ಚಿಕ್ಕಮಗಳೂರು: ಚಾರ್ಮಾಡಿ ಘಾಟಿಯಲ್ಲಿ ಸರ್ಕಾರಿ ಬಸ್ಸಿಗೆ ಅಡ್ಡ ಬಂದ ಕಾಡಾನೆ, ಕಕ್ಕಾಬಿಕ್ಕಿಯಾದ ಪ್ರಯಾಣಿಕರು..!
ಒಂಟಿ ಸಲಗ ಸುಮಾರು ಅರ್ಧ ಗಂಟೆ ರಸ್ತೆಯಲ್ಲೇ ನಿಂತಿತ್ತು. ಆನೆಯನ್ನ ಕಂಡು ತಕ್ಷಣ ಬಸ್ ನಿಲ್ಲಿಸಿದ್ದರು ಚಾಲಕ. ಚಾರ್ಮಾಡಿ ಘಾಟಿಯಲ್ಲಿ ಎರಡು ಕಿ.ಮೀ. ನಷ್ಟು ಟ್ರಾಫಿಕ್ ಜಾಮ್ ಆಗಿತ್ತು. ಚಿಕ್ಕಮಗಳೂರು-ಮಂಗಳೂರು ಎರಡೂ ಕಡೆಯಲ್ಲೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅರ್ಧ ಗಂಟೆ ಬಳಿಕ ಒಂಟಿ ಸಲಗ ಅರಣ್ಯಕ್ಕೆ ಇಳಿದಿದೆ.
ಚಿಕ್ಕಮಗಳೂರು(ಜೂ.13): ಕೆಎಸ್‌ಆರ್‌ಟಿಸಿ ಬಸ್ಸಿಗೆ ಕಾಡಾನೆಯೊಂದು ಅಡ್ಡ ಬಂದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ 7 ಮತ್ತು 8ನೇ ತಿರುವಿನಲ್ಲಿ ನಡೆದಿದೆ. ಬಸ್ಸಿನ ಪಕ್ಕದಲ್ಲೇ ಕಾಡಾನೆ ಹಾದು ಹೋಗಿದೆ. ಕಾಡಾನೆ ಕಂಡು ಪ್ರಯಾಣಿಕರು ಗಾಬರಿಗೊಂಡಿದ್ದರು.
ಒಂಟಿ ಸಲಗ ಸುಮಾರು ಅರ್ಧ ಗಂಟೆ ರಸ್ತೆಯಲ್ಲೇ ನಿಂತಿತ್ತು. ಆನೆಯನ್ನ ಕಂಡು ತಕ್ಷಣ ಬಸ್ ನಿಲ್ಲಿಸಿದ್ದರು ಚಾಲಕ. ಚಾರ್ಮಾಡಿ ಘಾಟಿಯಲ್ಲಿ ಎರಡು ಕಿ.ಮೀ. ನಷ್ಟು ಟ್ರಾಫಿಕ್ ಜಾಮ್ ಆಗಿತ್ತು. ಚಿಕ್ಕಮಗಳೂರು-ಮಂಗಳೂರು ಎರಡೂ ಕಡೆಯಲ್ಲೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅರ್ಧ ಗಂಟೆ ಬಳಿಕ ಒಂಟಿ ಸಲಗ ಅರಣ್ಯಕ್ಕೆ ಇಳಿದಿದೆ.
ಬೃಹತ್ ಮರ ರಸ್ತೆಗುರುಳಿಸಿ ರೋಡ್ ಬ್ಲಾಕ್ ಮಾಡಿದ ಗಜರಾಜ: ಅಪರೂಪದ ದೃಶ್ಯ ವೈರಲ್
ಕಳೆದ ಎರಡು ತಿಂಗಳಿಂದಲೂ ಚಾರ್ಮಾಡಿಯಲ್ಲೇ ಒಂಟಿ ಸಲಗ ಇದೆ ಎಂದು ತಿಳಿದು ಬಂದಿದೆ. ಹಗಲಿರುಳೆನ್ನದೇ ಚಾರ್ಮಾಡಿ ರಸ್ತೆಯಲ್ಲೇ ಒಂಟಿ ಸಲಗ ಸಂಚಾರ ನಡೆಸುತ್ತಿದೆ. ಚಾರ್ಮಾಡಿ ಘಾಟ್ ತಪ್ಪಲಿನ ಗ್ರಾಮದೊಳಕ್ಕೂ ಆನೆ ಬಂದಿತ್ತು ಎಂದು ತಿಳಿದು ಬಂದಿದೆ. ಕಾಡಾನೆಯನ್ನ ಸ್ಥಳಾಂತರಿಸುವಂತೆ ಸ್ಥಳಿಯರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.