ್ತಿತರರು ಇದ್ದರು. ಎಚ್‌ಎಂಎಸ್‌ ರಾಜ್ಯಾಧ್ಯಕ್ಷ ಸುರೇಶ್ಚಂದ್ರ ಶೆಟ್ಟಿಸ್ವಾಗತಿಸಿದರು. ಕರ್ನಾಟಕ ಕರಾವಳಿ ಬೀಡಿ ಕೆಲಸಗಾರರ ಸಂಘದ ಅಧ್ಯಕ್ಷ ಮಹಮ್ಮದ್‌ ರಫಿ ಪ್ರಸ್ತಾವನೆಗೈದರು.

Latest Videos
Follow Us:
Download App:
  • android
  • ios