ಬೆಟ್ಟದಪುರ (ಡಿ.16):   ಗ್ರಾಪಂ ಚುನಾವಣೆ ಘೋಷಣೆಯಾದ ಹಿನ್ನೆಲೆ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳು ಮತದಾರರನ್ನು ಓಲೈಸಲು ಹಲವಾರು ಕಸರತ್ತುಗಳನ್ನು ಆರಂಭಿಸಿದ್ದು, ಇದರಲ್ಲಿ ಕೋಳಿ ವ್ಯಾಪಾರಕ್ಕೆ ಭರ್ಜರಿ ಡಿಮ್ಯಾಂಡ್‌ ಆಗಿದೆ. 

ಪ್ರತಿ ಗ್ರಾಮದಲ್ಲೂ ಸಹ ವಿಶೇಷವಾಗಿ ಕೋಳಿ ಮಾಂಸದ ಊಟ ಹಾಕಿ ಮತದಾರನನ್ನು ಓಲೈಸುತ್ತಿದ್ದಾರೆ. ಚುನಾವಣೆ ಘೋಷಣೆಯಾದ ಬಳಿಕ ಇದೀಗ ಜನರು ಭಾರಿ ಸಂಖ್ಯೆಯಲ್ಲಿ ಕೋಳಿ ಅಂಗಡಿಯ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ಅಲ್ಲದೆ ಕೋಳಿ ಮಾಂಸದ ರೇಟು ಇದೀಗ ಐವತ್ತು ರು. ಹೆಚ್ಚಿರುವುದು ವ್ಯಾಪಾರಗಾರರಿಗೆ ಸಂತೋಷ ತಂದಿದೆ.

ಕಡಕ್‌ನಾಥ್ ಕೋಳಿ ಮಾಂಸ ಬೆಂಗಳೂರಿನಲ್ಲಿ ಲಭ್ಯ! ಬನ್ನಿ, ಆಸ್ವಾದಿಸಿ!

ಅದರಲ್ಲೂ ಈಗ ಕೋಳಿ ಮಾಂಸ ಚಳಿಗಾಲಕ್ಕೆ ಹೇಳಿ ಮಾಡಿಸಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕೋಳಿಮಾಂಸವನ್ನೇ ಇಷ್ಟಪಡುತ್ತಾರೆ, ಅದರ ಜೊತೆಯಲ್ಲಿ ಸಹ ಗ್ರಾಮಾಂತರ ಪ್ರದೇಶದಲ್ಲಿ ಅಕ್ರಮ ಮದ್ಯದ ವ್ಯಾಪಾರ ಸಹ ಭರ್ಜರಿ ಕಳೆಕಟ್ಟಿದೆ, ರಾತ್ರಿ ವೇಳೆಗಳಲ್ಲಿ ಊಟ ಗ್ರಾಮಾಂತರ ಪ್ರದೇಶದಲ್ಲಿ ತೋಟ ಮತ್ತು ಹೊಲಗಳ ಪ್ರದೇಶದಲ್ಲಿ ನಡೆಯುತ್ತಿರುವುದು ಕಂಡುಬರುತ್ತಿದೆ.