ಕೋಲಾರ (ಸೆ.23): ಕೊರೋನಾ ಪರಿಣಾಮವಾಗಿ ಕುಕ್ಕುಟೋದ್ಯಮ ಸಂಪೂರ್ಣವಾಗಿ ನೆಲ ಕಚ್ಚಿದೆ. ಫಾರಂಗಳಲ್ಲಿ ಕೋಳಿಗಳ ಸಂಖ್ಯೆ ಗಣನೀಯವಾಗಿ ಕುಸಿದಿರುವುದೇ ಇದಕ್ಕೆ ಕಾರಣ.

ಈಗ ಕೋಳಿ ಮೊಟ್ಟೆ ಬೆಲೆ ಗಗನಕ್ಕೆ ಏರಿದ್ದು ಕುಕ್ಕುಟ ಉದ್ಯಮಿಗಳಲ್ಲಿ ಸಂತಸ ತಂದಿದೆ. ಗ್ರಾಹಕರ ಜೇಬಿಗೆ ಹೊರೆಯಾಗಿದೆ. ಮೊಟ್ಟೆ ಜತೆಗೆ ಕೋಳಿ ಮಾಸದ ಬೆಲೆಯೂ ಏರುಗತಿಯಲ್ಲಿ ಸಾಗಿದ್ದು, ಮೊಟ್ಟೆ ಮಾಂಸ ಪ್ರಿಯರಿಗೆ ಇದರ ಬಿಸಿ ತಟ್ಟಿದೆ. 

ಸಂಗಾತಿ ಇಲ್ಲದೆ ಮೊಟ್ಟೆ ಇಟ್ಟು ತಾಯಿಯಾಗಲಿರುವ 62 ನೇ ವಯಸ್ಸಿನ ಹೆಬ್ಬಾವು!

ಲಾಕ್‌ ಡೌನ್ ವೇಳೆ ಸರಕು ಸಾಗಣೆ ವಾಹನ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದರಿಂದ ಕೋಳಿ ಪೂರೈಕೆಯೂ ಸ್ಥಗಿತಗೊಂಡಿತ್ತು. ಮತ್ತೊಂದೆಡೆ ಕೋಳಿ ಮಾಂಸ ಮತ್ತು ಮೊಟ್ಟೆ ಬೆಲೆ ಏಕಾಏಕಿ ಪಾತಾಳಕ್ಕೆ ಕುಸಿಯಿತು. ಮೇವಿನ ಕೊರತೆ ಮತ್ತು ಬೆಲೆ ಕುಸಿತದ ಕಾರಣಕ್ಕೆ ಸಾಕಷಟ್ಉ ಫಾರಂ ಮಾಲಿಕರು ಕೋಳಿಗಳನ್ನಿ ಜೀವಂತ ಸಮಾಧಿ ಮಾಡಿದರು. ಆಹಾರವಿಲ್ಲದೇ ಕೆಲವು ಸಾವಿಗೀಡಾದವು.

ಲಾಕ್‌ಡೌನ್ ಅವಧಿಯಲ್ಲಿ ಕೋಳಿಗಳನ್ನು ಸಾಯಿಸಿದ್ದರಿಂದ ಮೊಟ್ಟೆ ಉತ್ಪಾದನೆಯಲ್ಲಿ ಗಣನೀಯವಾದ ಕುಸಿತ ಕಂಡು ಬಂದಿದೆ. ಇದರಿಂದ ಬೆಲೆಯೂ ಕೂಡ ಅತ್ಯಧಿಕ ಪ್ರಮಾಣದಲ್ಲಿ ಹೆಚ್ಚಳವಾಗಿದೆ.