Asianet Suvarna News Asianet Suvarna News

ಬಿಜೆಪಿಯದು ನಕಲಿ ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿ: ಈಶ್ವರ ಖಂಡ್ರೆ

ಬಿಜೆಪಿ ಮುಖಂಡರು ಸುಳ್ಳು ಭರವಸೆ ನೀಡುವ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ| ಅಧಿಕಾರದ ಆಸೆಯಿಂದ ಆಪರೇಷನ್‌ ಕಮಲ ಮಾಡಿದರು| ಅನರ್ಹ ಶಾಸಕರು ತಮ್ಮ ಮತದಾರರನ್ನು ಕೇಳದೇ ಬಿಜೆಪಿ ಹೋಗಿ ಮತದಾರರಿಗೆ ದ್ರೋಹ ಮಾಡಿದ್ದಾರೆ| ಪ್ರಜಾಪ್ರಭುತ್ವದ ಕಗ್ಗೂಲೆಯಾಗಿದೆ| ಕಾಂಗ್ರೆಸ್‌ ಪಕ್ಷ ಸಾಮಾಜಿಕ ನ್ಯಾಯ ಪರಿಪಾಲನೆ ಮಾಡುತ್ತಿದೆ ಎಂದ ಖಂಡ್ರೆ| 

Eshwar Khandre Angry on BJP
Author
Bengaluru, First Published Nov 27, 2019, 7:36 AM IST

ರಾಣಿಬೆನ್ನೂರು(ನ.27): ಮೋದಿ ಆಳ್ವಿಕೆಯಲ್ಲಿ ಉದ್ಯೋಗ ಸೃಷ್ಟಿಯಾಗುವ ಬದಲು ನಷ್ಟವಾಗಿದೆ. ಬಿಜೆಪಿಯದು ನಕಲಿ ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರ ಹೇಳಿದ್ದಾರೆ. \

ಇಲ್ಲಿನ ನಗರಸಭಾ ಕ್ರೀಡಾಂಗಣದಲ್ಲಿ ಸ್ಥಳೀಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ. ಕೋಳಿವಾಡ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಮುಖಂಡರು ಸುಳ್ಳು ಭರವಸೆ ನೀಡುವ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ. ಅಧಿಕಾರದ ಆಸೆಯಿಂದ ಆಪರೇಷನ್‌ ಕಮಲ ಮಾಡಿದರು. ಅನರ್ಹ ಶಾಸಕರು ತಮ್ಮ ಮತದಾರರನ್ನು ಕೇಳದೇ ಬಿಜೆಪಿ ಹೋಗಿ ಮತದಾರರಿಗೆ ದ್ರೋಹ ಮಾಡಿದ್ದಾರೆ. ಒಟ್ಟಾರೆ ಪ್ರಜಾಪ್ರಭುತ್ವದ ಕಗ್ಗೂಲೆಯಾಗಿದೆ. ಕಾಂಗ್ರೆಸ್‌ ಪಕ್ಷ ಸಾಮಾಜಿಕ ನ್ಯಾಯ ಪರಿಪಾಲನೆ ಮಾಡುತ್ತಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಚುನಾವಣೆಯ ಅವಧಿಯಲ್ಲಿ ನೀಡಿದ 165 ಭರವಸೆಗಳನ್ನು ಈಡೇರಿಸಿದೆ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ. ಕೋಳಿವಾಡ ಅವರನ್ನು ಬೆಂಬಲಿಸಬೇಕು ಎಂದರು.
ವಿಧಾನ ಪರಿಷತ್‌ ವಿಪಕ್ಷ ನಾಯಕ ಎಸ್‌.ಆರ್‌. ಪಾಟೀಲ ಮಾತನಾಡಿ, ಅನರ್ಹ ಶಾಸಕರನ್ನು ಆಯ್ಕೆ ಮಾಡಿದರೆ ಸಚಿವರನ್ನಾಗಿಸುವ ಯಡಿಯೂರಪ್ಪ ಹೇಳಿಕೆ ಚುನಾವಣಾ ನೀತಿ ಸಂಹಿತೆಯ ಸ್ಪಷ್ಟಉಲ್ಲಂಘನೆಯಾಗಿದೆ. ಚುನಾವಣಾ ಆಯೋಗ ಇದರ ಬಗ್ಗೆ ಸ್ವಯಂಪ್ರೇರಿತ ಕ್ರಮ ಕೈಗೊಂಡು ದೂರು ದಾಖಲಿಸಬೇಕು. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಾಗಲು ಕಾಂಗ್ರೆಸ್‌ ಕಾರಣವಾಗಿದೆ. ಆಹಾರ ಭದ್ರತೆ ಕಾಯ್ದೆ ಯುಪಿಎ ಸರ್ಕಾರದ ಕೊಡುಗೆಯಾಗಿದೆ. ಈ ಉಪಚುನಾವಣೆಯಲ್ಲಿ ಬಿಜೆಪಿ ಸರ್ಕಾರ 8 ಸ್ಥಾನಗಳಲ್ಲಿ ಗೆಲ್ಲದೇ ಹೋದರೆ ಮಣ್ಣು ಮುಕ್ಕುವುದು ಖಚಿತ ಎಂದರು.

ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ. ಕೋಳಿವಾಡ ಮಾತನಾಡಿ, ಕಳೆದ 50ವರ್ಷಗಳಿಂದ ಕ್ಷೇತ್ರದ ಸೇವೆಯನ್ನು ಮಾಡಿದ್ದು, ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡಿದ್ದೇನೆ. ಮುದೇನೂರು ಬಳಿ ಬ್ಯಾರೇಜ್‌ ನಿರ್ಮಾಣ ಹಾಗೂ ಉಪವಿಭಾಗ ಕಚೇರಿ ಆರಂಭಿಸುವುದು ಮಾತ್ರ ಉಳಿದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟುಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಕ್ಷೇತ್ರದ ಜನರು ಆಶೀರ್ವದಿಸಬೇಕು ಎಂದರು.
ಪ್ರಚಾರ ಸಭೆಗೆ ಆಗಮಿಸುವ ಮುನ್ನ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ. ಕೋಳಿವಾಡ ಜತೆ ನಗರದ ದನದ ಮಾರುಕಟ್ಟೆಬಳಿಯಿಂದ ಭರ್ಜರಿ ರೋಡ್‌ ಶೋ ನಡೆಸಿದರು. ಯುವಕರು ಬೈಕ್‌ ರಾರ‍ಯಲಿ ಮೂಲಕ ಸ್ವಾಗತ ಕೋರಿದರು.

ಮಾಜಿ ಸಚಿವರಾದ ಎಚ್‌. ಆಂಜನೇಯ, ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ಹರಿಹರ ಶಾಸಕ ರಾಮಪ್ಪ, ಜಿ.ಎಸ್‌. ಪಾಟೀಲ, ಎಂ.ಡಿ. ಲಕ್ಷ್ಮಿನಾರಾಯಣ, ಬಿ.ಆರ್‌. ಯಾವಗಲ್‌, ಐ.ಜಿ. ಸನದಿ, ಪ್ರಕಾಶ ಕೋಳಿವಾಡ, ಸಿ.ಎಸ್‌. ನಾಡಗೌಡ್ರ, ಅಪ್ಪಾಜಿ ನಾಡಗೌಡ್ರ, ಜಲಜಾನಾಯಕ, ಎಚ್‌.ಎಂ. ಹಿಂಡಸಗೇರಿ, ಉಮಾಪತಿ, ಶಾಸಕಿ ಕುಸಮಾ ಶಿವಳ್ಳಿ, ಆರ್‌.ಎಂ. ಕುಬೇರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.

Follow Us:
Download App:
  • android
  • ios