ಕೊರಗಜ್ಜನ ನಂಬ್ರಿ ಕಷ್ಟವೆಲ್ಲ ದೂರು ಆಗುತೈತಿ; ಸ್ವಾಮಿ ಶಕ್ತಿಯಲ್ಲಿ ನಡೆದ ಪವಾಡಗಳಿವು!
First Published Feb 21, 2021, 1:18 PM IST
ತುಳುನಾಡ ಆರಾಧ್ಯ ದೈವ ಕೊರಗಜ್ಜ ಬಗ್ಗೆ ಎಷ್ಟು ಹೇಳಿದರೂ ಸಾಲದು. ಯಾವುದೇ ಸಮಸ್ಯೆ ಎದುರಾದರೂ ಮೊದಲು ಹರಕೆ ಹೊತ್ತುಕೊಳ್ಳುವುದು ಕೊರಗಜ್ಜನಿಗೆ. ಅಷ್ಟಕ್ಕೂ ತುಳುನಾಡಿನ ಜನ ಅಜ್ಜನನ್ನು ಅಷ್ಟೊಂದು ನಂಬುದುದೇಕೆ?
ಫೋಟೋಕೃಪೆ: ಇನ್‌ಸ್ಟಾಗ್ರಂ

ಕೊರಗಜ್ಜನ ಮೂಲಸ್ಥಾನ ಮಂಗಳೂರು ಸಮೀಪದ ಕುತ್ತಾರು.

ಜನರು ತಮ್ಮ ವಸ್ತು ಕಳೆದು ಹೋದರೆ ಮೊದಲು ತಾವಿದ್ದ ಜಾಗದಲ್ಲೇ ಕಾರ್ಣಿಕೆ ಪುರುಷ ಕೊರಗಜ್ಜನ ನೆನೆದು ಭಕ್ತಿಯಿಂದ ಪ್ರಾರ್ಥಿಸಿಕೊಳ್ಳುತ್ತಾರೆ.

ಕಳುವಾದ ವಸ್ತು ಮಾತ್ರವಲ್ಲ ಅದೆಷ್ಟೇ ಕಷ್ಟ ಬಂದರೂ ಕಣ್ಣು ಮುಚ್ಚಿ ಕೊರಗಜ್ಜನ ಹೆಸರು ಕೂಗಿದರೆ ಸಾಕು, ಎಲ್ಲ ಕಷ್ಟಗಳು ಮಾಯಾವಾಗುತ್ತವೆ ಎನ್ನುವ ನಂಬಿಕೆ ಇದೆ.

ಕೊರಗಜ್ಜನ ಭಕ್ತರು ಕುತ್ತಾರು ಅಜ್ಜನ ಕಟ್ಟೆಯ ಬಳಿ ರಾತ್ರಿ ವಾಹನ ಚಲಾಯಿಸುವಾಗ ಹೆಡ್‌ಲೈಟ್ ಹಾಕುವುದಿಲ್ಲ. ಕೋಲ ನಡೆಯುವ ಸಂದರ್ಭದಲ್ಲಿ ಅಗರಬತ್ತಿಯ ಬೆಳಕು ಕೂಡ ಕಾಣಬಾರದು ಎಂದ ಮಾತಿದೆ.

ಅಜ್ಜನಿಗೆ ಮಾಡುವ ಅಗೇಲು ಹಾಗೂ ಕೋಲ ಸೇವೆ ನಡೆಯುವ ಸಮಯದಲ್ಲಿ ದೀಪ ಹಚ್ಚುವಂತಿಲ್ಲ, ಈ ಮಾರ್ಗದಲ್ಲಿ ಚಲಿಸುವ ಪ್ರತಿಯೊಬ್ಬರೂ ಲೈಟ್ ಡಿಮ್ ಮಾಡಿಕೊಳ್ಳುತ್ತಾರೆ. ಇಲ್ಲವಾದರೆ ಕತ್ತಲಲ್ಲೇ ವಾಹನ ಚಾಲನೆ ಮಾಡುತ್ತಾರೆ.

ಅಗೇಲು ಸೇವಿಯಲ್ಲಿ ಅಜ್ಜನಿಗೆ ಹುರಳಿ ಹಾಗೂ ಬಸಳೆ, ಮೀನಿನ ಪದಾರ್ಥ, ಕೋಳಿ, ಉಪ್ಪುನ ಕಾಯಿಯನ್ನು ಬಾಳೆ ಎಲೆಯ ಮೇಲೆ ಬಡಿಸಲಾಗುತ್ತದೆ. ಕೊರಗಜ್ಜನ ಕಟ್ಟೆಯ ಬಳಿ ರಾತ್ರಿ 7 ಗಂಟೆ ನಂತರ ಮಹಿಳೆಯರಿಗೆ ಪ್ರವೇಶವಿಲ್ಲ.

ಇತ್ತೀಚಿಗೆ ನಟ ದರ್ಶನ್ ಹಾಗೂ ವಿಜಯ ರಾಘವೇಂದ್ರ ಕುಟುಂಬದವರು ಕೊರಗಜ್ಜನಿಗೆ ಪೂಜೆ ಸಲ್ಲಿಸಿದ್ದರು.