ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್‌ಸಿಟಿ ಕಾಮಗಾರಿಗಳು ಜನರ ಕಣ್ಣಿಗೆ ಕಳಪೆಯಾಗಿ ಕಂಡರೆ, ಶಾಸಕ ಕೆ.ಎಸ್‌.ಈಶ್ವರಪ್ಪ ಅವರಿಗೆ ಉತ್ತಮ ರೀತಿಯಲ್ಲಿ ಕಾಣುತ್ತಿವೆ. ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿಗಳು ಹಳ್ಳ ಹಿಡಿದರೂ ಈಶ್ವರಪ್ಪ ಅವರು ಸ್ಮಾರ್ಟ್‌ಸಿಟಿ ಕಾಮಗಾರಿಗಳು ಚೆನ್ನಾಗಿ ನಡೆದಿರುವು​ದಾಗಿ ಸರ್ಟಿಫಿಕೇಟ್‌ ನೀಡಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಹಾಗೂ ಚುನಾ​ವಣೆ ಟಿಕೆಟ್‌ ಆಕಾಂಕ್ಷಿ ಎಸ್‌.ಕೆ.ಮರಿಯಪ್ಪ ಹರಿಹಾಯ್ದರು.

ಶಿವಮೊಗ್ಗ (ಫೆ.10) : ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್‌ಸಿಟಿ ಕಾಮಗಾರಿಗಳು ಜನರ ಕಣ್ಣಿಗೆ ಕಳಪೆಯಾಗಿ ಕಂಡರೆ, ಶಾಸಕ ಕೆ.ಎಸ್‌.ಈಶ್ವರಪ್ಪ ಅವರಿಗೆ ಉತ್ತಮ ರೀತಿಯಲ್ಲಿ ಕಾಣುತ್ತಿವೆ. ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿಗಳು ಹಳ್ಳ ಹಿಡಿದರೂ ಈಶ್ವರಪ್ಪ ಅವರು ಸ್ಮಾರ್ಟ್‌ಸಿಟಿ ಕಾಮಗಾರಿಗಳು ಚೆನ್ನಾಗಿ ನಡೆದಿರುವು​ದಾಗಿ ಸರ್ಟಿಫಿಕೇಟ್‌ ನೀಡಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಹಾಗೂ ಚುನಾ​ವಣೆ ಟಿಕೆಟ್‌ ಆಕಾಂಕ್ಷಿ ಎಸ್‌.ಕೆ.ಮರಿಯಪ್ಪ ಹರಿಹಾಯ್ದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾಮಗಾರಿಗಳನ್ನು ನೋಡದೇ ಅಧಿಕಾರಿಗಳ ಪರವಹಿಸಿ ಶಾಸಕ ಕೆ.ಎಸ್‌.ಈಶ್ವರಪ್ಪ(MLA KS Eshwarappa) ಮಾತನಾಡುತ್ತಾರೆಂದರೆ, ಇದರಲ್ಲಿ ಅವರ ರಾಜಕೀಯ ಹಿತಾಸಕ್ತಿ ಕಂಡುಬರುತ್ತದೆ. ಕೂಡಲೇ ಕಳಪೆ ಕಾಮಗಾರಿ (Poor work)ಗಳ ತನಿಖೆ ನಡೆಸಬೇಕು. ಇದಕ್ಕಾಗಿ ನಾಗರಿಕರೂ ಸೇರಿದಂತೆ ಸರ್ವಪಕ್ಷಗಳ ಸಮಿತಿ ರಚಿಸಿ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು. 

ರೈತರ ಸಮಗ್ರ ಅಭಿ​ವೃ​ದ್ಧಿಗೆ ಯೋಜನೆಗಳು ಜಾರಿ: ಸಂಸದ ರಾಘ​ವೇಂದ್ರ

ನಗರದ ಸ್ಮಾರ್ಟ್‌ಸಿಟಿ (Smart city)ಕಾಮಗಾರಿಗಳೆಲ್ಲ ಅವ್ಯವಸ್ಥೆಯ ಆಗರವಾಗಿವೆ. ಸರಿಯಾಗಿ ಕಾಮ​ಗಾರಿ ನಡೆಸದೇ ಅಧಿಕಾರಿಗಳು ಮತ್ತು ಶಾಸಕರು ಜನತೆಗೆ ದ್ರೋಹ ಬಗೆದಿದ್ದಾರೆ. ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ರಸ್ತೆಗಳೆಲ್ಲ ಹಾಳಾಗಿವೆ. ರಸ್ತೆಯ ಮೇಲೆಯೇ ಮ್ಯಾನ್‌ಹೋಲ್‌ಗಳಿದ್ದು, ಸರಿಯಾಗಿ ನಿರ್ವಹಣೆ ಮಾಡಿಲ್ಲ. ಫುಟ್‌ಪಾತ್‌ಗಳಂತೂ ಹಾಳಾಗಿಹೋಗಿವೆ. ಅಳವಡಿಸಿದ ಕಲ್ಲುಗಳು ಮೇಲೆದ್ದಿವೆ. ಬಾಕ್ಸ್‌ ಚರಂಡಿಗಳ ಸ್ಥಿತಿಯೂ ಅದೇ ಆಗಿದೆ. ವಾಹನಗಳು, ಪಾದಚಾರಿಗಳು ಓಡಾಡುವುದೇ ಕಷ್ಟವಾಗಿದೆ ಎಂದು ಆರೋಪಿಸಿದರು.

ರಸ್ತೆಯ ಇಕ್ಕೆಲಗಳಲ್ಲಿ ಅಳವಡಿಸಲಾದ ವಿದ್ಯುತ್‌ ಸಂಪರ್ಕದ ಬಾಕ್ಸ್‌ಗಳಂತೂ ಬಾಯಿ ತೆರೆದುಕೊಂಡಿವೆ. ಕರುಳು ಪಚ್ಚಿಯಂತೆ ವೈರುಗಳು ಹೊರಕ್ಕೆ ಬಂದಿವೆ. ಅಪಘಾತದ ಭಯ ಹೆಚ್ಚಿದೆ. ಪಾತ್‌ ವೇಗಳು ಹಾಳಾಗಿವೆ. ಗುತ್ತಿಗೆದಾರು ಬೇಕಾಬಿಟ್ಟಿಕೆಲಸ ಮಾಡಿದ್ದಾರೆ. ಸಾರ್ವಜನಿಕರ ಹಣ ಪೋಲಾಗಿದೆ. ಮೆಸ್ಕಾಂನ ಭೂಗತ ಕೇಬಲ್‌ ಅಳವಡಿಕೆ ಕೂಡ ಸರಿಯಾಗಿ ನಡೆದಿಲ್ಲ ಎಂದು ದೂರಿದರು.

ನಿರಂತರ ಕುಡಿಯುವ ನೀರಿನ ಯೋಜನೆ ಕೂಡ ಸಮರ್ಪಕವಾಗಿಲ್ಲ. 24/7 ಕುಡಿಯುವ ನೀರಿನ ಯೋಜನೆ ಹಳ್ಳ ಹಿಡಿದಿದೆ. ಮನೆಗೆ ಸಂಪರ್ಕಗೊಳಿಸಿರುವ ಪೈಪ್‌ ಲೈನ್‌ಗಳು ಸರಿಯಾಗಿಲ್ಲ. ಮೀಟರುಗಳು ಕೂಡ ದೋಷಪೂರಿತವಾಗಿವೆ. ಇದರಿಂದ ನೀರಿನ ಬಿಲ್‌ ಕೂಡ ಹೆಚ್ಚಾಗಿದೆ. ನೀರಿಲ್ಲದೇ ಗಾಳಿ ಬಂದರೂ ಮೀಟರ್‌ ಓಡುತ್ತದೆ. ಒಟ್ಟಾರೆ ಇದೊಂದು ದುರವಸ್ಥೆಯ ಆಡಳಿತಕ್ಕೆ ಸಾಕ್ಷಿ ಎಂದು ಅಸ​ಮಾ​ಧಾನ ವ್ಯಕ್ತ​ಪ​ಡಿ​ಸಿ​ದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಉಮಾಶಂಕರ ಉಪಾಧ್ಯ, ಸುನಿಲ್‌, ತಾರಾನಾಥ್‌, ಉಮೇಶ್‌, ಪ್ರಭಾಕರ ಗೌಡ, ಬಾಲಾಜಿ, ರಘುವೀರ ಸಿಂಘ್‌, ರಘು, ಮಲ್ಲಿಕಾರ್ಜುನ, ಚಿನ್ನಪ್ಪ ಮತ್ತಿತರರಿದ್ದರು.

ವಿಮಾನ ನಿಲ್ದಾಣಕ್ಕೆ ಬಿಎಸ್‌ವೈ ಹೆಸರು, ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆ: ಸಿಎಂ ಬೊಮ್ಮಾಯಿ

ಶಿವಮೊಗ್ಗ ನಗರ ವಿಧಾ​ನ​ಸಭಾ ಕ್ಷೇತ್ರಕ್ಕೆ ನಾನೂ ಕೂಡ ಪ್ರಬಲ ಆಕಾಂಕ್ಷಿ. ಈ ಬಾರಿ ಟಿಕೆಟ್‌ ಸಿಗುವ ನಿರೀಕ್ಷೆ ಹೆಚ್ಚಿದೆ. ಬಿಜೆಪಿಯಿಂದ ಈಶ್ವರಪ್ಪ ಅಲ್ಲ, ಬೇರೆ ಯಾರಿಗೇ ಟಿಕೆಟ್‌ ನೀಡಿದರೂ ನಾನು ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಲು ಸಿದ್ಧ. ಮೇಯರ್‌ ಆಗಿ, ನಗರಸಭಾ ಸದಸ್ಯನಾಗಿ, ಪಾಲಿಕೆ ಸದಸ್ಯನಾಗಿ ಸಾಕಷ್ಟುಅಭಿವೃದ್ಧಿ ಕೆಲಸ ಮಾಡಿದ್ದೇನೆ. ಹಲವು ವರ್ಷಗಳಿಂದ ಕುರುಬ ಜನಾಂಗಕ್ಕೆ ಶಿವಮೊಗ್ಗದಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್‌ ಸಿಕ್ಕಿಲ್ಲ. ಈ ಬಾರಿ ತವåಗೆ ಸಿಗಬಹುದು ಎಂಬ ವಿಶ್ವಾಸವಿದೆ

- ಎಸ್‌.ಕೆ.ಮರಿಯಪ್ಪ, ಕಾಂಗ್ರೆಸ್‌ ಮುಖಂಡ