ಸಫಾರಿ ವಾಹನ ಅಟ್ಟಾಡಿಸಿದ ಆನೆಗಳು : ವಿಡಿಯೋ ವೈರಲ್
ಸಫಾರಿಗೆ ತೆರಳಿದ್ದ ಜೀಪನ್ನು ಹಿಂದಿನಿಂದ ಒಂದು ಆನೆ ಮತ್ತು ಮುಂಭಾಗದಿಂದ ಒಂದು ಆನೆ ದಾಳಿಗೆ ಯತ್ನಿಸಿದ ಘಟನೆ ನಡೆದಿದೆ. ಚಾಲಕನ ಜಾಗರೂಕತೆಯಿಂದ ಅವಘಡ ತಪ್ಪಿದೆ.
ಚಾಮರಾಜನಗರ (ಮಾ.16) : ಸಫಾರಿಗೆ ತೆರಳಿದ್ದ ಜೀಪನ್ನು ಹಿಂದಿನಿಂದ ಒಂದು ಆನೆ ಮತ್ತು ಮುಂಭಾಗದಿಂದ ಒಂದು ಆನೆ ದಾಳಿಗೆ ಯತ್ನಿಸಿದ ಘಟನೆ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿ ಸಫಾರಿಯಲ್ಲಿ ಇತ್ತೀಚೆಗೆ ನಡೆದಿದೆ. ಚಾಲಕನ ಜಾಗರುಕತೆಯಿಂದ ಅಪಾಯ ತಪ್ಪಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಭಾರೀ ವೈರಲ್ ಆಗಿದೆ.
ಕೆ.ಗುಡಿ ಸಫಾರಿಯಲ್ಲಿ ಭತ್ತದಗದ್ದೆ ಕೆರೆ ಎಂಬ ರಸ್ತೆಯಲ್ಲಿ ಸಫಾರಿ ಜೀಪ್ ಕಂಡ ಆನೆಯೊಂದು ದಾಳಿ ಮಾಡಲು ಅಟ್ಟಾಡಿಸಿಕೊಂಡು ಬಂದಿದೆ. ಅದಾಗಿ 200 ಮೀಟರ್ ಅಂತರದಲ್ಲಿ ಮುಂಭಾಗದಿಂದ ಮತ್ತೊಂದು ಆನೆ ವಾಹನದ ಮೇಲೆ ದಾಳಿ ಮಾಡಲು ಯತ್ನಿಸಿದೆ. ಈ ವೇಳೆ ಚಾಲಕ ವಾಹನದ ಹೆಡ್ ಲೈಟ್ ಆನ್ ಮಾಡಿ ಹಾರ್ನ್ ಮಾಡುತ್ತಲೇ ವಾಹನ ಚಲಾಯಿಸಿದ್ದಾನೆ. ಹೀಗಾಗಿ ಬೆದರಿದ ಆನೆ ರಸ್ತೆ ಪಕ್ಕ ಹೋಗಿದೆ.
ಹೆಣ್ಣಾನೆಯ ಸಾಮೀಪ್ಯಕ್ಕಾಗಿ ಹಾತೊರೆಯುತ್ತಿರುವ ಮದವೇರಿದ ಗಜಗಳು..!
ಎರಡು ಆನೆಗಳು ಹೀಗೆ ಅಟ್ಟಾಡಿಸುವ ದೃಶ್ಯವನ್ನು ಪ್ರವಾಸಿಗರೊಬ್ಬರು ಆತಂಕದ ನಡುವೆಯೂ ಸೆರೆ ಹಿಡಿದಿದ್ದು, ಅದೀಗ ವೈರಲ್ ಆಗಿದೆ. ಬಳಿಕ ಪ್ರವಾಸಿಗರು ಚಾಲಕನಿಗೆ ಕೃತಜ್ಞತೆ ಅರ್ಪಿಸಿದ್ದಾರೆ.