ಮಂಡ್ಯ(ಆ.29): ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ಆಯೋಜಿಸಿದ್ದ ರಾಗಿಮುದ್ದೆ ತಿನ್ನುವ ಸ್ಪರ್ಧೆಯಲ್ಲಿ ಮದ್ದೂರಿನ ಸುರೇಶ್‌ 7 ಮುದ್ದೆ ಸೇವಿಸಿ ಪ್ರಥಮ ಸ್ಥಾನ ಪಡೆದರು.

ಪಟ್ಟಣದ ಶಾಂತಿ ಕಾಲೇಜು ಮುಂಭಾಗದ ಮೈದಾನದಲ್ಲಿ ಅಪೂರ್ವ ಕೀರ್ತನಾ ಟ್ರಸ್ವ್‌ ಸಹಯೋಗದಲ್ಲಿ ನಡೆದ ಮೂರನೇ ವರ್ಷದ ರಾಗಿ ಮುದ್ದೆ ತಿನ್ನುವ ಸ್ಪರ್ಧೆಯಲ್ಲಿ ಹಲವರು ಭಾಗವಹಿಸಿ ತಮ್ಮ ಸಾಮರ್ಥ್ಯವನ್ನು ರಾಗಿ ಮುದ್ದೆ ತಿನ್ನುವುದರಲ್ಲಿ ತೋರಿಸಿದರು.

ಅಂತಿಮವಾಗಿ ಸ್ಪರ್ಧೆಯಲ್ಲಿ ಮದ್ದೂರಿನ ಸುರೇಶ್‌ 7 ಮುದ್ದೆ ಸೇವಿಸಿ ಪ್ರಥಮ ಬಹುಮಾನ ಪಡೆದು 5 ಸಾವಿರ ರು ನಗದು, ಪಟ್ಟಣದ ಪೇಟೆ ಬೀದಿ ನಾಗೇಂದ್ರ 6 ಮುದ್ದೆ ಸೇವಿಸಿ ದ್ವಿತೀಯ ಸ್ಥಾನ ಗಳಿಸಿ 3 ಸಾವಿರ ರು. ನಗದು ಹಾಗೂ ಬೋಸೇಗೌಡನದೊಡ್ಡಿಯ ರಾಜೇಶ್‌ 4 ಮುದ್ದೆ ಸೇವಿಸಿ ಮೂರನೇ ಸ್ಥಾನಗಳಿಸಿ 2 ಸಾವಿರ ನಗದು ರು ಬಹುಮಾನ ಪಡೆದರು.

ಇದಕ್ಕೂ ಮೊದಲು ಸ್ಪರ್ಧೆಯನ್ನು ಉದ್ಘಾಟಿಸಿದ ಭಗವಾನ್‌ ಬುದ್ಧ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ವೈ.ಎಸ್‌.ಸಿದ್ದರಾಜು ಮಾತನಾಡಿ, ಪೂರ್ವಿಕರು ಕೃಷಿಕರು ನಡೆಸುತ್ತಿದ್ದ ಸ್ಪರ್ಧೆಗಳಲ್ಲಿ ರಾಗಿಮುದ್ದೆ ಊಟದ ಸ್ಪರ್ಧೆಯೂ ಒಂದಾಗಿದೆ. ಇಂತಹ ಸ್ಪರ್ಧೆ ಆಯೋಜಿಸಿರುವುದೇ ಉತ್ತಮ ಕೆಲಸ ಎಂದು ತಿಳಿಸಿದರು.

ಇಂದು ಮೊಬೈಲ್ ಯುವ ಗೇಮ್‌ಗಳನ್ನು ಸಹ ಆಡುವ ಬದಲು ನೋಡುವ ಕಾಲ ಬಂದಿದೆ. ಆದರೆ, ಗ್ರಾಮೀಣ ಸೊಗಡಿನ ಕ್ರೀಡೆಗಳು ಇಂದಿಗೂ ಮನರಂಜನೆ ಹಾಗೂ ಉತ್ಸಾಹ ನೀಡುತ್ತವೆ. ಆದರೆ. ಅಂತಹ ಕ್ರೀಡೆ,ಸ್ಪರ್ಧೆಗಳು ಮರೆಯುತ್ತಿರುವ ವೇಳ ನಾಟಿಕೋಳಿಸಾರು ರಾಗಿಮುದ್ದೆ ಊಟದ ಸ್ಪರ್ಧೆ ಆಯೋಜಿಸಿರುವುದು ಉತ್ತಮ ಕೆಲಸವಾಗಿದೆ. ಟ್ರಸ್ವ್‌ ಇನ್ನೂ ಇಂತಹ ಕಾರ್ಯಕ್ರಮಗಳನ್ನು ನಡೆಸಲು ಮುಂದಾಗಬೇಕೆಂದು ಸಲಹೆ ನೀಡಿದರು.

ಮಂಡ್ಯ: ಮೂಲಭೂತಸೌಕರ್ಯಗಳಲ್ಲಿ ಅವ್ಯವಸ್ಥೆ, ಎಲ್ಲೋಯ್ತು 150 ಕೋಟಿ..?

ಈ ವೇಳೆ ಅಪೂರ್ವ ಕೀರ್ತನಾ ಟ್ರಸ್ವ್‌ ನ ಅಧ್ಯಕ್ಷ ನಾಗೇಶ್‌, ಚಾಲುಕ್ಯ ವಾಹಿನಿಯ ಬಾಲಚಂದ್ರ, ಪರಸಭೆ ಸದಸ್ಯ ಸಿದ್ದರಾಜು, ಮುಖಂಡರಾದ ಅಂಕನಾಥ, ರಮೇಶ್‌, ಶಿವಣ್ಣ ಉಪಸ್ಥಿತರಿದ್ದರು.