ಮೂಲ್ಕಿ(ಮಾ.09):  ಮೂಲ್ಕಿ ಸಮೀಪದ ಸಮೀಪದ ಸಸಿಹಿತ್ಲುವಿನಲ್ಲಿರುವ ಅಂತಾರಾಷ್ಟ್ರೀಯ ಸರ್ಫಿಂಗ್‌ ಖ್ಯಾತಿಯ ಮುಂಡಾ ಬೀಚ್‌ ಸಮುದ್ರ ಪಾಲಾಗುತ್ತಿದ್ದು, ನಿರಂತರ ಕಡಲ್ಕೊರೆತ ಮುಂದುವರಿದಲ್ಲಿ ಮುಂಡಾ ಬೀಚ್‌ ಉಳಿಯುವ ಸಾಧ್ಯತೆ ಕಡಿಮೆಯಾಗಲಿದೆ.

ಕಳೆದ ಒಂದು ವರ್ಷದಿಂದ ಸಸಿಹಿತ್ಲುವಿನ ಮುಂಡಾ ಬೀಚ್‌ನಲ್ಲಿ ಕಡಲ್ಕೊರೆತ ಆರಂಭಗೊಂಡಿದ್ದು, ಈಗಾಗಲೇ ಬೀಚ್‌ ತೀರದಲ್ಲಿದ್ದ ಅಂಗಡಿಗಳು ಸಮುದ್ರ ಪಾಲಾಗಿದೆ. ಭಾನುವಾರ ಮುಂಡಾ ಬೀಚ್‌ನಲ್ಲಿ ತೀವ್ರ ಕಡಲ್ಕೊರೆತ ಕಂಡುಬಂದಿದ್ದು, ಸಮುದ್ರ ತೀರದ ಒಂಭತ್ತು ಮರಗಳು, ಬೀಚ್‌ ತೀರದಲ್ಲಿದ್ದ ಎರಡು ಕಸದ ತೊಟ್ಟಿಹಾಗೂ ಪ್ರವಾಸಿಗರು ಕುಳಿತುಕೊಳ್ಳುವ ಸಿಮೆಂಟ್‌ ಬೆಂಚ್‌ ನೀರುಪಾಲಾಗಿದೆ. ಬೀಚ್‌ ಬಳಿ ಮೂರು ಅಂಗಡಿಗಳಿದ್ದು, ಎರಡು ಅಂಗಡಿಗಳು ಈಗಾಗಲೇ ಸಮುದ್ರ ಪಾಲಾಗಿದೆ. ಉಳಿದ ಒಂದು ಅಂಗಡಿ ಸಮುದ್ರ ಪಾಲಾಗಲು ಕ್ಷಣಗಣನೆ ಮಾಡುತ್ತಿದೆ ಎಂದು ಪಂಚಾಯಿತಿ ಸದಸ್ಯ ಚಂದ್ರಕುಮಾರ್‌ ಹೇಳಿದರು.

ಕೊರಗಜ್ಜನ ನಂಬ್ರಿ ಕಷ್ಟವೆಲ್ಲ ದೂರು ಆಗುತೈತಿ; ಸ್ವಾಮಿ ಶಕ್ತಿಯಲ್ಲಿ ನಡೆದ ಪವಾಡಗಳಿವು! ...

ತೀವ್ರ ಗಾಳಿ ನಡುವೆ ಸಮುದ್ರ ಅಲ್ಲೋಲಕಲ್ಲೋಲವಾಗಿದ್ದು, ಕಡಲ್ಕೊರೆತ ತಡೆಯಲು ಹಾಕಿರುವ ಕಲ್ಲುಗಳು ನೀರುಪಾಲಾಗಿವೆ. ಇನ್ನೆರಡು ದಿನ ಬಿರುಸಿನ ಗಾಳಿ ಹೀಗೆಯೇ ಮುಂದುವರಿದು ಕಡಲ್ಕೊರೆತ ಉಂಟಾದರೆ ಮುಂಡಾ ಬೀಚ್‌ ಪೂರ್ತಿ ಕಡಲು ಸೇರುವ ಸಾಧ್ಯತೆ ಇದೆ. ಭಾನುವಾರ ರಜಾ ದಿನವಾದ ಕಾರಣ ಬೀಚ್‌ ಬಳಿ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಸೇರಿದ್ದು, ಅವರ ಕಣ್ಮುಂದೆಯೇ ಬೀಚ್‌ ನೀರು ಪಾಲಾಗುತ್ತಿರುವುದನ್ನು ಕಂಡು ಭಯಭೀತರಾಗಿದ್ದಾರೆ. ಮುಂಡಾ ಬೀಚ್‌ ಬಳಿ ತಡೆಗೋಡೆ ನಿರ್ಮಾಣ, ಅಭಿವೃದ್ಧಿ ಬಗ್ಗೆ ಜನ ಪ್ರತಿನಿಧಿಗಳು ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂಡಾ ಬೀಚ್‌ ಉಳಿಸಲು ಅಸಾಧ್ಯ ಎಂದು ತಿಳಿಸಿದ್ದಾರೆ.