Asianet Suvarna News Asianet Suvarna News

ನಮ್ಮ ಮೆಟ್ರೋದಲ್ಲಿ ಆಹಾರ ಸೇವಿಸಿದವನಿಗೆ ಬಿಸಿ ಮುಟ್ಟಿಸಿದ ಬಿಎಂಆರ್‌ಸಿಎಲ್‌, 500 ರೂ ದಂಡ

ಇತ್ತೀಚೆಗೆ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವ ವೇಳೆ ಆಹಾರ ಸೇವಿಸಿದ ವ್ಯಕ್ತಿಗೆ ಬೆಂಗಳೂರು ಮೆಟ್ರೋ ನಿಗಮ ಬಿಸಿ ಮುಟ್ಟಿಸಿದ್ದು, 500 ರೂ ದಂಡ ವಸೂಲಿ ಮಾಡಿದೆ.

Eating in Bengaluru Namma Metro train Man fined gow
Author
First Published Oct 6, 2023, 11:41 AM IST

ಬೆಂಗಳೂರು (ಅ.6): ಇತ್ತೀಚೆಗೆ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವ ವೇಳೆ ಆಹಾರ ಸೇವಿಸಿದ ವ್ಯಕ್ತಿಗೆ ಬೆಂಗಳೂರು ಮೆಟ್ರೋ ನಿಗಮ ಬಿಸಿ ಮುಟ್ಟಿಸಿದ್ದು, 500 ರೂ ದಂಡ ವಸೂಲಿ ಮಾಡಿದೆ. ಜಯನಗರದಲ್ಲಿನ ಪ್ರತಿಷ್ಠಿತ ಆಭರಣ ಮಳಿಗೆ ಉದ್ಯೋಗಿ ಸುನೀಲ್‌ಕುಮಾರ್‌‌ ಇತ್ತೀಚೆಗೆ ಮೆಟ್ರೋ ರೈಲಿನಲ್ಲಿ ಆಹಾರ ಸೇವಿಸುವುದನ್ನು ಆತನ ಸ್ನೇಹಿತರೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.  ಇದು ಸಾಕಷ್ಟು ವೈರಲ್ ಆಗಿದ್ದ ಈ ವಿಡಿಯೋ ನೋಡಿದವರು ತೀವ್ರ ಟೀಕಿಸಿ ಸೂಕ್ತ ಕ್ರಮಕ್ಕೆ ಮೆಟ್ರೋ ನಿಗಮ ವನ್ನು ಒತ್ತಾಯಿಸಿದ್ದರು.

ಐಟಿ ಉದ್ಯೋಗಿಗಳ ಸಂತಸ ಮುಂದೂಡಿದ ನಮ್ಮ ಮೆಟ್ರೋ: ನೇರಳೆ ಮಾರ್ಗದ ಲಿಂಕ್‌ ಮಾರ್ಗ ಉದ್ಘಾಟನೆ ವಿಳಂಬ

ಪ್ರತಿದಿನ ಸಂಪಿಗೆ ಮೆಟ್ರೋ ರೋಡ್ ಮೆಟ್ರೋ ನಿಲ್ದಾಣದಿಂದಲೇ ಪ್ರಯಾಣಿಸುತ್ತಿದ್ದ ಸುನೀಲ್, ಎಂದಿನಂತೆ ನಿಲ್ದಾಣಕ್ಕೆ ಬಂದಾಗ ಬಿಎಂಆರ್‌ಸಿಎಲ್‌ ಅಧಿಕಾರಿಗಳು ಭದ್ರತಾ ಸಿಬ್ಬಂದಿ ಮೂಲಕ ಆತನನ್ನು ತಡೆದಿದ್ದಾರೆ. ಬಳಿಕ ಆತನನ್ನು ತರಾಟೆಗೆ ತೆಗೆದುಕೊಂಡು 500 ರೂ ದಂಡ ವಿಧಿಸಿದ್ದಾರೆ. ಅಲ್ಲದೆ, ಸನಿಹದ ಜಯನಗರ ಪೊಲೀಸ್ ಠಾಣೆಗೆ ಕರೆದೊಯ್ದು ಮುಂದೆ ಈ ರೀತಿ ವರ್ತಿಸದಂತೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.

ಈ ಬಗ್ಗೆ ಮಾತನಾಡಿದ ಬಿಎಂಆರ್‌ಸಿಎಲ್‌ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚೌಹಾಣ್, ನಿಯಮಾವಳಿ ಪ್ರಕಾರ ಮೆಟ್ರೋ ಒಳಗೆ ಹಾಗೂ ಪ್ಲಾಟ್ ಫಾರ್ಮ್ ನಲ್ಲಿ ಆಹಾರವನ್ನು ಸೇವನೆ ಮಾಡುವಂತಿಲ್ಲ. ಇದನ್ನು ಮೀರಿದ್ದರಿಂದ ದಂಡ ವಿಧಿಸಲಾಗಿದೆ ಎಂದು ತಿಳಿಸಿದರು.

ದೆಹಲಿ ಮೆಟ್ರೋದಲ್ಲಿ ಪ್ರಯಾಣಿಕನ ಜೊತೆ ಬಾಲಿವುಡ್‌ ನಟಿಯ ಫೈಟ್‌, ವಿಡಿಯೋ ವೈರಲ್‌!

40 ಸೆಕೆಂಡ್‌ಗಳ ವೀಡಿಯೊ ಕೆಲವು ದಿನಗಳಿಂದ ಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್‌ ಆಗಿದ್ದು,ಸುನೀಲ್‌ಕುಮಾರ್‌‌  ತಿನ್ನುವಾಗ ನಗುತ್ತಿರುವುದನ್ನು ತೋರಿಸುತ್ತದೆ,  ವೀಡಿಯೊದಲ್ಲಿನ ಧ್ವನಿಯಲ್ಲಿ ಅವನ ಸ್ನೇಹಿತರಲ್ಲಿ ಒಬ್ಬ, ಗೋಬಿ ತಿಂದವನನ್ನು ಅನಕ್ಷರಸ್ಥ ಎಂದು ತಮಾಷೆಯಾಗಿ ಹೇಳಿದ್ದಾನೆ. 

ಬಿಎಂಆರ್‌ಸಿಎಲ್‌ನ ಕಾರ್ಯಾಚರಣೆ ಮತ್ತು ನಿರ್ವಹಣೆಯ ಕಾರ್ಯನಿರ್ವಾಹಕ ನಿರ್ದೇಶಕ ಎ ಎಸ್. ಶಂಕರ್ ಪ್ರಯಾಣಿಕರು ಸಾಮಾನ್ಯವಾಗಿ ನಿಯಮಗಳನ್ನು ಪಾಲಿಸುವುದರಿಂದ ಇದು ಬಹಳ ಅಪರೂಪದ ಘಟನೆಯಾಗಿದೆ. ಮಂಗಳವಾರ ಬೆಳಗ್ಗೆ 9:30ಕ್ಕೆ ಜಯನಗರದಲ್ಲಿ ಮೂವರು ಮೆಟ್ರೋ ರೈಲಿನಿಂದ ಇಳಿದರು. ಕಾಯುತ್ತಿದ್ದ ಭದ್ರತಾ ಸಿಬ್ಬಂದಿ ಅವರನ್ನು ಸಮೀಪದ ಪೊಲೀಸ್ ಠಾಣೆಗೆ ಕರೆದೊಯ್ದರು.  ಭದ್ರತಾ ಸಿಬ್ಬಂದಿ ಮೆಟ್ರೋ ನಿಲ್ದಾಣಗಳಾದ್ಯಂತ ವಿಡಿಯೋ ರೆಕಾರ್ಡಿಂಗ್ ಅನ್ನು ಗಮನಿಸಿದ್ದಾರೆ ಮತ್ತು ಅಪರಾಧಿಗಳನ್ನು ಗುರುತಿಸಿದ್ದಾರೆ ಎಂದು ಶಂಕರ್ ಹೇಳಿದರು.

Follow Us:
Download App:
  • android
  • ios