Asianet Suvarna News

ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಎಡನೀರು ಸ್ವಾಮೀಜಿ

* ಎಡನೀರು ಶ್ರೀಗಳಿಂದ ಉಡುಪಿ ಕೃಷ್ಣನ ದರ್ಶನ
* ಸ್ವಾಮೀಜಿ ಬರಮಾಡಿಕೊಂಡ ಮಾಡಿಕೊಂಡ ಪರ್ಯಾಯ ಅದಮಾರು ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು
* ಕನಕನವಗ್ರಹ ಕಿಂಡಿಯ ಮೂಲಕ ಕೃಷ್ಣದೇವರ ದರ್ಶನ

Edneer swamiji visits udupi Sri krishna mutt mah
Author
Bengaluru, First Published Jul 13, 2021, 5:48 PM IST
  • Facebook
  • Twitter
  • Whatsapp

ಉಡುಪಿ(ಜು. 13)    ಶ್ರೀ ಕೃಷ್ಣಮಠಕ್ಕೆ ಮಂಗಳವಾರ ಆಗಮಿಸಿದ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀತೀರ್ಥ ಸ್ವಾಮೀಜಿಯವರನ್ನು ವೇದಘೋಷ, ಮಂಗಳವಾದ್ಯದೊಂದಿಗೆ ಸ್ವಾಗತಿಸಿಸಲಾಯಿತು.

ಸ್ವಾಮೀಜಿ ಬರಮಾಡಿಕೊಂಡ ಪರ್ಯಾಯ ಅದಮಾರು ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಕನಕನವಗ್ರಹ ಕಿಂಡಿಯ ಮೂಲಕ ಕೃಷ್ಣದೇವರ ದರ್ಶನ ಮಾಡಿಸಿ, ಮ್ಮ ಪರ್ಯಾಯದಲ್ಲಿ ಪ್ರಥಮವಾಗಿ ಆಗಮಿಸಿದ ಎಡನೀರು ಶ್ರೀಪಾದರಿಗೆ ಗೌರವಿಸಿದರು.

ಉಡುಪಿ ಶ್ರೀಕೃಷ್ಣನ ದರ್ಶನಕ್ಕೆ ಅವಕಾಶ; ಟೈಮಿಂಗ್ಸ್ ತಿಳಿದುಕೊಳ್ಳಿ

ಎಡನೀರು ಶ್ರೀಪಾದರು, ತಮ್ಮ ಚಾತುರ್ಮಾಸ ವ್ರತ ಕೈಗೊಳ್ಳುವ ಮುಂಚಿತವಾಗಿ ಶ್ರೀಕೃಷ್ಣ ದೇವರ ದರ್ಶನ ಪಡೆದಿದ್ದು ತಮಗೆ ಬಹಳ ಸಂತೋಷವಾಯಿತು ಎಂದರು.  ಮಠದ ದಿವಾನ ಲಕ್ಷ್ಮೀನಾರಾಯಣ ಮುಚ್ಚಿoತಾಯರು ಸ್ವಾಗತಿಸಿದರು. ಆಸ್ಥಾನ ವಿದ್ವಾಂಸ ಕುತ್ಪಾಡಿ ಕೃಷ್ಣರಾಜ ಆಚಾರ್ಯರು ಕಾರ್ಯಕ್ರಮ ನಿರ್ವಹಿಸಿ, ಮಠದ ಪ್ರಧಾನ ವ್ಯವಸ್ಥಾಪಕ ಗೋವಿಂದರಾಜ್ ಧನ್ಯವಾದ ನೀಡಿದರು. ಸಂಪರ್ಕಾಧಿಕಾರಿ ಶ್ರೀಶ ಕಡೆಕಾರ್ ಹಾಗೂ ಶ್ರೀಕೃಷ್ಣ ಸೇವಾ ಬಳಗದ ಸದಸ್ಯರು ಉಪಸ್ಥಿತರಿದ್ದರು.

Follow Us:
Download App:
  • android
  • ios