Asianet Suvarna News Asianet Suvarna News

Mysuru : ದಸರಾ ವಿವಿಧ ಕಾಮಗಾರಿಗಳ ಪರಿಶೀಲನೆ

ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಮೇಯರ್ ಶಿವಕುಮಾರ್ ಅವರು ವಿವಿಧ ದಸರಾ ಕಾಮಗಾರಿಗಳನ್ನು ಮಂಗಳವಾರ ಪರಿಶೀಲಿಸಿದರು.

 Mysuru : Inspection of various Dasara works  snr
Author
First Published Oct 11, 2023, 9:19 AM IST

 ಮೈಸೂರು :  ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಮೇಯರ್ ಶಿವಕುಮಾರ್ ಅವರು ವಿವಿಧ ದಸರಾ ಕಾಮಗಾರಿಗಳನ್ನು ಮಂಗಳವಾರ ಪರಿಶೀಲಿಸಿದರು.

ವಿಜಯದಶಮಿ ಜಂಬೂಸವಾರಿ ಮೆರವಣಿಗೆ ಸಾಗುವ ರಾಜಮಾರ್ಗದಲ್ಲಿ ಪರಿಶೀಲನೆಯನ್ನು ಅವರು ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿಯಿಂದ ಆರಂಭಿಸಿದರು. ನಂತರ ಚಾಮರಾಜ ವೃತ್ತ, ಕೆ.ಆರ್. ವೃತ್ತ, ಚಿಕ್ಕಗಡಿಯಾರ ವೃತ್ತ, ದೇವರಾಜ ಮಾರುಕಟ್ಟೆ, ಸಯ್ಯಾಜಿರಾವ್ ರಸ್ತೆಯ ಸಬ್ ವೇ ಸೇರಿದಂತೆ ಇತರೆಡೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಪಾಲಿಕೆ ಆಯುಕ್ತ ಅಅಸಾದ್ ಉರ್ ರೆಹಮಾನ್ ಷರೀಫ್‌ ಮತ್ತು ಇತರೆ ಅಧಿಕಾರಿಗಳು ಇದ್ದರು.

ವಿಶ್ವವಿಖ್ಯಾತ ದಸರಾ ಜಂಬೂಸವಾರಿಗೆ ಕೌಂಟ್ ಡೌನ್

ಮೈಸೂರು (ಅ.9) ವಿಶ್ವವಿಖ್ಯಾತ ದಸರಾ ಜಂಬೂಸವಾರಿಗೆ ಕೌಂಟ್ ಡೌನ್ ಶುರು ಹಿನ್ನೆಲೆ ಜಂಬೂಸವಾರಿಯ ಪ್ರಮುಖ ಆಕರ್ಷಣೆಯಾದ ಗಜಪಡೆಗೆ ಇಂದು ಮರದ ಅಂಬಾರಿ ತಾಲೀಮು ನಡೆಯಿತು.

ಶುಭ ಸೂಚನೆಯಂತೆ ಸುರಿದ ಮಳೆಯಲ್ಲೆ ನಡೆದ ಆನೆಗಳ ತಾಲೀಮು. ಎಡಬಿಡದೆ ಸುರಿಯುತ್ತಿರುವ ಮಳೆ. ಮಳೆಯಲ್ಲೂ ಗಜಪಡೆಗೆ ಮರದ ಅಂಬಾರಿ ಕಟ್ಟಿದ ಸಿಬ್ಬಂದಿ. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಮೈಸೂರಿನ ಅರಮನೆ ಆವರಣ. ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ‌ ಕೆಲವೇ ದಿನಗಳಷ್ಟೇ ಬಾಕಿ ಉಳಿದಿದೆ. ಗಜಪಯಣ ಮೂಲಕ ಕಾಡಿನಿಂದ ನಾಡಿಗೆ ಬಂದಿರುವ ದಸಾರ ಗಜಪಡೆಗಳು ಕಳೆದ ಒಂದುವರೆ ತಿಂಗಳಿನಿಂದ ಅರಮನೆಯಲ್ಲಿ ವಾಸ್ತವ್ಯ ಹೂಡಿದ್ದು ಜಂಬೂ ಸವಾರಿಗೆ ಭರ್ಜರಿ ತಾಲೀಮು ನಡೆಸಲಾಗುತ್ತಿವೆ. 

ದಸರಾ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ವಂಚನೆ

ಈಗಾಗಲೇ ದಸರಾ ಗಜಪಡೆಗಳಿಗೆ ಮರಳು ಮೂಟೆ ತಾಲೀಮು ನೀಡಲಾಗಿದೆ. ಮರಳು ಮೂಟೆ ತಾಲೀಮು ಯಶಸ್ವಿಯಾಗಿ ಮುಗಿಸಿರುವ ಹಿನ್ನೆಲೆ ಇಂದಿನಿಂದ ದಸರಾ ಗಜಪಡೆಯ ಕ್ಯಾಪ್ಟನ್ ಅಭಿಮನ್ಯುಗೆ ಮರದ ಅಂಬಾರಿ ತಾಲೀಮು ಆರಂಭಿಸಲಾಗಿದೆ. ಮರದ ಅಂಬಾರಿ ಕಟ್ಟು ಮುನ್ನ ಸುರಿಯುವ ಮಳೆಯಲ್ಲೇ ದಸರಾ ಗಜಪಡೆಗಳಿಗೆ ಸಂಪ್ರದಾಯಕವಾಗಿ ಪೂಜೆ ಸಲ್ಲಿಸಲಾಯಿತು.  ರಾಜಮನೆತನದವರ ನಿವಾಸದ ಮುಂದೆ ಅಳವಡಿಸಲಾಗಿರುವ ಕ್ರೇನ್ ಸಹಾಯದಿಂದ ಅಭಿಮನ್ಯುವಿನ ಮೇಲೆ ಮರಳು ಮೂಟೆ ಮತ್ತು ಮರದ ಅಂಬಾರಿ ಇರಿಸಲಾಯಿತು. 

ಮೊದಲ ದಿನವಾದ ಇಂದು ಮಳೆ ನಡುವೆಯೂ ಅಂಬಾರಿ ಆನೆ ಅಭಿಮನ್ಯು 280 ಕೆ.ಜಿ. ತೂಕದ ಮರದ ಅಂಬಾರಿ, 400 ಕೆ.ಜಿ. ಮರಳಿನ ಮೂಟೆ ಸೇರಿದಂತೆ ಒಟ್ಟು 750 ಕೆಜಿಗೂ ಅಧಿಕ ಭಾರ ಹೊತ್ತು ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ಯಶಸ್ವಿಯಾಗಿ ಹೆಜ್ಜೆ ಹಾಕಿದೆ. ಅಭಿಮನ್ಯು ಮರದ ಅಂಬಾರಿ ಹೊತ್ತು ಗಾಂಭೀರ್ಯದಿಂದ ಮುಂದೆ ನಡೆದರೆ, ಆತನ ಪಕ್ಕ ಕುಮ್ಕಿ ಆನೆಗಳಾದ ವರಲಕ್ಷ್ಮೀ, ವಿಜಯಾ ಸಾಥ್ ನೀಡಿತ್ತು. 

ಎಡಬಿಡದೆ ಸುರಿಯುತ್ತಿದ್ದ ಮಳೆಯ ನಡುವೆಯೂ ರಾಜಪಥದಲ್ಲಿ ನಿಂತು ನೂರಾರು ಜನರು ಆನೆಗಳ ತಾಲೀಮನ್ನು ಕಣ್ತುಂಬಿಕೊಂಡರು.  ಅಭಿಮನ್ಯು ಬಳಿಕ ಮಹೇಂದ್ರ, ಧನಂಜಯ ಆನೆಗಳೂ ಒಂದೊಂದು ದಿನ ಮರದ ಅಂಬಾರಿ ಹೊರುವ ತಾಲೀಮು ನಡೆಸಲಿವೆ.

ಅ.16 ರಿಂದ 22 ರವರೆಗೆ ದಸರಾ ಚಲನಚಿತ್ರೋತ್ಸವ

ಒಟ್ಟಾರೆ ಅರಮನೆಯಿಂದ ಬನ್ನಿಮಂಟಪದವರೆಗೆ ಕೇವಲ 1 ಗಂಟೆ 10 ನಿಮಿಷದಲ್ಲಿ ಮರದ ಅಂಬಾರಿ ಹೊತ್ತು ಸಾಗಿದ ಅಭಿಮನ್ಯು ಎಲ್ಲರನ್ನೂ ಬೆರಗುಗೊಳಿಸಿದ. ಈ ಮೂಲಕ ಪ್ರಸಕ್ತ ವರ್ಷವೂ ಅಂಬಾರಿ ಹೊರಲು ತಾನು ಸಮರ್ಥನಿದ್ದೇನೆ ಎಂಬ ಸಂದೇಶ ನೀಡಿದೆ.

Follow Us:
Download App:
  • android
  • ios