Asianet Suvarna News Asianet Suvarna News

ಶಿಕ್ಷಣ ಬದುಕಿಗೆ ಸಂಜೀವಿನಿ: ಶ್ರೀನಿವಾಸ್‌

ಶಿಕ್ಷಣ ಎಂಬುದು ಬದುಕಿಗೆ ಸಂಜೀವಿನಿಯಾಗಿದೆ ಶಿಕ್ಷಣ ಕಲಿತರೆ ಜಗತ್ತನ್ನೇ ಧೈರ್ಯವಾಗಿ ಎದುರಿಸಬಹುದು ಎಂದು ಶಾಸಕ ಎಸ್.ಆರ್‌. ಶ್ರೀನಿವಾಸ್ ಅಭಿಪ್ರಾಯಪಟ್ಟರು.

Education is  Sanjeevini for Life : Srinivas snr
Author
First Published Jan 6, 2024, 9:29 AM IST

  ಗುಬ್ಬಿ :  ಶಿಕ್ಷಣ ಎಂಬುದು ಬದುಕಿಗೆ ಸಂಜೀವಿನಿಯಾಗಿದೆ ಶಿಕ್ಷಣ ಕಲಿತರೆ ಜಗತ್ತನ್ನೇ ಧೈರ್ಯವಾಗಿ ಎದುರಿಸಬಹುದು ಎಂದು ಶಾಸಕ ಎಸ್.ಆರ್‌. ಶ್ರೀನಿವಾಸ್ ಅಭಿಪ್ರಾಯಪಟ್ಟರು.

ಪಟ್ಟಣದ ಬಾಬು ಜಗಜೀವನ್ ರಾಮ್ ಭವನದಲ್ಲಿ ಶ್ರೀ ರಾಮ್ ಫೈನಾನ್ಸ್ ಲಿಮಿಟೆಡ್ ವತಿಯಿಂದ ಮಕ್ಕಳಿಗೆ ವಿದ್ಯಾರ್ಥಿ ವೇತನ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ಅದರಲ್ಲೂ ಆರ್ಥಿಕವಾಗಿ ಹಿಂದುಳಿದಿರುವ ದುರ್ಬಲರಿಗೆ ಇಂತಹ ವಿದ್ಯಾರ್ಥಿ ವೇತನಗಳು ಅವರ ಜೀವನವನ್ನೇ ಬದಲಾಯಿಸುತ್ತವೆ. ಅಂತಹ ಕೆಲಸವನ್ನು ಮಾಡುತ್ತಿರುವ ಶ್ರೀರಾಮ್ ಫೈನಾನ್ಸ್ 49 ವರ್ಷಗಳಿಂದಲೂ ಸಾಮಾಜಿಕ ಸೇವೆ ಮಾಡುತ್ತಾ ಬಂದಿರುವುದು ಶ್ಲಾಘನೀಯ. ಪ್ರತಿಯೊಂದರಲ್ಲೂ ಲಾಭ ಹಾಗೂ ನಷ್ಟ ಇದ್ದೇ ಇರುತ್ತದೆ. ಲಾಭ ಬಂದಂತಹ ಸಂದರ್ಭದಲ್ಲಿ ಇಂತಹ ಸಾಮಾಜಿಕ ಕಾರ್ಯಕ್ರಮ ಅದರಲ್ಲೂ ಶೈಕ್ಷಣಿಕವಾಗಿ ಮಕ್ಕಳಿಗೆ ಪ್ರೋತ್ಸಾಹ ಉತ್ತೇಜನ ನೀಡುವುದು ಖಂಡಿತವಾಗಿಯೂ ಬಹಳ ವಿಶೇಷ ಎನಿಸುತ್ತಿದೆ ಎಂದರು.

ಗ್ರಾಮೀಣ ಮಕ್ಕಳಿಗೆ ಇಂತಹ ವಿದ್ಯಾರ್ಥಿ ವೇತನ ನೀಡುವುದರಿಂದ ಅವರಲ್ಲಿ ಹೊಸದಾದ ಉತ್ಸಾಹ ಮತ್ತು ಶಿಕ್ಷಣದ ಬಗ್ಗೆ ಕಾಳಜಿ ಬೆಳೆಯುತ್ತದೆ ಎಂದು ತಿಳಿಸಿದರು.

ಶ್ರೀರಾಮ್ ಫೈನಾನ್ಸ್‌ನ ಪ್ರಾದೇಶಿಕ ಸ್ಟೇಟ್ ಡೆಪಾಸಿಟ್ ಹೆಡ್ ವಿಜಯ್ ಕುಮಾರ್ ಮಾತನಾಡಿ, ಸಂಸ್ಥೆಯು ಭಾರತದಲ್ಲಿ 3000ಕ್ಕೂ ಅಧಿಕ ಶಾಖೆಗಳನ್ನು ಹೊಂದಿದ್ದು 25 ಲಕ್ಷ ಗ್ರಾಹಕರನ್ನು ಹೊಂದಿದೆ. ಕೇವಲ ಆರ್ಥಿಕ ದೃಷ್ಟಿಯಿಂದ ಮಾತ್ರ ಕಂಪನಿಯನ್ನು ನೋಡದೆ ಸಾಮಾಜಿಕವಾಗಿ ಕೆಲಸ ಮಾಡಬೇಕು ಎಂಬ ಹಿನ್ನೆಲೆಯಲ್ಲಿ 7ನೇ ತರಗತಿಯಿಂದ ಮೊದಲ ದರ್ಜೆಯಲ್ಲಿ ಉತ್ತೀರ್ಣರಾದ ಹಾಗೂ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 3000 ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದು ಪ್ರತಿ ವರ್ಷ ಇಪ್ಪತೈದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಾ ಬಂದಿದ್ದೇವೆ. ಕೇವಲ ವ್ಯವಹಾರವನ್ನು ಮಾತ್ರ ನೋಡದೆ ಸಾಮಾಜಿಕ ಸೇವೆಯ ಜವಾಬ್ದಾರಿಯು ನಮ್ಮದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿಯ ಮಹಮ್ಮದ್ ಸಾಧಿಕ್, ಶೌಕತ್ ಅಲಿ, ಕುಮಾರ್, ಮುಖಂಡರಾದ ಮಂಜುನಾಥ್, ಸಿಪಿಐ ಗೋಪಿನಾಥ್, ಮುಖಂಡರಾದ ಮಂಜುನಾಥ, ಪ್ರಾದೇಶಿಕ ಬಿಸಿನೆಸ್ ಹೆಡ್ ರಾಘವೇಂದ್ರ, ಪ್ರಾದೇಶಿಕ ಬಿಸಿನೆಸ್ ಹೆಡ್ ಪ್ರವೀಣ್ ಕುಮಾರ್, ಹುಸೇನ್ ಶಿವಕುಮಾರ್, ಪ್ರಸನ್ನ ಕುಮಾರ್, ಸಿದ್ದೇಶ್, ಕ್ಲೆಂಟನ್, ರಮೇಶ್, ಶಿವಶಂಕರ್, ಸೇರಿದಂತೆ ಸಿಬ್ಬಂದಿಗಳು ವಿದ್ಯಾರ್ಥಿಗಳು ಪೋಷಕರು ಹಾಜರಿದ್ದರು.

Follow Us:
Download App:
  • android
  • ios