ಐಟಿ ಉದ್ಯೋಗಿಗಳ ಸಂತಸ ಮುಂದೂಡಿದ ನಮ್ಮ ಮೆಟ್ರೋ: ನೇರಳೆ ಮಾರ್ಗದ ಲಿಂಕ್‌ ಮಾರ್ಗ ಉದ್ಘಾಟನೆ ವಿಳಂಬ

ಬೆಂಗಳೂರು ನಮ್ಮ ಮೆಟ್ರೋ ನೇರಳೆ ಮಾರ್ಗದ ಲಿಂಕ್‌ ಮಾರ್ಗ ಹಾಗೂ ಕೆಂಗೇರಿ ಚಲ್ಲಘಟ್ಟ ಮಾರ್ಗದ ಉದ್ಘಾಟನೆ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ಬಿಎಂಆರ್‌ಸಿಎಂ ಎಂಡಿ ಅಂಜುಂ ಪರ್ವೇಜ್‌ ತಿಳಿಸಿದ್ದಾರೆ.

Bengaluru IT employees happiness postponed Nama Metro purple link line inauguration Delay sat

ಬೆಂಗಳೂರು (ಅ.06) : ರಾಜ್ಯ ರಾಜಧಾನಿ ಬೆಂಗಳೂರು ನೇರಳೆ ಮಾರ್ಗದಲ್ಲಿ ಕೆಂಗೇರಿ ಚಲ್ಲಘಟ್ಟ ಹಾಗೂ ಗರುಡಾಚಾರ್ ಪಾಳ್ಯ ಮತ್ತು ವೈಟ್ ಫೀಲ್ಡ್ ನಡುವಿನ ಮೆಟ್ರೋ ಮಾರ್ಗದ ಉದ್ಘಾಟನೆ ದಿನಾಂಕವನ್ನು ನಿಗದಿ ಮಾಡಿಲ್ಲ. ಇನ್ನು ಅ.6 ಅಥವಾ ಅ.7 ರಂದು ಈ ಮಾರ್ಗಗಳನ್ನು ಉದ್ಘಾಟನೆ ಮಾಡಲಾಗುತ್ತದೆ ಎಂದು ಸುಳ್ಳು ಸುದ್ದಿ ಹರದಿಸಲಾಗುತ್ತಿದೆ ಎಂದು ಬೆಂಗಳೂರು ಮೆಟ್ರೋ ಕಾರ್ಪೋರೇಶನ್ ಲಿಮಿಟೆಡ್ (ಬಿಎಂ ಅರ್ ಸಿ ಎಲ್) ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಸ್ಪಷ್ಟೀಕರಣ ನೀಡಿದ್ದಾರೆ.

ಕೆಲವು ಸುದ್ದಿ ಮಾಧ್ಯಮಗಳಲ್ಲಿ ಅ.6 ಅಥವಾ ಅ.7 ರಂದು ನಮ್ಮ ಮೆಟ್ರೋ ನೇರಳೆ ಮಾರ್ಗದ ಸಂಪೂರ್ಣ ಮಾರ್ಗದಲ್ಲಿ (ಚಲ್ಲಘಟ್ಟ - ವೈಟ್ ಫೀಲ್ಡ್) ವರೆಗೆ ಮೆಟ್ರೋ ಸಂಚಾರ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಮುಂದುವರೆದು ಪ್ರಧಾನಿ ನರೇಂದ್ರ ಮಾಡಿ ಅವರೇ ವರ್ಚುವಲ್ ಆಗಿ ಮೆಟ್ರೋ ಮಾರ್ಗಕ್ಕೆ ಚಾಲನೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ನೈಜವಾಗಿ ಇನ್ನೂ ಈ ಮಾರ್ಗದಲ್ಲಿ ರೈಲು ಸಂಚಾರ ಉದ್ಘಾಟನೆ ದಿನಾಂಕವನ್ನು ನಿಗದಿ ಮಾಡಿಲ್ಲ. ಆದರೆ, ಮೆಟ್ರೋ ರೈಲು ಸಂಚಾರಕ್ಕೆ ಬೇಕಾದ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿವೆ. ಇನ್ನು ಉದ್ಘಾಟನೆ ಮಾತ್ರ ಬಾಕಿಯಿದ್ದು, ಶೀಘ್ರವೇ ದಿನಾಂಕ ಹೊಂದಾಣಿಕೆ ಮಾಡಿಕೊಂಡು ಉದ್ಘಾಟನೆ ನೆರವೇರಿಸಲಾಗುವುದು ಎಂದು ಬಿ ಎಂ ಆರ್ ಸಿ ಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಹೇಳಿದ್ದಾರೆ.

ಬೆಂಗಳೂರು ಬಿಎಂಟಿಸಿ ಬಸ್‌ ನಿಲ್ದಾಣವನ್ನೇ ಕದ್ದೊಯ್ದ ಕಳ್ಳರು: ಬೆಚ್ಚಿಬಿದ್ದ ಬಿಬಿಎಂಪಿ ಅಧಿಕಾರಿಗಳು

ನಮ್ಮ ಮೆಟ್ರೋ ನೇರಳೆ ಮಾರ್ಗವು ಚಲ್ಲಘಟ್ಟದಿಂದ ಆಡುಗೋಡಿ (ವೈಟ್‌ಫಿಲ್ಡ್) ವರೆಗೆ ನಿರ್ಮಾಣ ಮಾಡಲಾಗಿದೆ. ಕೆಂಗೇರಿ-ಚಲ್ಲಘಟ್ಟ ವಿಸ್ತರಿಸಿದ ಮಾರ್ಗ ಮತ್ತು ಬೈಯಪ್ಪನಹಳ್ಳಿ- ಕೆ.ಆರ್.ಪುರಂ ಸಂಪರ್ಕ ಕೊಂಡಿ ಮಾರ್ಗದ ಕೆಲಸ ಪೂರ್ಣಗೊಂಡಿದೆ. ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (CMRC) ಕಳೆದ ವಾರವಷ್ಟೇ ಈ ಎರಡೂ ಮಾರ್ಗಗಳಲ್ಲಿ ಮೆಟ್ರೋ ಓಡಿಸಲು ಅನುಮೋದನೆ ನೀಡಿದ್ದಾರೆ. ಬೈಯಪ್ಪನಹಳ್ಳಿ-ಕೆಆರ್ ಪುರ ವರೆಗೆ 2.2 ಕಿಲೋ ಮೀಟರ್‌ ಉದ್ದದ ಮಾರ್ಗವು ಹಾಗೂ ಕೆಂಗೇರಿ- ಚಲ್ಲಘಟ್ಟ 1.3 ಕಿಮೀ ಮಾರ್ಗದಲ್ಲಿ ಶೀಘ್ರವೇ ಮೆಟ್ರೋ ಸಂಚಾರ ಮಾಡಲಿದೆ. ಆದರೆ, ಗಣ್ಯರಿಂದ ಉದ್ಘಾಟನೆ ಮಾಡಿಸಲು ದಿನಾಂಕ ಹೊಂದಾಣಿಕೆ ಮಾಡಲಾಗುತ್ತಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. 

ಗಣ್ಯರಿಂದ ಉದ್ಘಾಟನೆ ನೆರವೇರಿದ ಬಳಿಕ ಅಕ್ಟೋಬರ್‌ ತಿಂಗಳೊಳಗೆ ಮೈಸೂರು ರಸ್ತೆಯ ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ ವರೆಗೆ 42.53 ಕಿ.ಮೀ (Whitefield- Challaghatta  42.53 km) ಮಾಸಂಪೂರ್ಣವಾಗಿ ವಾಣಿಜ್ಯ ಬಳಕೆಗೆ ಮುಕ್ತಗೊಳ್ಳಲಿದೆ. ಇದರಿಂದಾಗಿ ಐಟಿ ಉದ್ಯೋಗಿಗಳು ಸೇರಿದಂತೆ ಸಾರ್ವಜನಿಕರು ಮೈಸೂರು ರಸ್ತೆಯಿಂದ ಸುಲಭವಾಗಿ ವೈಟ್‌ಫಿಲ್ಡ್‌ಗೆ ತೆರಳಲು ಅನುಕೂಲ ಆಗಲಿದೆ. ಮೈಸೂರು ಭಾಗದ ಎಲ್ಲ ಐಟಿ ಕಂಪನಿ ಉದ್ಯೋಗಿಗಳಿಗೆ ಇದು ಹೆಚ್ಚಿನ ಅನುಕೂಲ ಆಗಲಿದೆ.

ರೀ ರೈಲು ತೆರವು ಯಶಸ್ವಿ, ಕೊನೆಗೂ ಹಸಿರು ಮಾರ್ಗದಲ್ಲಿ ಮೆಟ್ರೋ ಸಂಚಾರ ಮತ್ತೆ ಆರಂಭ

ನೇರಳೆ ಮಾರ್ಗದ 42.53 ಕಿ.ಮೀ ಮಾರ್ಗದಲ್ಲಿ 37 ನಿಲ್ದಾಣಗಳ ವಿವರ:

  1. ವೈಟ್‌ಫೀಲ್ಡ್ (ಕಾಡುಗೋಡಿ)    
  2. ಹೋಪ್ ಫಾರ್ಮ್ ಚನ್ನಸಂದ್ರ
  3. ಕಾಡುಗೋಡಿ ಟ್ರೀ ಪಾರ್ಕ್
  4. ಪಟ್ಟಂದೂರು ಅಗ್ರಹಾರ
  5. ಶ್ರೀ ಸತ್ಯ ಸಾಯಿ ಆಸ್ಪತ್ರೆ
  6. ನಲ್ಲೂರುಹಳ್ಳಿ
  7. ಕುಂದಲಹಳ್ಳಿ    
  8. ಸೀತಾರಾಮ ಪಾಳ್ಯ
  9. ಹೂಡಿ
  10. ಗರುಡಾಚಾರ್‍‍ಪಾಳ್ಯ
  11. ಸಿಂಗಯ್ಯನಪಾಳ್ಯ
  12. ಕೃಷ್ಣರಾಜಪುರಂ (ಕೆ.ಆರ್.ಪುರಂ)
  13. ಬೆನ್ನಿಗಾನಹಳ್ಳಿ (ಟಿನ್ ಫ್ಯಾಕ್ಟರಿ)
  14. ಬೈಯ್ಯಪ್ಪನಹಳ್ಳಿ
  15. ಸ್ವಾಮಿ ವಿವೇಕಾನಂದ ರಸ್ತೆ
  16. ಇಂದಿರಾನಗರ
  17. ಹಲಸೂರು
  18. ಟ್ರಿನಿಟಿ
  19. ಮಹಾತ್ಮಾ ಗಾಂಧಿ ರಸ್ತೆ
  20. ಕಬ್ಬನ್ ಪಾರ್ಕ್
  21. ಡಾ. ಬಿ ಆರ್ ಅಂಬೇಡ್ಕರ್ ನಿಲ್ದಾಣ, ವಿಧಾನ ಸೌಧ
  22. ಸರ್ ಎಂ. ವಿಶ್ವೇಶ್ವರಯ್ಯ ನಿಲ್ದಾಣ, ಸೆಂಟ್ರಲ್ ಕಾಲೇಜು
  23. ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್
  24. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ
  25. ಮಾಗಡಿ ರಸ್ತೆ
  26. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣ, ಹೊಸಹಳ್ಳಿ
  27. ವಿಜಯನಗರ    
  28. ಅತ್ತಿಗುಪ್ಪೆ
  29. ದೀಪಾಂಜಲಿನಗರ
  30. ಮೈಸೂರು ರಸ್ತೆ
  31. ಪಂತರಪಾಳ್ಯ - ನಾಯಂಡಹಳ್ಳಿ
  32. ರಾಜರಾಜೇಶ್ವರಿ ನಗರ
  33. ಜ್ಞಾನಭಾರತಿ    
  34. ಪಟ್ಟಣಗರೆ
  35. ಕೆಂಗೇರಿ ಬಸ್ ಟರ್ಮಿನಲ್
  36. ಕೆಂಗೇರಿ
  37. ಚಲ್ಲಘಟ್ಟ
Latest Videos
Follow Us:
Download App:
  • android
  • ios