Karnataka Assembly Election : ಎಲ್ಲರಿಗೂ ಟಿಕೆಟ್‌ ಕೇಳುವ ಹಕ್ಕಿದೆ : ಶಾಸಕ ವೆಂಕಟರಮಣಪ್ಪ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೀಸಲಾತಿ ಅನ್ವಯ ಎಲ್ಲರಿಗೂ ಟಿಕೆಟ್‌ ಕೇಳುವ ಹಕ್ಕಿದೆ. ಟಿಕೆಟ್‌ ಬಯಸಿ, ಬೆಂಗಳೂರಿನ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ ತಾಲೂಕಿನ ಎಲ್ಲಾ ಆಕಾಂಕ್ಷಿಗಳು ನಮ್ಮವರೇ. ಟಿಕೆಟ್‌ ವಿಚಾರದಲ್ಲಿ ರಾಜ್ಯ ಪ್ರದೇಶ್‌ ಕಾಂಗ್ರೆಸ್‌ ಸಮಿತಿ ಆದೇಶ ಮತ್ತು ತೀರ್ಮಾನಕ್ಕೆ ಬದ್ದರಾಗಿ ಕೆಲಸ ಮಾಡುವುದಾಗಿ ಶಾಸಕ ವೆಂಕಟರಮಣಪ್ಪ ಹೇಳಿದರು.

Everyone has the right to ask for a ticket  MLA Venkataramanappa snr

 ಪಾವಗಡ (ನ.16): ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೀಸಲಾತಿ ಅನ್ವಯ ಎಲ್ಲರಿಗೂ ಟಿಕೆಟ್‌ ಕೇಳುವ ಹಕ್ಕಿದೆ. ಟಿಕೆಟ್‌ ಬಯಸಿ, ಬೆಂಗಳೂರಿನ ಕೆಪಿಸಿಸಿಗೆ (KPCC)  ಅರ್ಜಿ ಸಲ್ಲಿಸಿದ ತಾಲೂಕಿನ ಎಲ್ಲಾ ಆಕಾಂಕ್ಷಿಗಳು ನಮ್ಮವರೇ. ಟಿಕೆಟ್‌ ವಿಚಾರದಲ್ಲಿ ರಾಜ್ಯ ಪ್ರದೇಶ್‌ ಕಾಂಗ್ರೆಸ್‌ ಸಮಿತಿ ಆದೇಶ ಮತ್ತು ತೀರ್ಮಾನಕ್ಕೆ ಬದ್ದರಾಗಿ ಕೆಲಸ ಮಾಡುವುದಾಗಿ ಶಾಸಕ ವೆಂಕಟರಮಣಪ್ಪ ಹೇಳಿದರು.

ರಾಜ್ಯ ಪ್ರದೇಶ ಕಾಂಗ್ರೆಸ್‌ (congress)  ಸಮಿತಿ ಆದೇಶದ ಹಿನ್ನೆಲೆ, ಮುಂಬರುವ ಪಾವಗಡ ವಿಧಾನಸಭೆಯ ಎಸ್‌ ಸಿ ಮೀಸಲು ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಟಿಕೆಟ್‌ ಬಯಸಿ, ಮಾಜಿ ಶಾಸಕ ಸೋಮ್ಲನಾಯಕ್‌ ಅವರ ಪುತ್ರಿ ಗಾಯಿತ್ರಿ ಬಾಯಿ, ಮುಖಂಡ ಕೋರ್ಚ್‌ ನರಸಪ್ಪ, ಸಮಾಜ ಸೇವಕ ಹನುಮಯ್ಯನ ಪಾಳ್ಯ ರಾಮಚಂದ್ರಪ್ಪ ತಾಲೂಕಿನ ಹಲವು ಮುಖಂಡರು ಶುಲ್ಕದೊಂದಿಗೆ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದರು.

ಈ ವಿಚಾರವಾಗಿ ಮಂಗಳವಾರ ಕೊಡ ಮಡಗು ಗ್ರಾಮದಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶಾಸಕ ವೆಂಕಟರಮಣಪ್ಪ ಪಾವಗಡ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಬಯಸಿ ಈಗಾಗಲೇ ನಾನು ಸಹ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದೇನೆ. ತಮ್ಮ ಪುತ್ರ ತಾಲೂಕು ಕಾಂಗ್ರೆಸ್‌ ಅಧ್ಯಕ್ಷ ಎಚ್‌.ವಿ.ವೆಂಕಟೇಶ್‌ ಸಹ ಇಲ್ಲಿನ ಕಾಂಗ್ರೆಸ್‌ ಟಿಕೆಟ್‌ ಬಯಸಿ ಕೆ ಪಿ ಸಿ ಸಿ ಗೆ ಅರ್ಜಿ ಸಲ್ಲಿಸಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಕ್ಷದ ಮಾನ ದಂಡ ಮತ್ತು ಮೀಸಲು ಅನ್ವಯ ಟಿಕೆಟ್‌ ಕೇಳುವ ಅರ್ಹತೆ ಎಲ್ಲ ಮುಖಂಡರಿಗೂ ಇರುತ್ತದೆ. ಈಗಾಗಲೇ ಇಲ್ಲಿನ ಕ್ಷೇತ್ರದ ಟಿಕೆಟ್‌ ಬಯಸಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ ಎಲ್ಲರೂ ನಮ್ಮವರೇ. ಪಕ್ಷ ತೀರ್ಮಾನಿಸಿದವರಿಗೆ, ಇಲ್ಲಿನ ಕಾಂಗ್ರೆಸ್‌ ಟಿಕೆಟ್‌ ಸಿಗಲಿದ್ದು, ಯಾರಿಗೆ ಟಿಕೆಟ್‌ ನೀಡಿದರೂ ಪಕ್ಷದ ಹಿರಿಯರ ಮಾರ್ಗದರ್ಶನ ಹಾಗೂ ಪಕ್ಷದ ತತ್ವ ಸಿದ್ದಾಂತಗಳಿಗೆ ಬದ್ದರಾಗಿ ಕೆಲಸ ಮಾಡಲಿರುವುದಾಗಿ ಹೇಳಿದರು.

40ರಷ್ಟು ಕಾಂಗ್ರೆಸ್ ಶಾಸಕರಿ ಅರ್ಜಿ  ಹಾಕಿಲ್ಲ

ಬೆಂಗಳೂರು(ನ.16):  ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಮಂಗಳವಾರ ಕೊನೆಯ ದಿನ ಎಂಬುದು ಘೋಷಣೆಯಾಗಿದ್ದರೂ, ಪಕ್ಷದ ಹಾಲಿ ಶಾಸಕರ ಪೈಕಿ ಶೇ.35ರಿಂದ 40ರಷ್ಟು ಮಂದಿ ಇನ್ನೂ ಅರ್ಜಿ ಸಲ್ಲಿಸಿಲ್ಲ ಎಂಬ ಕುತೂಹಲದ ಅಂಶ ತಿಳಿದು ಬಂದಿದೆ. ಇದರ ಬೆನ್ನಲ್ಲೇ ಕೊನೆಗೆ, ಅರ್ಜಿ ಸಲ್ಲಿಕೆಯ ಅವಧಿಯನ್ನು ಈ ತಿಂಗಳ 21ರವರೆಗೆ ಅಂದರೆ, ಒಂದು ವಾರ ಕಾಲ ವಿಸ್ತರಿಸಲು ಕೆಪಿಸಿಸಿ ನಿರ್ಧರಿಸಿದೆ.

‘ಈ ಮೊದಲು ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ನ.15 ಕೊನೆಯ ದಿನವಾಗಿತ್ತು. ಆದರೆ, ನಿರೀಕ್ಷೆಗೂ ಮೀರಿದ ಆಕಾಂಕ್ಷಿಗಳಿದ್ದು ವಿಪರೀತ ಒತ್ತಡ ಇರುವುದರಿಂದ ಈ ಕಾಲಾವಕಾಶವನ್ನು ವಿಸ್ತರಿಸಲಾಗಿದೆ. ಅದರಂತೆ ಅರ್ಜಿ ಸಲ್ಲಿಸಲು ಮತ್ತು ಸ್ವೀಕರಿಸಲು ಇದ್ದ ಕೊನೆಯ ದಿನಾಂಕವನ್ನು ನ.21ರ ಸಂಜೆ 6 ಗಂಟೆವರೆಗೆ ವಿಸ್ತರಿಸಲಾಗಿದೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೋಲಾರದಲ್ಲಿ ಸಿದ್ದರಾಮಯ್ಯಗೆ ಗೆಲುವು ಸುಲಭವಿಲ್ಲ: ಸುಧಾಕರ್‌

ಸಿದ್ದು ಸೇರಿ 25 ಶಾಸಕರಿಂದ ಸಲ್ಲಿಕೆ ಇಲ್ಲ:

ಕೆಪಿಸಿಸಿ ಮೂಲಗಳ ಪ್ರಕಾರ ಈ ವರೆಗೆ 1150 ಮಂದಿ ಆಕಾಂಕ್ಷಿಗಳು ವಿವಿಧ ಕ್ಷೇತ್ರಗಳಿಗೆ ಟಿಕೆಟ್‌ ಬಯಸಿ ಪಕ್ಷದಿಂದ ಅರ್ಜಿ ಪಡೆದುಕೊಂಡಿದ್ದಾರೆ. ಆದರೆ, ಈ ಪೈಕಿ 900ಕ್ಕೂ ಹೆಚ್ಚು ಮಂದಿ ಅರ್ಜಿ ಭರ್ತಿ ಮಾಡಿ ಪಕ್ಷಕ್ಕೆ ವಾಪಸ್‌ ಸಲ್ಲಿಸಿದ್ದಾರೆ. ಪ್ರಸ್ತುತ ಪಕ್ಷದ ಶಾಸಕರ ಬಲ 70. ಈ ಪೈಕಿ ಇದರಲ್ಲಿ 40ಕ್ಕೂ ಹೆಚ್ಚು ಮಂದಿ ಹಾಲಿ ಶಾಸಕರು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸೇರಿದಂತೆ ಇನ್ನೂ 25ಕ್ಕೂ ಹೆಚ್ಚು ಶಾಸಕರು ಅರ್ಜಿ ಸಲ್ಲಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನಲ್ಲೀಗ ಒಗ್ಗ​ಟ್ಟು ಪ್ರದ​ರ್ಶನ: ಸಾಮೂ​ಹಿಕ ನಾಯ​ಕ​ತ್ವದ ಮಂತ್ರ ಜಪ..!

ಡಿಕೆಶಿ ಪರ ಅರ್ಜಿ ಸಲ್ಲಿಕೆ:

ಈ ಮಧ್ಯೆ ಪಕ್ಷದ ಆದೇಶದ ಪ್ರಕಾರ ಅರ್ಜಿ ಸಲ್ಲಿಸಲು ಮಂಗಳವಾರ ಕೊನೆಯ ದಿನವಾಗಿದ್ದ ಕಾರಣ ಹಲವು ಆಕಾಂಕ್ಷಿಗಳು ಖುದ್ದಾಗಿ ಹಾಗೂ ಇನ್ನು ಕೆಲ ಆಕಾಂಕ್ಷಿಗಳ ಪರವಾಗಿ ಅವರ ಬೆಂಬಲಿಗರು ಟಿಕೆಟ್‌ ಕೋರಿ ಅರ್ಜಿ ಸಲ್ಲಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಪರವಾಗಿ ಅವರ ಬೆಂಬಲಿಗರು ಕನಕಪುರ ಕ್ಷೇತ್ರಕ್ಕೆ ಟಿಕೆಟ್‌ ಕೋರಿ ಕೆಪಿಸಿಸಿ ಕಾರ್ಯದರ್ಶಿ ಅವರಿಗೆ ಅರ್ಜಿ ಸಲ್ಲಿಸಿದರು. ಅಲ್ಲದೆ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಮತ್ತೆ ಸಾಗರ ಕ್ಷೇತ್ರದಿಂದ ಸ್ಪರ್ಧಿಸಲು ಅರ್ಜಿ ಸಲ್ಲಿಸಿದ್ದಾರೆ. ಜತೆಗೆ ಅವರ ಪುತ್ರಿ ರಾಜನಂದಿನಿ ಕೂಡ ಇದೇ ಕ್ಷೇತ್ರದ ಟಿಕೆಟ್‌ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಇದು ಸಂಚಲನ ಮೂಡಿಸಿದೆ. ತಂದೆ ಮಗಳು ಇಬ್ಬರಲ್ಲಿ ಯಾರಿಗೆ ಟಿಕೆಟ್‌ ಸಿಗುತ್ತದೋ ಅವರು ಚುನಾವಣೆಗೆ ಸ್ಪರ್ಧಿಸುವ ಲೆಕ್ಕಾಚಾರದಿಂದ ಇಬ್ಬರೂ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

Latest Videos
Follow Us:
Download App:
  • android
  • ios