ಮಳೆ ನೀರು ಸಂರಕ್ಷಣೆ: ತುಮಕೂರರಿನ ಎಲೆರಾಂಪುರ ಗ್ರಾ.ಪಂ ದಕ್ಷಿಣ ಭಾರತಕ್ಕೇ ನಂಬರ್‌ 1..!

*  ಅಂರ್ತಜಲ ವೃದ್ಧಿಸಿ ಪ್ರಶಸ್ತಿ ಗೆದ್ದ ರೈತರು
*  ನಿಕ್ರಾ ದೇಶದಲ್ಲಿ ಇದೇ ಯೋಜನೆಯಡಿ 100 ಹಳ್ಳಿಗಳು ಆಯ್ಕೆ
*  ಕರ್ನಾಟಕದಲ್ಲಿ 4 ಹಳ್ಳಿಗಳು ಆಯ್ಕೆ
 

Elerampura Grama Panchayat No 1 Rank in South India For Rain Water Conservation grg

ವರದಿ: ಮಹಂತೇಶ್‌ ಕುಮಾರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ತುಮಕೂರು 

ತುಮಕೂರು(ಏ.05): ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿ ವ್ಯಾಪ್ತಿಯ ಎಲೆರಾಂಪುರ ಗ್ರಾಮ ಪಂಚಾಯಿತಿಗೆ ಕೇಂದ್ರ ಸರ್ಕಾರದ(Central Government) 'ಉತ್ತಮ ಪಂಚಾಯಿತಿ ಪುರಸ್ಕಾರ'(Good Panchayat Award) ಲಭಿಸಿದೆ. 

ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಲ್ಲೂಕಿನ ಡಿ.ನಾಗೇನಹಳ್ಳಿ ಗ್ರಾಮವನ್ನು 2010 ರಲ್ಲಿ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಸಹಯೋಗದಲ್ಲಿ ಕೇಂದ್ರ ಸರ್ಕಾರದ ನಿಕ್ರಾ ಯೋಜನೆಯಡಿ ಅಂತರ್ಜಲ ವೃದ್ಧಿಗೆ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಇದರ ಫಲವಾಗಿ ಈ ಭಾಗದಲ್ಲಿ ಅಂತರ್ಜಲ ಮಟ್ಟ ವೃದ್ಧಿಗೊಂಡ ಕಾರಣದಿಂದಾಗಿ ಗ್ರಾಮಕ್ಕೆ ರಾಷ್ಟ್ರೀಯ ನೀರು ಅಭಿವೃದ್ಧಿ ಪ್ರಶಸ್ತಿ' ಲಭಿಸಿದೆ .

Elerampura Grama Panchayat No 1 Rank in South India For Rain Water Conservation grg

Tumakuru: ಉತ್ತ​ರ​ದಲ್ಲಿ ಗಂಗೆ, ದಕ್ಷಿ​ಣದಲ್ಲಿ ಸಿದ್ಧ​ಗಂಗೆ: ಕೇಂದ್ರ ಸಚಿವ ಅಮಿತ್‌ ಶಾ

400 ಹೆಕ್ಟೇರ್‌ ಪ್ರದೇಶದಲ್ಲಿ ಅಂತರ್ಜಲ ಮರುಪೂರ್ಣ.

ಗ್ರಾಮದ(Village) ಸುಮಾರು 400 ಹೆಕ್ಟೇರ್ ಭೂ ಪ್ರದೇಶದಲ್ಲಿ 85 ಕೃಷಿ ಹೊಂಡ, 5 ಚೆಕ್ ಡ್ಯಾಂ, 8 ಹಳೇ ಚೆಕ್‌ ಡ್ಯಾಂ ಸೇರಿದಂತೆ ಕೆರೆ ಅಭಿವೃದ್ಧಿ ಹಾಗೂ ತಿರುವು ಗಾಲುವೆ ಮೂಲಕ ಸಂಗ್ರಹಣೆ ನೀರು ಮಾಡಲಾಗಿದೆ. ಬರ ನಿರೋಧಕ ಒಣಬೇಸಾಯ ಹಾಗೂ ಮಳೆ ನೀರಿನಲ್ಲಿ ತೋಟಗಾರಿಕೆಗೆ ಬೆಳೆಗಳಿಗೆ ಒತ್ತು ನೀಡಲಾಗಿದೆ. ರಾಗಿ, ತೊಗರಿ ಹೀಗೆ ಕಡಿಮೆ ನೀರು ಕೇಳುವ ಬೆಳೆಗಳನ್ನು ಡಿ ನಾಗೇನಹಳ್ಳಿ ಸುತ್ತಾಮುತ್ತ ಬೆಳೆಯಲಾಗಿದೆ. ಎಲೆರಾಂಪುರ ಗ್ರಾಮ ಪಂಚಾಯಿತಿ ಹಾಗೂ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ(Center for Agricultural Sciences) ಸಹಯೋಗದಲ್ಲಿ  ಡಿ.ನಾಗೇನಹಳ್ಳಿಯಲ್ಲಿ ಗ್ರಾಮದಲ್ಲಿ ಈ ಪ್ರಯೋಗ ಮಾಡಲಾಗಿದೆ. 

ಸಿದ್ದಲಿಂಗ ಮಠಕ್ಕೆ ಬಂದಾಗಲೆಲ್ಲಾ ಉತ್ಸಾಹ, ಚೈತನ್ಯ ಪಡೆದುಕೊಂಡು ಹೋಗಿದ್ದೇನೆ: ಅಮಿತ್ ಶಾ

ಕೃಷಿಗೆ ಕಡಿಮೆ ನೀರು(Water) ಬಳಕೆ ಹಾಗೂ ಮಳೆ ನೀರು ಸಂಗ್ರಹದಿಂದಾಗಿ  ಸಂಪೂರ್ಣ ನಿಷ್ಕ್ರಿಯಗೊಂಡಿದ್ದ ಸುಮಾರು 25 ಕೊಳವೆಬಾವಿಗಳು ಮರು ಪೂರಣಗೊಂಡಿವೆ. ಒಣಗಿದ್ದ, ಬಾವಿಗಳಲ್ಲಿ ನೀರು ತುಂಬಲಾರಂಭಿಸಿವೆ.  ಸಂಪೂರ್ಣ ಬೆಟ್ಟ ಹಾಗೂ ಗುಡ್ಡ ಪ್ರದೇಶವಾದ ಈ ಭಾಗದಲ್ಲಿ ಈ ಮೊದಲು ಮಳೆ ನೀರು ವ್ಯರ್ಥವಾಗಿ ಹರಿದು ಹೋಗುತ್ತಿತ್ತು.  ಇಲ್ಲಿನ ಪರಿಸರ ಹಾಗೂ ಭೌಗೋಳಿಕ ಸ್ಥಿತಿಯನ್ನು ಇದನ್ನು ಮನಗಂಡ ಕೃಷಿ ವಿಜ್ಞಾನ ಕೇಂದ್ರ ಡಿ.ನಾಗೇನಹಳ್ಳಿ ಗ್ರಾಮವನ್ನು ಜಲಮರುಪೂರ್ಣಕ್ಕೆ ಆಯ್ಕೆ ಮಾಡಿಕೊಂಡಿ, ಯಶಸ್ವಿಯಾಗಿದ್ದಾರೆ. 

Elerampura Grama Panchayat No 1 Rank in South India For Rain Water Conservation grg

10 ವರ್ಷದ ನಿರಂತರ ಪರಿಶ್ರಮದಿಂದ ಪ್ರಶಸ್ತಿಯ ಗರಿ

ಗ್ರಾಮದ ಬೆಟ್ಟದ ಪ್ರದೇಶದಲ್ಲಿ ನೆಲ್ಲಿ, ಗೋಡಂಬಿ, ಹುಣಸೆ, ಕೃಷಿ ಹೊಂಡದಲ್ಲಿ ಶೇಖರಣೆಯಾಗಿರುವ ಮಳೆ ನೀರು ನೀರಿನ ಮಾವು, ಹೆಬ್ಬೇವು ಸೇರಿದಂತೆ ಅರಣ್ಯ ಮರಗಳನ್ನು ಬೆಳೆಸಲಾಗಿದೆ . ಮೂಲ ಹೆಚ್ಚಿರುವ ಕಾರಣ ಪ್ರಾಣಿ , ಪಕ್ಷಿ, ಜನುವಾರುಗಳಿಗೆ ಆಶ್ರಯ ಕಲ್ಪಿಸಲಾಗಿದೆ. ಮಣ್ಣಿನ ಸವಕಳಿ ಹಾಗೂ ಮಳೆ ನೀರು ಇಂಗಿಸುವ ಸಲುವಾಗಿ ಗ್ರಾಮದ ಸುತ್ತಲಿನ ಜಮೀನುಗಳಲ್ಲಿ ಬದುಗಳನ್ನು ಹಾಕಲಾಗಿದೆ. 10 ವರ್ಷಗಳಿಂದ ನಿಕ್ರಾ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಿಂದಾಗಿ ವಿವಿಧ ಅಂತರ್ಜಲ ವೃದ್ಧಿಯಾಗಿ ಈ ಭಾಗದಲ್ಲಿದ್ದ ನೀರಿನ ಬವಣೆ ನೀಗಿದೆ .

ನಿಕ್ರಾ ದೇಶದಲ್ಲಿ ಇದೇ ಯೋಜನೆಯಡಿ 100 ಹಳ್ಳಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅದರಂತೆ ರಾಜ್ಯದಲ್ಲಿ(Karnataka) 4 ಹಳ್ಳಿಗಳನ್ನು ಆಯ್ಕೆ ಮಾಡಲಾಗಿದೆ. ಕಳೆದ 11 ವರ್ಷಗಳಿಂದ ಗ್ರಾಮದಲ್ಲಿ ಯೋಜನೆ ಅನುಷ್ಠಾನಗೊಂಡು ಸಫಲವಾದ್ದರಿಂದ ನಾಗೇನಹಳ್ಳಿ 100 ಪರ್ಸೆಂಟ್‌ ಯೋಜನೆಯನ್ನು ಕಾರ್ಯಗತಗೊಳಿಸಿದ ಮೊದಲ ಗ್ರಾಮವಾಗಿದೆ. ಹೀಗಾಗಿ ಗ್ರಾಮಕ್ಕೆ ಕೇಂದ್ರ ಸರ್ಕಾರ ಪುರಸ್ಕಾರ ಲಭಿಸಿದೆ.
 

Latest Videos
Follow Us:
Download App:
  • android
  • ios