Asianet Suvarna News Asianet Suvarna News

ಲಾಕ್‌ಡೌನ್‌ ಎಫೆಕ್ಟ್: ದೇವಸ್ಥಾನದಲ್ಲಿ ಸರಳ ವಿವಾಹ!

ಕೊರೋನಾ ಲಾಕ್‌ಡೌನ್‌ ನಡುವೆಯೂ ಭಾನುವಾರ ಹಲವು ಜೋಡಿಗಳು ದೇವಸ್ಥಾನಗಳಲ್ಲಿ ಸರಳ ವಿವಾಹವಾಗುವ ಮೂಲಕ ಆದರ್ಶ ಮೆರೆದರು. ಅಲ್ಲದೆ, ಮಾಸ್ಕ್‌ ಧರಿಸಿ ಮದುವೆಯಾಗುವ ಮೂಲಕ ಸರ್ಕಾರದ ಆದೇಶವನ್ನು ಪಾಲಿಸಿದ್ದಾರೆ.

Due to lock down simple marriage done in temple
Author
Bangalore, First Published May 25, 2020, 11:51 AM IST

ಮೈಸೂರು(ಮೇ 25): ಕೊರೋನಾ ಲಾಕ್‌ಡೌನ್‌ ನಡುವೆಯೂ ಭಾನುವಾರ ಹಲವು ಜೋಡಿಗಳು ದೇವಸ್ಥಾನಗಳಲ್ಲಿ ಸರಳ ವಿವಾಹವಾಗುವ ಮೂಲಕ ಆದರ್ಶ ಮೆರೆದರು. ಅಲ್ಲದೆ, ಮಾಸ್ಕ್‌ ಧರಿಸಿ ಮದುವೆಯಾಗುವ ಮೂಲಕ ಸರ್ಕಾರದ ಆದೇಶವನ್ನು ಪಾಲಿಸಿದರು.

ಮೈಸೂರಿನ ಒಂಟಿಕೊಪ್ಪಲು ವೆಂಕಟರಮಣಸ್ವಾಮಿ ದೇವಸ್ಥಾನ, ವಿಜಯನಗರ ಯೋಗಾನರಸಿಂಹಸ್ವಾಮಿ ದೇವಸ್ಥಾನ, ಶ್ರೀರಾಂಪುರ ಮಹದೇಶ್ವರ ದೇವಸ್ಥಾನ, ಕೆ.ಜಿ. ಕೊಪ್ಪಲಿನ ಚಂದ್ರಮೌಳೇಶ್ವರ ದೇವಸ್ಥಾನ ಹಾಗೂ ವಿವಿಧ ಕಲ್ಯಾಣ ಮಂಟಪಗಳಲ್ಲಿ ನಿಗದಿಯಂತೆ ಹಲವು ಮದುವೆಗಳು ಶಾಸೊತ್ರೕಕ್ತವಾಗಿ ಪೋಷಕರ ಸಮ್ಮುಖದಲ್ಲಿ ಸರಳವಾಗಿ ನೆರವೇರಿತು.

ಗ್ರೀನ್‌ ಝೋನ್ ಆಗಿದ್ದ ಉಡುಪಿಯಲ್ಲಿ ಹತ್ತೇ ದಿನದಲ್ಲಿ 73 ಪಾಸಿಟಿವ್‌ ಪ್ರಕರಣ

ಬೆಂಗಳೂರಿನ ಬಸವನಗುಡಿ ನಿವಾಸಿ ರಾಮಚಾರಿ ಹಾಗೂ ಮೈಸೂರಿನ ಕುಂಬಾರಕೊಪ್ಪಲಿನ ಐಶ್ವರ್ಯ ಒಂಟಿಕೊಪ್ಪಲಿನ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಸರಳವಾಗಿ ಪೋಷಕರ ಸಮ್ಮುಖದಲ್ಲಿ ಮದುವೆಯಾದರು. ಅದ್ಧೂರಿಯಾಗಿ ಮದುವೆಯಾಗುವಂತೆ ಕನಸು ಕಂಡು ಅದರಂತೆ ಕಲ್ಯಾಣ ಮಂಟಪವನ್ನು ಸಹ ನಿಶ್ಚಯ ಮಾಡಿದ್ದರು. ಆದರೆ, ಕೊರೋನಾ ಹಿನ್ನೆಲೆಯಲ್ಲಿ ಎಲ್ಲದಕ್ಕೂ ತೆರೆ ಎಳೆದ ಈ ಜೋಡಿ ಸರಳವಾಗಿ ದೇವಸ್ಥಾನದಲ್ಲಿ ವಿವಾಹವಾದರು.

ವಿಜಯನಗರದ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಮೈಸೂರಿನ ಪುಷ್ಪಾ ಮತ್ತು ವೆಂಕಟೇಶ ಪುತ್ರ ವಿ. ಕೀರ್ತಿ ಮತ್ತು ಬೆಂಗಳೂರಿನ ಶಶಿಕಲಾ ಮತ್ತು ರಮೇಶ್‌ ಅವರ ಪುತ್ರಿ ಬಿ.ಆರ್‌. ಸ್ಮಿತಾ ಅವರು ವಿವಾಹವಾದರು. ಇದೇ ರೀತಿ ಇನ್ನೂ ಮೂರು ಜೋಡಿಗಳು ಸರಳವಾಗಿ ಇದೇ ದೇವಸ್ಥಾನದಲ್ಲಿ ಮದುವೆಯಾಗಿ ಗೃಹಸ್ಥಾಶ್ರಮ ಪ್ರವೇಶ ಮಾಡಿದ್ದಾರೆ. ಹಾಗೆಯೇ ಕೆ.ಜಿ. ಕೊಪ್ಪಲಿನ ಚಂದ್ರಮೌಳೇಶ್ವರ ದೇವಾಲಯದಲ್ಲಿ ಪಾಂಡವಪುರದ ಕಾರ್ತಿಕ್‌ ಹಾಗೂ ಕೆ.ಜಿ. ಕೊಪ್ಪಲಿನ ಕೃಪ ಸರಳವಾಗಿ ವಿವಾಹವಾದರು.

ಕಲ್ಯಾಣ ಮಂಟಪಗಳಲ್ಲೂ ಇದೇ ಕತೆ

ದೇವಸ್ಥಾನ ಮಾತ್ರವಲ್ಲದೆ ಹಲವು ಜೋಡಿಗಳು ಪೂರ್ವನಿಗದಿಯಂತೆ ವಿವಿಧ ಕಲ್ಯಾಣ ಮಂಟಪಗಳಲ್ಲಿ 50 ಮಂದಿ ಪೋಷಕರು, ಸಂಬಂಧಿಕರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು, ಪ್ರತಿಯೊಬ್ಬರು ಮಾಸ್ಕ್‌ ಧರಿಸಿ, ಕೈಗೆ ಸ್ಯಾನಿಟೈಸರ್‌ ಹಾಕಿಕೊಂಡು ಸರ್ಕಾರದ ಷರತ್ತುಗಳನ್ನು ಪಾಲಿಸುವುದರ ಮೂಲಕ ವಿವಾಹವಾದರು.

ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪದಲ್ಲಿ ಚಾಮರಾಜನಗರದ ಸಿ.ವಿ. ವಲ್ಲೀಶ್‌ ಮತ್ತು ಬೆಂಗಳೂರಿನ ಪ್ರಕಾಶ್‌ನಗರದ ಶ್ರೀವಿದ್ಯಾ ಪೋಷಕರು ಹಾಗೂ ಕೆಲವೇ ಮಂದಿ ನೆಂಟರಿಷ್ಟರ ಸಮ್ಮುಖದಲ್ಲಿ ಸತಿಪತಿಗಳಾದರು. ಲಷ್ಕರ್‌ ಮೊಹಲ್ಲಾದ ಗೀತಾಮಂದಿರದಲ್ಲಿ ಬೆಂಗಳೂರಿನ ಕಾವ್ಯ ಮತ್ತು ಮೈಸೂರಿನ ತಿಲಕ್‌ನಗರದ ರವಿ ನವದಾಂಪತ್ಯಕ್ಕೆ ಕಾಲಿಟ್ಟರು.

ಸೋಂಕಿತನ ಮೊಬೈಲ್ ಮುಟ್ಟಿದ ಪೊಲೀಸ್‌ಗೂ ಕೊರೋನಾ ಸೋಂಕು..!

ಇದೇ ರೀತಿ ನಗರದ ವಿವಿಧ ದೇವಸ್ಥಾನ, ಕಲ್ಯಾಣ ಮಂಟಪಗಳಲ್ಲಿ ಹಲವು ಜೋಡಿಗಳು ಪೂರ್ವನಿಗದಿಯಂತೆ ಕೊರೋನಾ ಹಾವಳಿಯ ನಡುವೆಯೂ ಮದುವೆ ಬಂಧನಕ್ಕೆ ಒಳಗಾದರು.

Follow Us:
Download App:
  • android
  • ios