ಬೆಂಗಳೂರು(ಏ.07): ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಪ್ರತಿ 5 ನಿಮಿಷಕ್ಕೊಮ್ಮೆ ಮೆಟ್ರೋ ರೈಲು ಓಡಿಸಲು ಬಿಎಂಆರ್‌ಸಿಎಲ್‌ ನಿರ್ಧರಿಸಿದೆ.

ಮಂಗಳವಾರ ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ಬೈಯ್ಯಪ್ಪನಹಳ್ಳಿ-ಮೈಸೂರು ರಸ್ತೆ ಮೆಟ್ರೋ ನಿಲ್ದಾಣ (ನೇರಳೆ ಮಾರ್ಗ) ನಡುವೆ ಪ್ರತಿ 4.5 ನಿಮಿಷಕ್ಕೆ ಮತ್ತು ನಾಗಸಂದ್ರ- ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣ (ಹಸಿರು ಮಾರ್ಗ) ನಡುವೆ ಪ್ರತಿ 5 ನಿಮಿಷಕ್ಕೆ ಒಂದು ಮೆಟ್ರೋ ರೈಲು ಸಂಚರಿಸಲಿದೆ. ಟೋಕನ್‌ ಬಳಕೆಗೆ ಅವಕಾಶ ನೀಡಲಾಗಿಲ್ಲ. ಸಾರ್ವಜನಿಕರು ಮೆಟ್ರೋ ಸ್ಮಾರ್ಟ್‌ ಕಾರ್ಡ್‌ ಬಳಸಿ ಪ್ರಯಾಣಿಸಬಹುದಾಗಿದೆ ಎಂದು ಮೆಟ್ರೋ ರೈಲು ನಿಗಮ ಪ್ರಕಟಿಸಿದೆ.

ನಿಮ್ಮ ಮಗನಾಗಿ ಕೋರುವೆ, ಕೆಲಸಕ್ಕೆ ಬನ್ನಿ: ಸವದಿ

ಕೋವಿಡ್‌ ಕಾರಣದಿಂದ ಲಾಕ್‌ಡೌನ್‌ ಆಗಿದ್ದ ಸಂದರ್ಭದಲ್ಲಿ ಮೆಟ್ರೋ ರೈಲು ಓಡಾಟ ಸ್ಥಗಿತವಾಗಿತ್ತು. ಸೆಪ್ಟೆಂಬರ್‌ 7ರಿಂದ ಮೆಟ್ರೋ ಓಡಾಟ ಪುನರಾರಂಭಗೊಂಡ ಬಳಿಕ ಬೆಳಗ್ಗೆ ಮತ್ತು ಸಂಜೆ ಪ್ರತಿ 5 ನಿಮಿಷಕ್ಕೆ ಹಾಗೂ ಮಧ್ಯಾಹ್ನ ಪ್ರತಿ 10 ನಿಮಿಷಕ್ಕೊಂದು ಮೆಟ್ರೋ ಓಡಾಟ ನಡೆಸುತ್ತಿತ್ತು.