Asianet Suvarna News Asianet Suvarna News

ಬೆಂಗಳೂರಿನಲ್ಲಿ ನೀರಿನ ಸದ್ಬಳಕೆ, ಉಳಿತಾಯಕ್ಕೆ 4 ಆ್ಯಪ್ ಲೋಕಾರ್ಪಣೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರಿನಲ್ಲಿ ನೀರಿನ ಸದ್ಬಳಕೆ ಹಾಗೂ ನೀರಿನ ಉಳಿತಾಯಕ್ಕಾಗಿ ಬಿಡಬ್ಲ್ಯೂಎಸ್‌ಎಸ್‌ಬಿ ಸಿದ್ಧಪಡಿಸಿದ 4 ಮೊಬೈಲ್‌ ಆ್ಯಪ್‌ಗಳನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಲೋಕಾರ್ಪಣೆ ಮಾಡಿದರು.

Dy CM DK Shivakumar launched 4 BWSSB apps for efficient water use and savings at Bengaluru sat
Author
First Published Mar 14, 2024, 7:00 PM IST

ಬೆಂಗಳೂರು (ಮಾ.14): ಸಮೃದ್ಧ ಬೆಂಗಳೂರಿಗೆ ನೀರು ಉಳಿಸುವ ಅಗತ್ಯತೆ ಮತ್ತು ಪ್ರಾಮುಖ್ಯತೆ ಸಾರುವ 8 ಸಂದೇಶಗಳನ್ನು ಹೊತ್ತ ಇ-ರಿಕ್ಷಾಗಳು ಹಾಗೂ 4 ಮೊಬೈಲ್‌ ಆ್ಯಪ್‌ಗಳನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಲೋಕಾರ್ಪಣೆ ಮಾಡಿದರು.

ವಿಧಾನಸೌಧದ ಪೂರ್ವಧ್ವಾರದ ಬಳಿ ಸಮೃದ್ಧ ಬೆಂಗಳೂರಿಗಾಗಿ  ಬೆಂಗಳೂರು ನಗರ ನಾಗರಿಕರಲ್ಲಿ ನೀರಿನ ಕುರಿತು ಅರಿವು ಮೂಡಿಸುವ ಮತ್ತು ಉಳಿತಾಯಕ್ಕೆ ಒತ್ತು ನೀಡುವ ಉದ್ದೇಶದಿಂದ ಬೆಂಗಳೂರು  ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ 'ನೀರು ಉಳಿಸಿ ಬೆಂಗಳೂರು ಬೆಳೆಸಿ ಅಭಿಯಾನ'ಕ್ಕೆ ಗುರುವಾರ ಚಾಲನೆ ನೀಡಿದರು. ಬೆಂಗಳೂರಿಗೆ ನೀರು ಉಳಿಸುವ ಅಗತ್ಯತೆ ಮತ್ತು ಪ್ರಾಮುಖ್ಯತೆ ಸಾರುವ ಸಂದೇಶ, ನೀರು ಉಳಿಸುವ 08 ದಾರಿಗಳು ಸೇರಿದಂತೆ ನೀರಿನ ಸಂದೇಶ ಹೊತ್ತ ಇ-ರಿಕ್ಷಾ ವಾಹನಗಳಿಗೆ ಇದೇ ಸಂದರ್ಭದಲ್ಲಿ ಹಸಿರು ನಿಶಾನೆ ತೋರಿದರು. ಸದರಿ ಇ-ರಿಕ್ಷಾ ವಾಹನಗಳು ಅಭಿಯಾನದ ಸಂದೇಶ ಹೊತ್ತು ಇಡೀ ಬೆಂಗಳೂರು ನಗರದಾದ್ಯಂತ ಸಂಚರಿಸಿ ಅರಿವು ಮೂಡಿಸಲಿವೆ. ಜೊತೆಗೆ, ಬೆಂಗಳೂರಿಗರ ಅನುಕೂಲಕ್ಕಾಗಿ ಬೆಂಗಳೂರು ಜಲಮಂಡಳಿ ಸೃಜಿಸಿದ 4 ಆ್ಯಪ್ ಗಳನ್ನು ಸಹ ಲೋಕಾರ್ಪಣೆ ಮಾಡಿದರು.

ಕರ್ನಾಟಕಕ್ಕೆ 2024ರ ಮೊದಲ ಮಳೆ ಸಿಂಚನ; ನಿನ್ನೆ ಕೊಡಗು, ಇಂದು ಚಿಕ್ಕಮಗಳೂರಲ್ಲಿ ತಂಪೆರೆದ ಮಳೆರಾಯ!

  • 1) ಸಂಸ್ಕರಿಸಿದ ನೀರನ್ನು ಸಾರ್ವಜನಿಕರು ಕುಡಿಯುವುದನ್ನು ಹೊರತುಪಡಿಸಿ, ಇನ್ನಿತರೆ ಕಾರ್ಯಗಳಿಗೆ ಮರುಬಳಕೆ ಮಾಡಲು ಕಾಯ್ದಿರಿಸಿ ಸರಬರಾಜು ಪಡೆಯಬಹುದಾದ ಜಲಸ್ನೇಹಿ ಆ್ಯಪ್ ಲೋಕಾರ್ಪಣೆ ಮಾಡಿದರು.
  • 2) ಅಂತರ್ಜಲ ಎಂಬ ಆ್ಯಪ್ ಮೂಲಕ ಬೆಂಗಳೂರು ನಗರದ ನಾಗರಿಕರು ತಮ್ಮ ಮನೆಯಲ್ಲಿಯೇ ಆ್ಯಪ್ ಮೂಲಕ ಕೊಳವೆಬಾವಿಯ ಅನುಮತಿ ಪಡೆಯಲು ಅರ್ಜಿ ಸಲ್ಲಿಸಬಹುದು. ನಂತರ, ತಾಂತ್ರಿಕ ಸಮಿತಿ ವರದಿ ಪರಿಶೀಲಿಸಿ ನಿರಾಪೆಕ್ಷಣಾ ಪತ್ರವನ್ನು ಮಂಡಳಿ ಒದಗಿಸಲಿದೆ.
  • 3) ಅನ್ಯ ಉದ್ದೇಶಕ್ಕೆ ಕುಡಿಯುವ ನೀರು ಬಳಸುವುದನ್ನು ಮಂಡಳಿ ಈಗಾಗಲೇ ನಿಷೇಧಿಸಲಾಗಿದ್ದು, ನೀಷೇಧ ಮಾಡಿದ್ದು ಉಲ್ಲಂಘನೆ ಮಾಡುತ್ತಿರುವ ಪ್ರಕರಣಗಳು ಕಂಡುಬಂದಲ್ಲಿ ಸ್ಥಳದಲ್ಲಿಯೇ ದಂಡ ವಿಧಿಸುವ ಜಲಸಂರಕ್ಷಕ ಆ್ಯಪ್ ಬಿಡುಗಡೆ ಮಾಡಲಾಗಿದೆ.
  • 4) ಬೆಂಗಳೂರು ನಗರ ವ್ಯಾಪ್ತಿಯಲ್ಲಿ ನೀರು ಸೋರಿಕೆ, ಒಳಚರಂಡಿ ನೀರು ಉಕ್ಕಿ ಹರಿಯುವುದು,ಜಲಮಂಡಳಿಯ ಅವಶ್ಯ ದಾಖಲಾತಿಗಳ ಸವೆ ಮಾಡಲು ಹಾಗೂ ಇನ್ನೀತರೆ ಕಾರ್ಯಗಳಿಗೆ ಸ್ವಯಂ ಸೇವೆ ಇಚ್ಚಿಸುವ ನಾಗರಿಕರು/ಎನ್‌ಜಿಒ/ನಿವೃತ್ತ ತಾಂತ್ರಿಕ ಸಿಬ್ಬಂದಿಗಳ ನೋಂದಣಿಗಾಗಿ ಜಲಮಿತ್ರ  ಆ್ಯಪ್ ಮಾಡಲಾಗಿದೆ. ಈ ಆ್ಯಪ್ ಗಳನ್ನು ಬೆಂಗಳೂರಿಗರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕೋರಿದರು.

ಮಾತುಗಾರರಿಗೆ ಮಣೆ ಹಾಕದ ಬಿಜೆಪಿ : ನಾಲಿಗೆ ಹರಿಬಿಟ್ಟವರಿಗೆ ಟಿಕೆಟ್ ಕಟ್ ಮಾಡಿತಾ ಹೈಕಮಾಂಡ್!

ಈ ಸಂದರ್ಭದಲ್ಲಿ ಶಾಸಕರಾದ ಅಶೋಕ್ ಮನಗೂಳಿ, ಬಸವರಾಜ್ ಶಿವಗಂಗಾ, ಅಪರ ಮುಖ್ಯ ಕಾರ್ಯದರ್ಶಿಗಳಾದ ರಾಕೇಶ್ ಸಿಂಗ್, ಬೆಂಗಳೂರು ಜಲಮಂಡಳಿಯ ಅಧ್ಯಕ್ಷ ಡಾ.ವಿ.ರಾಮ್‌ ಪ್ರಸಾತ್‌ ಮನೋಹರ್‌, ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರರಾವ್, ಬೆಂಗಳೂರು ಜಲಮಂಡಳಿಯ ಎಂಜನಿಯರ್‌ಗಳು ಹಾಗೂ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Follow Us:
Download App:
  • android
  • ios