ಎಲ್ಲಾ ಸಮಸ್ಯೆಗೆ ಶಿಕ್ಷಣವೊಂದೇ ಪರಿಹಾರ

ಎಲ್ಲಾ ರೀತಿಯ ಸಮಸ್ಯೆ ನಿವಾರಣೆಗೆ ಶಿಕ್ಷಣವೊಂದೇ ಪರಿಹಾರ. ನಿಮ್ಮ ಗ್ರಾಮ, ತಾಲೂಕು ಹಾಗೂ ಈ ದೇಶದ ಪ್ರಗತಿ ಶಿಕ್ಷಣದಿಂದ ಮಾತ್ರ ಸಾಧ್ಯ. ಹೀಗಾಗಿ ಕಷ್ಟಪಟ್ಟು, ಚೆನ್ನಾಗಿ ವ್ಯಾಸಂಗ ಮಾಡಿ ಉತ್ತಮ ವಿದ್ಯಾವಂತರಾಗುವಂತೆ ತಾಲೂಕಿನ ನಿಡಗಲ್‌ ವಾಲ್ಮೀಕಿ ಆಶ್ರಮದ ಸಂಜಯ್‌ ಕುಮಾರ್‌ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

Education is the only solution to all problems snr

 ಪಾವಗಡ : ಎಲ್ಲಾ ರೀತಿಯ ಸಮಸ್ಯೆ ನಿವಾರಣೆಗೆ ಶಿಕ್ಷಣವೊಂದೇ ಪರಿಹಾರ. ನಿಮ್ಮ ಗ್ರಾಮ, ತಾಲೂಕು ಹಾಗೂ ಈ ದೇಶದ ಪ್ರಗತಿ ಶಿಕ್ಷಣದಿಂದ ಮಾತ್ರ ಸಾಧ್ಯ. ಹೀಗಾಗಿ ಕಷ್ಟಪಟ್ಟು, ಚೆನ್ನಾಗಿ ವ್ಯಾಸಂಗ ಮಾಡಿ ಉತ್ತಮ ವಿದ್ಯಾವಂತರಾಗುವಂತೆ ತಾಲೂಕಿನ ನಿಡಗಲ್‌ ವಾಲ್ಮೀಕಿ ಆಶ್ರಮದ ಸಂಜಯ್‌ ಕುಮಾರ್‌ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಶನಿವಾರ ಇಲ್ಲಿನ ಶ್ರೀ ಶೃಂಗೇರಿ ಶಾರದಾ ವಿದ್ಯಾಪೀಠ ಶಾಲೆಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಕ್ಷರಭ್ಯಾಸದ ಅರಿವು ಮೂಡಿಸುವ ಮೂಲಕ ಮಾತನಾಡಿದರು.

ಇಂದಿನ ಮಕ್ಕಳೇ ನಾಳಿನ ದೇಶದ ಪ್ರಜೆಗಳು. ಈ ದೇಶದ ಪ್ರಗತಿಗಾಗಿ ಅನೇಕ ಮಹನೀಯರು ತ್ಯಾಗ ಬಲಿದಾನ ಮಾಡಿದ್ದಾರೆ. ಈ ದೇಶಕ್ಕಾಗಿ ಹೋರಾಡಿ ಮಡಿದ ಪ್ರತಿಯೊಬ್ಬ ರಾಷ್ಟ್ರ ನಾಯಕರನ್ನು ಸ್ಮರಿಸಬೇಕು. ಅವರ ಉತ್ತಮ ಸಂದೇಶ, ಜೀವನ ಚರಿತ್ರೆ ಅರ್ಥೈಸಿಕೊಳ್ಳಬೇಕು. ಮಹಾತ್ಮಗಾಂಧಿ, ಸುಭಾಷ್‌ ಚಂದ್ರಬೋಸ್‌ ಭಗತ್‌ ಸಿಂಗ್‌, ಲಾಲ್‌ ಬಹದೂರ್‌ ಶಾಸ್ತ್ರಿ ಇನ್ನೂ ಹಲವಾರು ಮಂದಿ ಹೋರಾಟಗಾರರ ತ್ಯಾಗದ ಫಲವಾಗಿ ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿಜೀ ಇತರೆ ನಾಯಕರ ಆದರ್ಶ, ತತ್ವ ಸಿದ್ಧಾಂತ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.

ಅಕ್ಷರ ಕಲಿಕೆಯಿಂದ ಉತ್ತಮ ಜ್ಞಾನ ಸಂಪಾದನೆ ಹಾಗೂ ಸಂಸ್ಕಾರ ಮತ್ತು ಸರಿಯಾದ ಮಾರ್ಗದಲ್ಲಿ ನಡೆಯಲು ಸಾಧ್ಯವಾಗಲಿದೆ. ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಬೇಕು. ಕಲಿಕೆ ಹಂತದಲ್ಲಿ ಶ್ರದ್ಧೆ ಮತ್ತು ಆಸಕ್ತಿವಹಿಸಬೇಕು. ಕಲಿಕೆ ಬಗ್ಗೆ ಹೆಚ್ಚು ನಿಗಾವಹಿಸಿದರೆ ಮಾತ್ರ ಸರಸ್ವತಿ ಒಲಿಯಲಿದ್ದು ಆಕೆ ಒಮ್ಮೆ ಒಲಿದರೆ ನೀವು ಉತ್ತುಂಗ ಶಿಖರ ಏರಲು ಸಾಧ್ಯ. ಶಿಕ್ಷಕರು ಹೇಳಿಕೊಟ್ಟಪಾಠ, ತಂದೆತಾಯಿ ಹೇಳಿದ ಮಾರ್ಗದಲ್ಲಿ ಮುನ್ನಡೆದು ಪ್ರತಿಯೊಬ್ಬ ವಿದ್ಯಾರ್ಥಿಯು ಉತ್ತಮ ವಿದ್ಯಾವಂತರಾಗಿ ಸಮೃದ್ಧವಾದ ದೇಶ ಕಟ್ಟುವಂತೆ ಕರೆ ನೀಡಿದರು.

ಈ ವೇಳೆ ಶೃಂಗೇರಿ ಶಾರದಾ ವಿದ್ಯಾ ಪೀಠ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿದ್ದರು.

Latest Videos
Follow Us:
Download App:
  • android
  • ios