ಅರಣ್ಯದಲ್ಲಿ ಪತ್ತೆಯಾಯ್ತು ಇಂಜಿನಿಯರಿಂಗ್ ವಿದ್ಯಾರ್ಥಿ ಶವ
ದಟ್ಟ ಅರಣ್ಯದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯ ಶವ ಪತ್ತೆಯಾಗಿದೆ. ಆತ ಎರಡು ದಿನದ ಹಿಂದೆ ಕಾಣೆಯಾಗಿದ್ದು ಇದೀಗ ಪತ್ತೆಯಾಗಿದ್ದಾನೆ.
ಶಿವಮೊಗ್ಗ (ಡಿ.19): ಅರಣ್ಯದಲ್ಲಿ ಹೋಗಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಶಿವಮೊಗ್ಗದ ಜೆಎನ್ ಸಿಸಿಯಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ರಿಪ್ಪನ್ ಪೇಟೆಯ ಹಾರೋ ಹಿತ್ತಲು ಗ್ರಾಮದ ಅರುಣ್ ಕುಮಾರ್ ಎಂಬ ವಿದ್ಯಾರ್ಥಿ ಕಾಡಿಗೆ ತೆರಳಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಸೂಡೂರು ಅರಣ್ಯದಲ್ಲಿ ವಿದ್ಯಾರ್ಥಿಯ ಶವ ಪತ್ತೆಯಾಗಿದೆ. ಹಾರೋಹಿತ್ತಲು ಗ್ರಾಮದ ಯೋಗೇಂದ್ರಪ್ಪ ಎಂಬುವವರ ಮಗ ಅರುಣ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆಟೋದಲ್ಲಿ ಕರೆದೊಯ್ದು ಯುವತಿ ಮೇಲೆ ರೇಪ್ ಮಾಡಿದ್ದ ಕಾಮುಕನ ಬಂಧನ ...
ಶಿವಮೊಗ್ಗ ಜೆಎನ್ಎನ್ ಸಿ ಕಾಲೇಜಿನಲ್ಲಿ ಅರುಣ್ ಕುಮಾರ್ ಎರಡನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದ. ಟ್ಯಾಂಕ್ ಮೊಹಲ್ಲಾದ ಎಲ್ಲಮ್ಮ ದಾಸಪ್ಪ ವಸತಿ ನಿಲಯದಲ್ಲಿ ಅರುಣ್ ಕುಮಾರ್ ನೆಲೆಸಿದ್ದ.
ಎರಡು ದಿನಗಳ ಹಿಂದೆ ವಸತಿ ನಿಲಯ ಬಿಟ್ಟು ಕಾಣೆಯಾಗಿದ್ದು, ಇದೀಗ ಕಾಡಿನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.