Asianet Suvarna News Asianet Suvarna News

ಸ್ಮಶಾನಕ್ಕೆ ಮೀಸಲಿಟ್ಟ ಜಾಗ ಒತ್ತುವರಿ; ಪಂಚಾಯತಿ ಅಧಿಕಾರಿಗಳನ್ನೇ ಕೂಡಿ ಹಾಕಿ ಬೀಗ ಜಡಿದ ಗ್ರಾಮಸ್ಥರು

ಸಂತೆಕಡೂರು ಗ್ರಾಮದಲ್ಲಿ ಮೀಸಲಿಟ್ಟ ಸ್ಮಶಾನ ಜಾಗವನ್ನು ತೆರವುಗೊಳಿಸಲು ಅಧಿಕಾರಿಗಳ ಅಸಡ್ಡೆ: ಪಂಚಾಯತಿ ಆಫೀಸ್ ಎದುರು ಗ್ರಾಮಸ್ಥರ ಆಕ್ರೋಶ. ತೆರವುಗೊಳಿಸಲು ಅಸಡ್ಡೆ ತೋರಿದ ಪಂಚಾಯತ್  ಅಧಿಕಾರಿಗಳನ್ನು ಇಂದು ಪಂಚಾಯತ್ ಆಫೀಸನಲ್ಲಿ ಕೂಡಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. 

Encroachment of the land reserved for the cemetery santekadooru shivamogga rav
Author
First Published Jul 30, 2022, 3:37 PM IST

ವರದಿ : ರಾಜೇಶ್, ಶಿವಮೊಗ್ಗ

 ಶಿವಮೊಗ್ಗ (ಜು.30) : ಸಂತೆಕಡೂರು ಗ್ರಾಮದಲ್ಲಿ ಮೀಸಲಿಟ್ಟ ಸ್ಮಶಾನ ಜಾಗವನ್ನು ತೆರವುಗೊಳಿಸಲು ಅಧಿಕಾರಿಗಳ ಅಸಡ್ಡೆ: ಪಂಚಾಯತಿ ಆಫೀಸ್ ಎದುರು ಗ್ರಾಮಸ್ಥರ ಆಕ್ರೋಶ.  ಶಿವಮೊಗ್ಗ ತಾಲ್ಲೂಕಿನ ಸಂತೆಕಡೂರು ಗ್ರಾಮದಲ್ಲಿ ಸ್ಮಶಾನಕ್ಕೆ ಮೀಸಲಿಟ್ಟ 3 ಎಕರೆ ಜಾಗವನ್ನು ಕೆಲವರು ಒತ್ತುವರಿ ಮಾಡಿ ಮನೆಕಟ್ಟಿದ್ದು, ಸ್ಮಶಾನ ಜಾಗವನ್ನು ತೆರವುಗೊಳಿಸಲು ಅಸಡ್ಡೆ ತೋರಿದ ಪಂಚಾಯತ್  ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಇಂದು ಪಂಚಾಯತ್ ಆಫೀಸನಲ್ಲಿ ಕೂಡಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. 

ಶಿವಮೊಗ್ಗ(Shivamogga) ತಾಲ್ಲೂಕು ನಿಧಿಗೆ  ಹೋಬಳಿ ಸಂತೆಕಡೂರು(Santekadooru) ಗ್ರಾನದ ಸ.ನಂ.95 ರಲ್ಲಿ 3 ಎಕರೆ ಜಮೀನನ್ನು ಸ್ಮಶಾನದ ಉದ್ದೇಶಕ್ಕೆ ಕಾಯ್ದಿರಿಸಿದ ಜಾಗವನ್ನು ಕೆಲವು ಪ್ರಭಾವಿ ವ್ಯಕ್ತಿಗಳು ಬಡ ಜನರಿಂದ ಮನೆಕಟ್ಟಲು ಸೈಟ್ ಕೊಡುತ್ತೆವೆ ಎಂದು ಲಕ್ಷಗಟ್ಟಲೆ ಹಣ ಪಡೆದು ಈಗಾಗಲೇ ಒತ್ತುವರಿ ಮಾಡಿ ಮನೆಕಟ್ಟಲು ಪ್ರೇರೇಪಣೆ ನೀಡುತ್ತಿದ್ದಾರೆ ಎಂಬ ಆರೋಪ ಸಂತೆಕಡೂರು ಗ್ರಾಮಸ್ಥರಿಂದ ಕೇಳಿ ಬಂದಿತ್ತು. 

ಜ್ಯೋತಿರ್ಲಿಂಗ ಸರಣಿ: ಸ್ಮಶಾನ ಭೂಮಿಯಲ್ಲಿ ಕೂತ ದಕ್ಷಿಣಮುಖಿ ಮಹಾಕಾಳೇಶ್ವರ, ಇಲ್ಲಿ ರಾತ್ರಿ ಕಳೆದೋರ ಅಧಿಕಾರ ಪತನ!

ಈ ಬಗ್ಗೆ ಶಿವಮೊಗ್ಗ ತಹಶಿಲ್ದಾ(Shivamogga Tahsildar)ರರ ನಿರ್ದೆಶನದ ಮೇರೆಗೆ RI ಮತ್ತು ವೀಲೆಜ್ ಅಕೌಂಟೆಂಟ್(Village accounting)ಹಾಗೂ ಪೊಲೀಸ್ ಇಲಾಖೆ(Depertment of Police) ಅಧಿಕಾರಿಗಳು ಸ್ಥಳಕ್ಕೆ ಬಂದರೂ ಸಹ ತೆರವುಗೊಳಿಸಲು ಮೀನಾಮೇಷ ಮಾಡುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಂಬಂಧಪಟ್ಟ ಪಂಚಾಯತ್ ಸದಸ್ಯರಿಗೆ ಮತ್ತು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಸಂತೆಕಡೂರು ಗ್ರಾಮದಲ್ಲಿ ಸ್ಮಶಾನ ಜಾಗದಲ್ಲಿ ಅಕ್ರಮವಾಗಿ  ಒತ್ತುವರಿ ಮಾಡುತ್ತಿದ್ದಾರೆ ಅದನ್ನು ತೆರವು ಗೊಳಿಸಬೇಕೆಂದು ಹಲವಾರು ಬಾರಿ ತಹಶೀಲ್ದಾರ್ ಶಿವಮೊಗ್ಗ ರವರಿಗೆ. ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರೂ ಉಪಯೋಗವಾಗಿಲ್ಲವೆಂದು ಗ್ರಾಮಸ್ಥರ ಆರೋಪವಾಗಿದೆ.

ಸ್ಥಳಿಯ ಗ್ರಾಮಾಂತರ ಶಾಸಕರಾದ ಅಶೋಕನಾಯ್ಕ(Ashok Naik) ರವರು  ತಮ್ಮ ಲೇಟರ್ ಹೆಡ್ ನಲ್ಲಿ ಸಂತೆಕಡೂರು ಗ್ರಾಮದಲ್ಲಿ ಸ್ಮಶಾನದ ಒತ್ತುವರಿ ಜಾಗದಲ್ಲಿ ಇರುವ ರನ್ನು ತೆರವು ಗೋಳಿಸಲು ಸೂಕ್ತವಾದ ಕಾನೂನು ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಜಿಲ್ಲಾಡಳಿತ ಮತ್ತು ತಹಶೀಲ್ದಾರ್ ಹಾಗೂ ,ಸಂತೆಕಡೂರು PDO ವಿರುದ್ದ ಅಸಮಾಧಾನ ಹೊರ ಹಾಕಿದ್ದಾರೆ. 

BIG 3: ಬಳ್ಳಾರಿಯ ಮದಿರೆ ಗ್ರಾಮಸ್ಥರಿಗೆ ಕೊನೆಗೂ ಸಿಕ್ತು ಸ್ಮಶಾನಕ್ಕಾಗಿ ಜಾಗ!

ಸಂತೆಕಡೂರು ಗ್ರಾಮದಲ್ಲಿ 3 ಎಕರೆ ಸ್ಮಶಾನಕ್ಕೆ ಅಂತಾ ಮೀಸಲಿಟ್ಟ ಜಾಗದಲ್ಲಿ ನಿರ್ಮಿಸಲಾದ ಮನೆಗಳನ್ನು ಮತ್ತು ಒತ್ತುವರಿ ಜಾಗವನ್ನು ತೆರವು ಗೊಳಿಸುವಂತೆ ಸ್ಮಶಾನಕ್ಕೆ ಮೀಸಲಿಟ್ಟ ಮೂರು ಎಕರೆ ಜಾಗವನ್ನು ಬೇರೆಯವರ ಪಾಲಾಗದಂತೆ ಉಳಿಸಿಕೊಡುವಂತೆ ಸಂಬಂದಿಸಿದ ಅಧಿಕಾರಿಗಳಿಗೆ ಮತ್ತು ಗ್ರಾಮಾಂತರ ಶಾಸಕ ರಿಗೆ ಅನೇಕ ಬಾರು ಮನವಿ ಸಲ್ಲಿಸಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಶಿವಮೊಗ್ಗ ತಹಶೀಲ್ದಾರ್ ರವರು ಗಮನಹರಿಸಿ ಸೂಕ್ತ ಕ್ರಮಕೈಗೊಳ್ಳಲಿ ಎಂಬುದು ಸ್ಥಳಿಯರ ಒತ್ತಾಸೆಯಾಗಿದೆ.

Follow Us:
Download App:
  • android
  • ios