Asianet Suvarna News Asianet Suvarna News

ಕೊನೆಗೂ ಹೊರಬಿದ್ದ ದಸರಾ ಉಪ ಸಮಿತಿಗಳ ಜಂಬೋ ಜೆಟ್ ಪಟ್ಟಿ...!

ನಾಡಹಬ್ಬ ದಸರಾ ಅಂಗವಾಗಿ ಜಿಲ್ಲಾಡಳಿತ ರಚಿಸಿರುವ ವಿವಿಧ ಉಪ ಸಮಿತಿಗಳಿಗೆ ಅಧಿಕಾರೇತರ ಪದಾಧಿಕಾರಿಗಳನ್ನು ನೇಮಿಸಿರುವ ಪ್ರಕಟಣೆ ದಸರೆ ಆರಂಭಕ್ಕೆ ಕೆಲವೇ ಕೆಲವು ಗಂಟೆಗಳು ಇರುವಾಗ ಅರ್ಥಾತ್ ಶನಿವಾರ ಸಂಜೆ ಹೊರ ಬಿದ್ದಿದೆ.

Dussehra sub committees jumbo jet list finally out snr
Author
First Published Oct 15, 2023, 9:38 AM IST

 ಮೈಸೂರು :  ನಾಡಹಬ್ಬ ದಸರಾ ಅಂಗವಾಗಿ ಜಿಲ್ಲಾಡಳಿತ ರಚಿಸಿರುವ ವಿವಿಧ ಉಪ ಸಮಿತಿಗಳಿಗೆ ಅಧಿಕಾರೇತರ ಪದಾಧಿಕಾರಿಗಳನ್ನು ನೇಮಿಸಿರುವ ಪ್ರಕಟಣೆ ದಸರೆ ಆರಂಭಕ್ಕೆ ಕೆಲವೇ ಕೆಲವು ಗಂಟೆಗಳು ಇರುವಾಗ ಅರ್ಥಾತ್ ಶನಿವಾರ ಸಂಜೆ ಹೊರ ಬಿದ್ದಿದೆ.

ದೀಪಾಲಂಕಾರ ಉಪ ಸಮಿತಿ ಅಧ್ಯಕ್ಷರಾಗಿ ಮಹೇಶ್ ಜೋಗಿ, ಉಪಾಧ್ಯಕ್ಷರಾಗಿ ದೇವನೂರು ಮಹಾದೇವಪ್ಪ, ಎಚ್.ಜೆ. ರಾಘವೇಂದ್ರ, ಗಣೇಶ್ ಕುಡ್ಕೂರು ಸೇರಿದಂತೆ 40 ಮಂದಿಯನ್ನು ನೇಮಿಸಲಾಗಿದೆ.

ಕವಿಗೋಷ್ಠಿ ಉಪ ಸಮಿತಿ ಅಧ್ಯಕ್ಷರಾಗಿ ಮಹೇಶ್, ಉಪಾಧ್ಯಕ್ಷರಾಗಿ ನಾಗರಾಜು, ರವಿಚಂದ್ರ ಅವರನ್ನು ನೇಮಿಸಿದ್ದು, ಒಟ್ಟು 40 ಮಂದಿ ಇದ್ದಾರೆ.

15 ರಿಂದ 23 ರವರೆಗೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ

ಮೆರವಣಿಗೆ ಮತ್ತು ಪಂಜಿನ ಕವಾಯಿತು ಉಪ ಸಮಿತಿ ಅಧ್ಯಕ್ಷರಾಗಿ ವಜ್ರೇಗೌಡ, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ, ರಘು ಕಲ್ಗುಣಿಕೆ ಸೇರಿದಂತೆ 54 ಮಂದಿ ಇದ್ದಾರೆ. ಸಾಂಸ್ಕೃತಿಕ ಉಪ ಸಮಿತಿಗೆ ಅಧ್ಯಕ್ಷರಾಗಿ ಶ್ರೀನಾಥ್ ಬಾಬು, ಉಪಾಧ್ಯಕ್ಷರಾಗಿ ಹರೀಶ್, ಗಣೇಶ್, ಡಿ. ಮಂಜುನಾಥ್ ಸೇರಿದಂತೆ 56 ಮಂದಿ ಇದ್ದಾರೆ.

ಆಹಾರ ಮೇಳ ಉಪ ಸಮಿತಿಗೆ ಅಧ್ಯಕ್ಷರಾಗಿ ಎ.ಎನ್. ಸ್ವಾಮಿ, ಉಪಾಧ್ಯಕ್ಷರಾಗಿ ಮಹೇಶ್, ಚೇತನ್ ಸೇರಿ 56 ಮಂದಿ ಇದ್ದಾರೆ. ಚಲನಚಿತ್ರ ಉಪ ಸಮಿತಿ ಅಧ್ಯಕ್ಷರಾಗಿ ರಮೇಶ್, ಉಪಾಧ್ಯಕ್ಷರಾಗಿ ಎಚ್.ಎಸ್. ಕುಮಾರ್, ಆನಂದ ಸೇರಿದಂತೆ 30 ಮಂದಿ ಇದ್ದಾರೆ.

ಸ್ವಾಗತ ಮತ್ತು ಆಮಂತ್ರಣ ಉಪ ಸಮಿತಿ ಅಧ್ಯಕ್ಷರಾಗಿ ಎನ್. ನಾಗರಾಜು, ಉಪಾಧ್ಯಕ್ಷರಾಗಿ ಈಶ್ವರ್ ಚಕ್ಕಡಿ, ಶೌಕತ್ಪಾಷ ಸೇರಿ ಒಟ್ಟು 50 ಮಂದಿ ಇದ್ದಾರೆ. ಯೋಗ ದಸರಾ ಉಪ ಸಮಿತಿಗೆ ಅಧ್ಯಕ್ಷರಾಗಿ ಕೆ.ಜಿ. ದೇವರಾಜು, ಉಪಾಧ್ಯಕ್ಷರಾಗಿ ಹೇಮಂತ್ ಕುಮಾರ್, ಪ್ರೊ. ಶಿವಕುಮಾರ್, ಮಹೇಶ್ ಸೇರಿದಂತೆ 40 ಮಂದಿ ಇದ್ದಾರೆ.

ಯುವ ದಸರಾ ಉಪ ಸಮಿತಿ ಅಧ್ಯಕ್ಷರಾಗಿ ಮೈಮುಲ್ ಚೆಲುವರಾಜು, ಉಪಾಧ್ಯಕ್ಷರಾಗಿ ಹಿನಕಲ್ ನಂಜುಂಡ, ರಜತ್ ಸೇರಿ 60 ಮಂದಿ ಇದ್ದಾರೆ.

Mysuru : ದಸರಾ ವಿವಿಧ ಕಾಮಗಾರಿಗಳ ಪರಿಶೀಲನೆ

ರೈತ ದಸರಾ ಉಪ ಸಮಿತಿ ಅಧ್ಯಕ್ಷರಾಗಿ ಕೆ.ಪಿ. ಯೋಗೇಶ್, ಉಪಾಧ್ಯಕ್ಷರಾಗಿ ಕೆ.ಎಸ್. ಮಾಲೇಗೌಡ, ಹೊನ್ನನಾಯಕ ಸೇರಿ 35 ಮಂದಿ ಇದ್ದಾರೆ.

ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿ ಅಧ್ಯಕ್ಷರಾಗಿ ಸುಧಾ ಮಹದೇವಯ್ಯ, ಉಪಾಧ್ಯಕ್ಷರಾಗಿ ಲತಾ ಸಿದ್ದಶೆಟ್ಟಿ, ಬೃಂದಾ ಕೃಷ್ಣೇಗೌಡ ಸೇರಿ 40 ಮಂದಿ ಇದ್ದಾರೆ. ಸ್ತಬ್ಧಚಿತ್ರ ಉಪ ಸಮಿತಿ ಅಧ್ಯಕ್ಷರಾಗಿ ಜವರಪ್ಪ, ಉಪಾಧ್ಯಕ್ಷರಾಗಿ ಚೇತನ್, ಭಾಸ್ಕರ್ಸೇರಿ ಒಟ್ಟು 40 ಮಂದಿ ಇದ್ದಾರೆ.

ಲಲಿತ ಕಲೆ ಉಪ ಸಮಿತಿ ಅಧ್ಯಕ್ಷರಾಗಿ ಹೇಮಲತಾ, ಉಪಾಧ್ಯಕ್ಷರಾಗಿ ಜಯಚಂದ್ರ, ಮಹಮ್ಮದ್ಅಕ್ಬರ್ಅಲಿ ಸೇರಿ ಒಟ್ಟು 46 ಮಂದಿ, ಕುಸ್ತಿ ಉಪ ಸಮಿತಿ ಅಧ್ಯಕ್ಷರಾಗಿ ಶಂಕರ ಮೆಲ್ಲಹಳ್ಳಿ, ಉಪಾಧ್ಯಕ್ಷರಾಗಿ ಕೃಷ್ಣ, ರಮೇಶ, ಪೈ. ಪ್ರಸನ್ನ ಸೇರಿದಂತೆ 42 ಮಂದಿ ಇದ್ದಾರೆ.

Follow Us:
Download App:
  • android
  • ios