ಮೈಸೂರು(ಸೆ.01): ದಸರಾ ಮಹೋತ್ಸವ- 2019ರ ವೆಬ್‌ಸೈಟ್‌ಗೆ ಅಧಿಕೃತವಾಗಿ ಚಾಲನೆ ದೊರೆತಿದ್ದು, ಹಲವು ವಿಶೇಷತೆಗಳನ್ನು ಒಳಗೊಂಡಿದೆ. ದಸರಾದಲ್ಲಿ ಪ್ರವಾಸಿಗರಿಗೆ ಅನುಕೂಲವಾಗಲು ಮೈಸೂರು ನಗರ, ರಾಜ್ಯದ ವಿವಿಧೆಡೆ ಹಾಗೂ ಟ್ರಿಣ್‌ಟ್ರಿಣ್‌ ಸೈಕಲ್‌ ನಿಲ್ದಾಣ ಇತರೆ ಭಾಗಗಳಲ್ಲಿ ದಸರಾ ಪ್ರಚಾರದ ಹೋರ್ಡಿಂಗ್ಸ್‌ಗಳನ್ನು ಅಳವಡಿಸಲಾಗುತ್ತಿದೆ. ಜೊತೆಗೆ ದಸರಾ https://www.mysoredasara.gov.in/ತ ವೆಬ್‌ಸೈಟ್‌ನಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಕನ್ನಡ, ಇಂಗ್ಲೀಷ್‌ ಭಾಷೆಗಳು ಮಾತ್ರವಲ್ಲದೇ ಇತರೆ 10 ಭಾಷೆಗಳಲ್ಲಿ ಮಾಹಿತಿ ಲಭ್ಯವಾಗುವ ವ್ಯವಸ್ಥೆ ಮಾಡಲಾಗಿದೆ.

ವೆಬ್‌ಸೈಟ್‌ ಕಂಪ್ಯೂಟರ್‌, ಮೊಬೈಲ್‌, ಟ್ಯಾಬ್‌ಗಳಲ್ಲಿ ಪುಶ್‌ ನೋಟಿಫೀಕೇಶನ್‌ ವ್ಯವಸ್ಥೆ ಹೊಂದಿದ್ದು, ಅಲರ್ಟ್‌ ಸೌಲಭ್ಯ ಕಲ್ಪಿಸಲಾಗಿದೆ. ವೆಬ್‌ಸೈಟ್‌ನಲ್ಲಿ ದಸರಾ ಪೋಲ್‌ ಆಯ್ಕೆಯಿದ್ದು, ಪ್ರವಾಸಿಗರು ತಮಗೆ ಬೇಕಾದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆಯಬಹುದು. ದಸರಾ ಕಾರ್ಯಕ್ರಮಗಳಿಗೆ ಗೂಗಲ್‌ ಕ್ಯಾಲೆಂಡರ್‌ ಜೊತೆ ಇಂಟಿಗ್ರೇಟ್‌ ಮಾಡಿಲಾಗಿದೆ.

ಮೈಸೂರು ಹಾಗೂ ಸುತ್ತಮುತ್ತಲಿನ ಎಲ್ಲ ಪ್ರವಾಸಿ ತಾಣಗಳ ಮಾಹಿತಿಯನೂ ನೀಡಲಾಗಿದೆ. ಮೈಸೂರು ದಸರಾ ಬಳಸಿ ದಸರಾ ಛಾಯಾಚಿತ್ರಗಳನ್ನು ಪ್ರವಾಸಿಗರು ಅಪ್‌ಲೋಡ್‌ ಮಾಡಬಹುದಾದ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ, ದಸರಾ ಟಿಕೆಟ್‌ಗಳನ್ನು ಖರೀದಿಸಬಹುದು ಹಾಗೂ ದಸರಾದ ಪ್ರಮುಖ ಕಾರ್ಯಕ್ರಮಗಳನ್ನು ನೇರ ಪ್ರಸಾರ ಮಾಡಲಾಗುತ್ತದೆ.

ಮೈಸೂರು: ನಳಿನ್ ಭೇಟಿ, ಅಂತರ ಕಾಯ್ದುಕೊಂಡ ಸಚಿವ ಸ್ಥಾನ ವಂಚಿತ ಶಾಸಕ

ಈ ಬಾರಿ ದಸರಾದಲ್ಲಿ 5 ಆನ್‌ಲೈನ್‌ ರಸಪ್ರಶ್ನೆ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಪ್ರತಿ ಕ್ವಿಜ್‌ನಿಂದ 5 ಮಂದಿ ವಿಜೇತರನ್ನು ಆಯ್ಕೆ ಮಾಡಿ ದಸರಾ ನೆನಪಿನ ಕಾಣಿಕೆಯನ್ನು ಬಹುಮಾನವಾಗಿ ನೀಡಲಾಗುತ್ತದೆ. ದಸರಾ ಮಹೋತ್ಸವ, ಕಾರ್ಯಕ್ರಮಗಳ ಬಗ್ಗೆ ನಿರಂತರವಾಗಿ ಮಾಹಿತಿ ನೀಡಲಾಗುವುದು.

ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರವಾಸಿಗರು ದಸರಾ ಮಹೋತ್ಸವದ ಬಗ್ಗೆ ಸಲಹೆ, ಅಭಿಪ್ರಾಯ ಹಂಚಿಕೊಳ್ಳಲು ಪ್ರತ್ಯೇಕ ವೆಬ್‌ಪುಟವನ್ನು ಮೀಸಲಿರಿಸಲಾಗಿದೆ. ಹಾಗೂ ದಸರಾ ಎಲ್ಲಾ ಉಪಸಮಿತಿಗಳ ಬಗ್ಗೆ ಮಾಹಿತಿ ವಿವಿಧ ಪ್ರಮುಖ ಇಲಾಖೆಗಳ ಜಾಲತಾಣಗಳಿಗೆ ಲಿಂಕ್‌ ಕಲ್ಪಿಸಲಾಗಿದ್ದು, ಇದನ್ನು ಪ್ರವಾಸಿಗರು ಸದುಪಯೋಗ ಪಡೆದುಕೊಳ್ಳಬಹುದು.