Asianet Suvarna News Asianet Suvarna News

Weekend Curfew : ಮೇಕೆ​ದಾಟು ಸೇರಿ​ ಪ್ರವಾಸಿ ತಾಣಗಳಿಗೆ ನಿರ್ಬಂಧ

  • ಮೇಕೆ​ದಾಟು ಸೇರಿ​ ಪ್ರವಾಸಿ ತಾಣಗಳಿಗೆ ನಿರ್ಬಂಧ
  •  ಜಿಲ್ಲಾ ದಂಡಾ​ಧಿ​ಕಾ​ರಿ​ಗಳು ನಿಷೇ​ಧಾಜ್ಞೆ ಜಾರಿ​ಗೊ​ಳಿಸಿ ಆದೇಶ
  • ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮನವಿ
Entry Restricted To Tourist places  Due To Weekend Curfew  snr
Author
Bengaluru, First Published Jan 7, 2022, 1:37 PM IST

 ರಾಮನಗರ (ಜ.07):  ಜಿಲ್ಲಾ​ದ್ಯಂತ ಕೋವಿಡ್‌-19ರ (Covid 19)  3ನೇ ಅಲೆಯನ್ನು ನಿಯಂತ್ರಿಸಲು ಹಾಗೂ ಓಮಿಕ್ರಾನ್‌ (Omicron) ವೈರಾಣು ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ಸಲುವಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ಕೆ.ರಾಕೇಶ್‌ ಕುಮಾರ್‌ ಅವರು ಪ್ರವಾಸಿ ತಾಣ​ಗ​ಳಲ್ಲಿ ಪ್ರವಾ​ಸಿ​ಗರು ಮತ್ತು ಸಾರ್ವ​ಜ​ನಿ​ಕರ ಪ್ರವೇ​ಶ​ವನ್ನು ನಿರ್ಬಂಧಿಸಿ ನಿಷೇ​ಧಾಜ್ಞೆ ಜಾರಿ​ಗೊ​ಳಿ​ಸಿ​ದ್ದಾರೆ.  ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಜಿಲ್ಲಾ ದಂಡಾ​ಧಿ​ಕಾ​ರಿ​ಗಳು ನಿಷೇ​ಧಾಜ್ಞೆ ಜಾರಿ​ಗೊ​ಳಿಸಿ ಆದೇಶ ಹೊರ​ಡಿ​ಸಿ​ದ್ದಾರೆ. ರಾಮನಗರದ (Ramanagar) ಶ್ರೀ ರಾಮದೇವರ ಬೆಟ್ಟ, ಶ್ರೀ ರೇವಣ ಸಿದ್ದೇಶ್ವರ ಬೆಟ್ಟ, ಚನ್ನ ಪಟ್ಟಣದ (Channapattana) ಕಣ್ವ ಜಲಾಶಯ, ಮಾಗಡಿಯ ಮಂಚನಬೆಲೆ ಜಲಾಶಯ, ಸಾವನದುರ್ಗ. ಕನಕಪುರ ತಾಲೂಕಿನ ಸಂಗಮ, ಮೇಕೆದಾಟು, ಚುಂಚಿ ಜಲಪಾತ (falls) ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಸಾರ್ವಜನಿಕರು ಆಗಮಿಸುವುದನ್ನು ನಿರ್ಬಂಧಿ​ಸ​ಲಾ​ಗಿದೆ.

ಸರ್ಕಾರ/ ಜಿಲ್ಲಾಡಳಿತವು ಕೋವಿಡ್‌-19 (Covid 19) ನಿಯಂತ್ರಣಕ್ಕೆ ಸಂಬಂಧಿ​ಸಿ​ದಂತೆ ಕಾಲಕಾಲಕ್ಕೆ ಹೊರಡಿಸುವ ಆದೇಶ/ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಜ. 19ರವರೆಗೆ ರಾತ್ರಿ ಹಾಗೂ ವಾರಾಂತ್ಯ ಕರ್ಫ್ಯೂ :  ಜಿಲ್ಲೆಯಲ್ಲಿ ಕೋವಿಡ್‌-19ರ 3ನೇ ಅಲೆಯನ್ನು ಹಾಗೂ ಓಮಿಕ್ರಾನ್‌ ವೈರಾಣು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಆದೇಶದ ಅನ್ವಯ ಹಾಗೂ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಜನ​ವರಿ 5ರಿಂದ 19ರವ​ರೆಗೆ ರಾತ್ರಿ 10ರಿಂದ ಬೆಳಗ್ಗೆ 5 ಗಂಟೆ​ವ​ರೆಗೆ ರಾತ್ರಿ ಕಫä್ಯ​ರ್‍ ಹಾಗೂ ಶುಕ್ರ​ವಾರ ರಾತ್ರಿ 10 ರಿಂದ ಸೋಮ​ವಾರ ಬೆಳಗ್ಗೆ 5 ಗಂಟೆ​ವ​ರೆಗೆ ವಾರಾಂತ್ಯದ ಕಫä್ಯ​ರ್‍ ಜಾರಿ​ಗೊ​ಳಿಸಿ ಜಿಲ್ಲಾ​ಧಿ​ಕಾರಿ ಡಾ.ಕೆ.​ರಾ​ಕೇಶ್‌ ಕುಮಾರ್‌  ಆದೇಶ ಹೊರ​ಡಿ​ಸಿ​ದ್ದಾರೆ.

ಜ. 5ರಿಂದ 19ರವರೆಗೆ ರಾತ್ರಿ 10ರಿಂದ ಮರುದಿನ ಬೆಳಗ್ಗೆ 5 ಗಂಟೆ​ವ​ರೆಗೆ ರಾತ್ರಿ ಕಫä್ಯ​ರ್‍ವನ್ನು ಹಾಗೂ ಜ. 5ರಿಂದ 19ರವ​ರೆಗಿನ ಅವ​ಧಿ​ಯ​ಲ್ಲಿ ಬರುವ ಶುಕ್ರ​ವಾರ ರಾತ್ರಿ 10 ರಿಂದ ಸೋಮ​ವಾರ ಬೆಳಗ್ಗೆ 5 ಗಂಟೆ​ವ​ರೆಗೆ ವಾರಾಂತ್ಯದ ಕರ್ಫ್ಯೂ ಜಾರಿ​ಯ​ಲ್ಲಿ​ರ​ಲಿ​ದೆ. ವಾರಂತ್ಯ ಕರ್ಫ್ಯೂ ಮಾರ್ಗಸೂಚಿಯಲ್ಲಿ ಶುಕ್ರವಾರ ರಾತ್ರಿ 8 ರಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಸಾರ್ವಜನಿಕ ಸಂಚಾರ ಚಲನವಲನ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಉದ್ಯಾನವನಗಳಲ್ಲಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಐಟಿ ಕೈಗಾರಿಕೆಗಳು ಕಫ್ರ್ಯೂ ನಿರ್ಬಂಧದಿಂದ ವಿನಾಯಿತಿ ಪಡೆದಿದೆ ಮತ್ತು ಅವರ ಉದ್ಯೋಗಿಗಳಿಗೆ ಸಂಘ/ ಸಂಸ್ಥೆಯಿಂದ ನೀಡಲಾದ ಮಾನ್ಯವಾದ ಗುರುತಿನ ಚೀಟಿಯನ್ನು ಧರಿಸುವ ಮೂಲಕ ಸಂಚರಿಸಲು ಅವಕಾಶ ನೀಡಲಾಗಿರುತ್ತದೆ. ರೋಗಿಗಳು ಮತ್ತು ಅವರ ಪರಿಚಾರಕರು/ ತುರ್ತು ಅಗತ್ಯವಿರುವ ವ್ಯಕ್ತಿಗಳು, ಲಸಿಕೆಯನ್ನು ತೆಗೆದುಕೊಳ್ಳಲು ಉದೇಶಿಸಿರುವ ಅರ್ಹ ವ್ಯಕ್ತಿಗಳು ಕನಿಷ್ಠ ಪುರಾವೆಗಳೊಂದಿಗೆ ಸಂಚರಿಸಲು ಅನುಮತಿಸಲಾಗಿದೆ. ಆಹಾರ ದಿನಸಿ, ಹಣ್ಣುಗಳು ಮತ್ತು ತರಕಾರಿಗಳು, ಮಾಂಸ ಮತ್ತು ಮೀನು, ಡೈರಿ ಮತ್ತು ಹಾಲಿನ ಬೂತ್‌ಗಳು ಮತ್ತು ಪ್ರಾಣಿಗಳ ಮೇವುಗಳೊಂದಿಗೆ ವ್ಯವಹರಿಸುವ ಅಂಗಡಿಗಳು ಕಾರ್ಯ ನಿರ್ವಹಿಸಲು ಅನುಮತಿಸಲಾಗಿದೆ. ರೆಸ್ಟೋರೆಂಟ್‌ನಲ್ಲಿ ತಿನಿಸುಗಳನ್ನು ತೆಗೆದುಕೊಂಡು ಹೋಗಲು ಹಾಗೂ ಮನೆಗೆ ತಲುಪಿಸಲು ಮಾತ್ರ ಅನುಮತಿಸಲಾಗಿದೆ.

ರೈಲುಗಳ (Railway)  ಪ್ರಯಾಣವನ್ನು ಅನುಮತಿಸಲಾಗಿದೆ. ಸಾರ್ವಜನಿಕ ಸಾರಿಗೆ, ಖಾಸಗಿ ವಾಹನಗಳು ಮತ್ತು ಟ್ಯಾಕ್ಸಿಗಳ ಚಲನೆಯನ್ನು, ರೈಲ್ವೆ ನಿಲ್ದಾಣಗಳು ಮತ್ತು ಬಸ್‌ ಟರ್ಮಿನಲ್‌ಗಳು/ ನಿಲುಗಡೆಗಳು/ ಸ್ಟಾಂಡ್‌ಗಳಿಗೆ, ರೈಲು ಮತ್ತು ರಸ್ತೆಯ ಮೂಲಕ ಪ್ರಯಾಣಿಕರ ಸಂಚಾರ ಸುಲಭಗೊಳಿಸಲು ಅನುಮತಿಸಲಾಗಿದೆ. ಮಾನ್ಯವಾದ ಪ್ರಯಾಣ ದಾಖಲೆಗಳು/ ಟಿಕೆಟ್‌ಗಳನ್ನು ಪ್ರದರ್ಶಿಸುವಾಗ ಮತ್ತು ಕೋವಿಡ್‌ ಸೂಕ್ತವಾದ ನಡುವಳಿಕೆಯನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ಮಾತ್ರ ಚಲನೆಯನ್ನು ಅನುಮತಿಸಲಾಗಿದೆ.

ಕೋವಿಡ್‌-19 ಸೂಕ್ತ ನಡವಳಿಕೆ ಮತ್ತು ರಾಜ್ಯ ಸರ್ಕಾರ (Karnataka Govt) ಹೊರಡಿಸಿರುವ ಚಾಲ್ತಿಯಲ್ಲಿರುವ ಮಾರ್ಗಸೂಚಿಗಳಿಗೆ ಕಟ್ಟುನಿಟಾಗಿ ಬದ್ದವಾಗಿರುವ ತೆರೆದ ಸ್ಥಳಗಳಲ್ಲಿ 200 ಕ್ಕಿಂತ ಹೆಚ್ಚು ಜನರು ಮತ್ತು ಮುಚ್ಚಿದ ಸ್ಥಳಗಳಲ್ಲಿ 100 ಜನರನ್ನು ಒಳಗೊಂಡಅತೆ ಮದುವೆ ಕಾರ್ಯಗಳನ್ನು ನಡೆಸಲು ಅನುಮತಿಸಲಾಗಿದೆ.

ಸದರಿ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು. ಯಾವುದೇ ವ್ಯಕ್ತಿಯು ಮಾರ್ಗಸೂಚಿಗಳನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆ-2005ರ ಕಲಂ 51 ರಿಂದ 60ರ ಜೊತೆಗೆ ಭಾರತೀಯ ದಂಡ ಸಂಹಿತಿ ಕಲಂ 188 ರ ರೀತ್ಯಾ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ​ಧಿ​ಕಾ​ರಿ​ಗಳು ಆದೇಶದಲ್ಲಿ ತಿಳಿಸಿದ್ದಾರೆ.

ಹೋಟೆಲ್‌ಗಳನ್ನು ಮುಚ್ಚು​ವಂತೆ ಆದೇ​ಶ :  
ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಕೋವಿಡ್‌ ಮಾರ್ಗ ಸೂಚಿಯಂತೆ ನಗರದ ಹೋಟೆಲ…, ಬಾರ್‌ ಅಂಡ್‌ ರೆಸ್ಟೊರೆಂಟ್‌, ಪಬ್, ರೆಸಾರ್ಟ್‌ಗಳನ್ನು ಶುಕ್ರವಾರ ರಾತ್ರಿ 10ರಿಂದ ಸೋಮವಾರ ಬೆಳಗ್ಗೆ 5ಗಂಟೆ ಯವರಿಗೆ ಮುಚ್ಚುವಂತೆ ನಗರ ಪೋಲಿಸ್‌ ಠಾಣಾ ಸಬ್ ಇನ್ಸ್‌ಪೆಕ್ಟರ್‌ ಉಷಾನಂದಿನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Follow Us:
Download App:
  • android
  • ios