ಮಳವಳ್ಳಿ: ಕಾರ್ಯಾಚರಣೆ ಯಶಸ್ವಿ, 9 ಕಾಡಾನೆಗಳು ಮತ್ತೆ ಶಿಂಷಾ ಕಾಡಿನತ್ತ

ಮಂಡ್ಯ ತಾಲೂಕಿನ ಹೆಬ್ಬಕವಾಡಿ - ಚಿಕ್ಕಮುಲಗೂಡು ಗ್ರಾಮಗಳ ಬಳಿಯ ರೈತರ ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಓಡಿಸಲು ಮೂರು ಪಳಗಿದ ಸಾಕಾನೆಗಳ ಸಹಾಯದಿಂದ ಮಂಗಳವಾರ ಸಂಜೆ ಕಾರ್ಯಾಚರಣೆ ಕೈಗೊಂಡ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಬುಧವಾರ ಮುಂಜಾನೆವರೆಗೂ ಆನೆಗಳನ್ನು ಸುಮಾರು 25 ಕಿ.ಮೀ ವರೆಗೆ ಓಡಿಸಲು ಶ್ರಮಿಸಿದ್ದರು.

Elephant Operation Success at Malavalli in Mandya grg

ಮಳವಳ್ಳಿ(ಆ.03): ಕೊಡಗಿನ ತಿತಿಮತಿ ಅರಣ್ಯ ಪ್ರದೇಶದ ಮೂರು ಪಳಗಿದ ಸಾಕಾನೆಗಳ ಬಳಕೆಯಿಂದ 9 ಕಾಡಾನೆಗಳನ್ನು ನಾಡಿನಿಂದ ಮತ್ತೆ ಶಿಂಷಾ ನದಿ ಪಾತ್ರದ ಮುತ್ತತ್ತಿ ಕಾಡಿಗೆ ಓಡಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಮಂಡ್ಯ ತಾಲೂಕಿನ ಹೆಬ್ಬಕವಾಡಿ - ಚಿಕ್ಕಮುಲಗೂಡು ಗ್ರಾಮಗಳ ಬಳಿಯ ರೈತರ ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಓಡಿಸಲು ಮೂರು ಪಳಗಿದ ಸಾಕಾನೆಗಳ ಸಹಾಯದಿಂದ ಮಂಗಳವಾರ ಸಂಜೆ ಕಾರ್ಯಾಚರಣೆ ಕೈಗೊಂಡ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಬುಧವಾರ ಮುಂಜಾನೆವರೆಗೂ ಆನೆಗಳನ್ನು ಸುಮಾರು 25 ಕಿ.ಮೀ ವರೆಗೆ ಓಡಿಸಲು ಶ್ರಮಿಸಿದ್ದರು.

ಶೂನ್ಯ ಬಡ್ಡಿ ದರ ಸಾಲ ಸೌಲಭ್ಯ ಹೆಚ್ಚಳ: ಸಚಿವ ಚಲುವರಾಯಸ್ವಾಮಿ

ತಾಲೂಕಿನ ಚಿಕ್ಕಮುಲಗೂಡು ಗ್ರಾಮದಿಂದ ಅಣಸಾಲೆ, ಕಪ್ಪರೆಕೊಪ್ಪಲು, ಕಾಡಕೊತ್ತನಹಳ್ಳಿ, ದೇವಿಪುರದವರೆಗೆ ಯಶಸ್ವಿಯಾದ ಕಾರ್ಯಾಚರಣೆಗೆ ತಳಗವಾದಿಯಲ್ಲಿ ಆನೆಗಳು ಬೇರ್ಪಟ್ಟದ್ದರಿಂದ ಸ್ಪಲ್ಪ ಹಿನ್ನಡೆಯಾಯಿತು. ಅಲ್ಲದೇ ತಳಗವಾದಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಎರಡು ಸಲಗಗಳು ರೈತರ ಸಾಕಷ್ಟುಬೆಳೆ ತಿಂದು ಹಾಕಿವೆ.

ಸ್ಥಳದಲ್ಲಿಯೇ ಬೀಡುಬಿಟ್ಟಿದ್ದ ಅರಣ್ಯ ಅಧಿಕಾರಿಗಳು ಮಧ್ಯರಾತ್ರಿ ಮತ್ತೆ ಕಾರ್ಯಾಚರಣೆ ಆರಂಭಿಸಿ ಮಾದಹಳ್ಳಿ, ಕೊರೇಗಾಲ ಮೂಲಕ ಬಂದ ಕಾಡಾನೆಗಳನ್ನು ಮದ್ದೂರು - ಮಳವಳ್ಳಿ ಹೆದ್ದಾರಿ ದಾಟಿ ಗುಳಘಟ್ಟ, ಕಂದೇಗಾಲ, ಅಮೃತೇಶ್ವರನಹಳ್ಳಿ ಮಾರ್ಗದ ಮೂಲಕ ಬೆಳಗಿನ ಜಾವ ಗೌಡಗೆರೆಯ ರೈತರೊಬ್ಬರ ಜಮೀನಿನ ನೀಲಗಿರಿ ತೋಪಿನಲ್ಲಿ ವಾಸ್ತವ್ಯ ಹೂಡುವಂತೆ ಮಾಡಿದ್ದಾರೆ.

ಹಲವು ದಿನಗಳಿಂದ ನಿದ್ದೆ ಇಲ್ಲದೇ ಧಣಿದಿದ್ದ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ರಾತ್ರಿ ವೇಳೆ ಕಾರ್ಯಾಚರಣೆ ನಡೆಸಬೇಕಾಗಿರುವುದರಿಂದ ಆನೆಗಳು ಬೀಡು ಬಿಟ್ಟಅನತಿ ದೂರದಲ್ಲೇ ವಿಶ್ರಾಂತಿಯಲ್ಲಿದ್ದಾರೆ. ಮತ್ತೆ ಬುಧವಾರ ಸಂಜೆ ಕಾರ್ಯಾಚರಣೆ ನಡೆಸಿ ಸುಮಾರು 12 ರಿಂದ 15 ಕಿ.ಮೀ ಇರುವ ಮುತ್ತತ್ತಿ - ಶಿಂಷಾ ಅರಣ್ಯ ಪ್ರದೇಶಕ್ಕೆ 9 ಕಾಡಾನೆಗಳನ್ನು ಓಡಿಸಲಾಗುವುದು ಎಂದು ಸ್ಥಳದಲ್ಲಿದ್ದ ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾಡಾನೆಗಳಿಂದ ರೈತರ ಬೆಳೆಗಳಿಗೆ ಹಾನಿ

ಕಳೆದ 15 ದಿನಗಳಿಂದ ಜಿಲ್ಲೆಯ ವಿವಿಧ ತಾಲೂಕುಗಳ ಹಳ್ಳಿಗಳ ರೈತರ, ಜನಸಾಮಾನ್ಯರಿಗೆ ಆತಂಕ ಉಂಟು ಮಾಡಿದ್ದ ಕಾಡಿನ ಆನೆಗಳನ್ನು ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಓಡಿಸಲು ಅರಣ್ಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಆದರೆ, ಕಾಡಾನೆಗಳ ದಾಳಿಯಿಂದ ತರಕಾರಿ, ಕಬ್ಬು, ತೆಂಗಿನ ಬೆಳೆಗಳು ನಾಶವಾಗಿ ರೈತರಿಗೆ ಲಕ್ಷಾಂತರ ರು. ನಷ್ಟಸಂಭವಿಸಿದೆ. ಆರಂಭದಲ್ಲಿ ಮದ್ದೂರು ತಾಲೂಕಿನ ಅಜ್ಜಹಳ್ಳಿ ಕಾಣಿಸಿಕೊಂಡ ಆನೆಗಳನ್ನು ಕಠಿಣ ಕ್ರಮದ ಮೂಲಕ ಕಾಡಿಗೆ ಓಡಿಸಿದ್ದರೆ ರೈತರಿಗೆ ಬೆಳೆ ನಷ್ಟವಾಗುತ್ತಿರಲಿಲ್ಲ. ಕಾಡಾನೆಗಳ ದಾಳಿಯಿಂದ ಸಾಕಷ್ಟುನಷ್ಟಅನುಭವಿಸಿರುವ ರೈತರಿಗೆ ಬೆಳೆ ಪರಿಹಾರ ನೀಡಬೇಕಿದೆ. ಅರಣ್ಯ ಅಧಿಕಾರಿಗಳು ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಪರಿಶೀಲನೆ ನಡೆಸಿ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಒದಗಿಸಲು ಅರಣ್ಯ ಇಲಾಖೆ, ಸಚಿವರು ಗಮನ ಹರಿಸಬೇಕಿದೆ.

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಎಐ ಸ್ಪೀಡ್‌ ಡಿಟೆಕ್ಟರ್‌ ಐದೇ ದಿನಕ್ಕೆ ಸ್ಟಾಪ್‌: ಅಪಫಾತ ತಡೆ ಚಿಂತನೆ ಫ್ಲಾಪ್‌..?

ಲಕ್ಷಾಂತರ ಮೌಲ್ಯದ ಟೊಮೆಟೋ ಬೆಳೆ ನಾಶ

ಮಂಡ್ಯ: ಟೊಮೆಟೋ ಬೆಲೆ ಗಗನಕ್ಕೇರಿ ಬೆಳೆಗಾರರ ಮೊಗದಲ್ಲಿ ಖುಷಿ ಮೂಡುವಂತೆ ಮಾಡಿದೆ. ದರ ಏರಿಕೆ ಖುಷಿಯಲ್ಲಿದ್ದ ಟೊಮೆಟೋ ಬೆಳೆಗಾರನ ಜಮೀನಿಗೆ ಕಾಡಾನೆಗಳು ದಿಢೀರ್‌ ದಾಳಿ ನಡೆಸಿರುವುದು ಶಾಕ್‌ ನೀಡಿದೆ. ಆನೆಗಳ ದಾಳಿಯಿಂದ ಲಕ್ಷಾಂತರ ರು. ಮೌಲ್ಯದ ಟೊಮೆಟೋ ಮಣ್ಣುಪಾಲಾಗಿದೆ. ಮಂಡ್ಯ ತಾಲೂಕಿನ ಹೆಬ್ಬಕವಾಡಿ ಗ್ರಾಮದ ರೈತ ಉಮೇಶ್‌ ತನ್ನ ಹತ್ತು ಗುಂಟೆ ಜಮೀನಿನಲ್ಲಿ ಟೊಮೆಟೋ ಬೆಳೆ ಬೆಳೆದಿದ್ದರು. ಫಸಲು ಕೈಗೆ ಬರುವ ಹೊತ್ತಿನಲ್ಲಿ ನಾಶವಾಗಿರುವುದರಿಂದ ರೈತ ಕಂಗಾಲಾಗಿದ್ದಾನೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕಾಡಾನೆಗಳ ದಾಳಿಗೆ ಟೊಮೆಟೋ ಫಸಲು ಜೊತೆಗೆ ಟೊಮೆಟೋ ಗಿಡಗಳಿಗೂ ಹಾನಿಯಾಗಿದೆ. ಉಮೇಶ್‌ ತನ್ನ ಮಕ್ಕಳ ಉನ್ನತ ವಿಧ್ಯಾಭ್ಯಾಸಕ್ಕೆ ಟೊಮೆಟೋದಿಂದ ಬರುವ ಆದಾಯವನ್ನೇ ನಂಬಿಕೊಂಡಿದ್ದರು. ಇದೀಗ ಬೆಳೆ ನಾಶದಿಂದ ಸಾಲದ ಸುಳಿಗೆ ರೈತ ಉಮೇಶ್‌ ಕುಟುಂಬ ಸಿಲುಕಿದೆ. ಸೂಕ್ತ ಪರಿಹಾರ ನೀಡುವಂತೆ ಇಲಾಖಾಧಿಕಾರಿಗಳಿಗೆ ಮೊರೆಹೋಗಿದೆ.

ಶಿಂಷಾ ಕಾಡಿಗಟ್ಟಲು ಕಳೆದ ರಾತ್ರಿ ಸುಮಾರು 25 ಕೀ ಮೀ ಕಾರ್ಯಾಚರಣೆ ನಡೆಸಲಾಗಿದೆ. ಆನೆಗಳ ತಂಡದಲ್ಲಿ ಮರಿ ಆನೆಗಳು ಇವರ ಜೊತೆಗೆ ಜನನಿಬಿಡ ಪ್ರದೇಶವಾಗಿರುವುದರಿಂದ ಕಾರ್ಯಾಚರಣೆಗೆ ಸ್ಪಲ್ಪ ಹಿನ್ನಡೆಯಾಗುತ್ತಿದೆ. ಬುಧವಾರ ರಾತ್ರಿ ವೇಳೆ ಎಲ್ಲಾ ಆನೆಗಳನ್ನು ಕಾಡಿಗಟ್ಟಲಾಗುವುದು ಎಂದು ಮಳವಳ್ಳಿ ವಲಯ ಅರಣ್ಯಾಧಿಕಾರಿ ಎನ್‌.ಸಿ.ಮಹದೇವ್‌ ತಿಳಿಸಿದ್ದಾರೆ.  

Latest Videos
Follow Us:
Download App:
  • android
  • ios