ಗ್ರೀನ್ ಝೋನ್ ಆಗಿದ್ದ ಉಡುಪಿಯಲ್ಲಿ ಹತ್ತೇ ದಿನದಲ್ಲಿ 73 ಪಾಸಿಟಿವ್ ಪ್ರಕರಣ
ಮಾರ್ಚ್‌ನಲ್ಲಿ ಕೇವಲ 3 ಕೊರೋನಾ ಪ್ರಕರಣಗಳಷ್ಟೇ ಪತ್ತೆಯಾಗಿ ನಿರಾಳವಾಗಿದ್ದ ಉಡುಪಿ ಜಿಲ್ಲೆ, ಕಳೆದ ಹತ್ತೇ ದಿನಗಳಲ್ಲಿ 73 ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.
ಉಡುಪಿ(ಮೇ 25): ಮಾರ್ಚ್‌ನಲ್ಲಿ ಕೇವಲ 3 ಕೊರೋನಾ ಪ್ರಕರಣಗಳಷ್ಟೇ ಪತ್ತೆಯಾಗಿ ನಿರಾಳವಾಗಿದ್ದ ಉಡುಪಿ ಜಿಲ್ಲೆ, ಕಳೆದ ಹತ್ತೇ ದಿನಗಳಲ್ಲಿ 73 ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಈಗ ಕೋವಿಡ್ ಪರೀಕ್ಷೆಗೊಳಪಡಿಸುವವರ ಶಂಕಿತರ ಸಂಖ್ಯೆಯೂ ಗಣನೀಯ ಏರಿಕೆ ಆಗುತ್ತಿದ್ದು, ಇನ್ನಷ್ಟೂಕೊರೋನಾ ಪ್ರಕರಣಗಳು ಪತ್ತೆಯಾಗಲಿವೆ.
ಭಾನುವಾರ 1301 ಮಂದಿಯ ಗಂಟಲದ್ರವದ ಮಾದರಿಯನ್ನು ಕೋವಿಡ್ ಪರೀಕ್ಷೆಗೆ ಕಳುಹಿಸಲಾಗಿದೆ. ಅವುಗಳಲ್ಲಿ ವಿವಿಧ ಹಾಟ್‌ಸ್ಪಾಟ್‌ಗಳಿಂದ ಆಗಮಿಸಿದ 1246 ಮಂದಿ, ಕೊರೋನಾ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದ 28 ಮಂದಿ, ಶೀತಜ್ವರ ಬಾಧಿತ 19 ಮತ್ತು ತೀವ್ರ ಉಸಿರಾಟದ ತೊಂದರೆ ಇರುವ 8 ಮಂದಿ ಸೇರಿದ್ದಾರೆ.
ಸೋಂಕಿತನ ಮೊಬೈಲ್ ಮುಟ್ಟಿದ ಪೊಲೀಸ್‌ಗೂ ಕೊರೋನಾ ಸೋಂಕು..!
ಭಾನುವಾರ 439 ಮಾದರಿಗಳ ವರದಿ ಬಂದಿದ್ದು, ಅವುಗಳಲ್ಲಿ 23 ಪಾಸಿಟಿವ್ ಆಗಿವೆ. ಪ್ರಸ್ತುತ ಉಡುಪಿ ಜಿಲ್ಲೆಯಿಂದ ಮಂಗಳೂರು ಮತ್ತು ಮಣಿಪಾಲದ ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಲಾದ ಒಟ್ಟು 3762 ಮಾದರಿಗಳ ಪರೀಕ್ಷಾ ವರದಿಗಳು ಬರುವುದಕ್ಕೆ ಬಾಕಿ ಇವೆ.