ನಡುರಸ್ತೆಯಲ್ಲೇ ಅಬಕಾರಿ ಉಪ ಅಧೀಕ್ಷಕರೊಬ್ಬರ ಮೇಲೆ ಅಬಕಾರಿ ಇನ್ಸ್‌ಪೆಕ್ಟರ್‌ನಿಂದ ಏಕಾಏಕಿ ಹಲ್ಲೆಯಾದ ಘಟನೆ ಬೆಳಕಿಗೆ ಬಂದಿದೆ. ಅಧಿಕಾರಿಗಳು ಬಡಿದಾಡಿಕೊಂಡ ವೀಡಿಯೋ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.
ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರದಲ್ಲಿ ಘಟನೆ ನಡೆದಿದ್ದು, ನಡು ರಸ್ತೆಯಲ್ಲಿಯೇ ಅಬಕಾರಿ ಇಲಾಖೆ ಅಧಿಕಾರಿಗಳು ಕಿತ್ತಾಡಿಕೊಂಡಿದ್ದಾರೆ. ಮದ್ಯ ಅಕ್ರಮ ಮಾರಾಟ ಪರಿಶೀಲನೆಗೆ ಸ್ಥಳಕ್ಕೆ ಅಬಕಾರಿ ಉಪ ಅಧೀಕ್ಷಕರು ತೆರಳಿದ್ದರು.
ಸತತ 11ನೇ ದಿನವೂ ದಕ್ಷಿಣ ಕನ್ನಡ ಕೊರೋನಾ ಮುಕ್ತ
ಬಳಿಕ ಸ್ಥಳಕ್ಕೆ ಬಂದಿದ್ದ ಅಬಕಾರಿ ಇನ್ಸ್‌ಪೆಕ್ಟರ್ ಹಾಗೂ ಕಾರು ಚಾಲಕನಿಂದ ಉಪ ಅಧೀಕ್ಷಕರ ಮೇಲೆ ಹಲ್ಲೆಯಾಗಿದೆ. ಅವಾಚ್ಯ ಶಬ್ದ ಬಳಸಿ ಅಬಕಾರಿ ಉಪ ನಿರೀಕ್ಷಕ, ಇನ್ಸ್‌ಪೆಕ್ಟರ್ ಕಿತ್ತಾಡಿಕೊಂಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
