Asianet Suvarna News Asianet Suvarna News

ವಿದ್ಯುತ್ ತಂತಿ ತಗುಲಿ ಟ್ರ್ಯಾಕ್ಟರ್‌ನಲ್ಲಿದ್ದ ಒಣಮೇವು ಸುಟ್ಟು ಭಸ್ಮ!

ವಿದ್ಯುತ್ ತಂತಿ ತಗುಲಿ ಟ್ಯಾಕ್ಟರ್‌‌ನಲ್ಲಿದ್ದ ಅಪಾರ ಪ್ರಮಾಣದ ಜೋಳದ ಒಣ ಮೇವು ಬೆಂಕಿಗಾಹುತಿಯಾದ ದುರ್ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಕಲ್ಲಹಳ್ಳಿ ಗ್ರಾಮದ ಬಳಿ ನಡೆದಿದೆ.

Dry fodder burned in the tractor after hitting the electric wire at vijayanagar rav
Author
First Published Oct 20, 2023, 1:38 PM IST

ವಿಜಯನಗರ (ಅ.20) : ವಿದ್ಯುತ್ ತಂತಿ ತಗುಲಿ ಟ್ಯಾಕ್ಟರ್‌‌ನಲ್ಲಿದ್ದ ಅಪಾರ ಪ್ರಮಾಣದ ಜೋಳದ ಒಣ ಮೇವು ಬೆಂಕಿಗಾಹುತಿಯಾದ ದುರ್ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಕಲ್ಲಹಳ್ಳಿ ಗ್ರಾಮದ ಬಳಿ ನಡೆದಿದೆ.

ಕಲ್ಲಹಳ್ಳಿ, ಗೊಲ್ಲರಹಟ್ಟಿ ಗ್ರಾಮದ ಜಾನುವಾರುಗಳಿಗೆ ಸಾಗುತ್ತಿದ್ದ ಮೇವು. ದನಕರುಗಳಿಗೆ ಬೇಕಾದ ಒಣಮೇವು ಸಂಗ್ರಹಿಸಿ ಟ್ರ್ಯಾಕ್ಟರ್ ಮೂಲಕ ಸಾಗಿಸಲಾಗುತ್ತಿತ್ತು. ಟ್ರ್ಯಾಕ್ಟರ್ ಸಾಗುವಾಗ ಮೇವಿಗೆ ತಗುಲಿದೆ ವಿದ್ಯುತ್ ತಂತಿ. ಟ್ರಾಲಿ ಮೇಲ್ಭಾಗದಲ್ಲಿ ಕಾಣಿಸಿಕೊಂಡ ಬೆಂಕಿ. ನೋಡನೋಡುತ್ತಿದ್ದಂತೆ ವ್ಯಾಪಿಸಿಕೊಂಡು ಹೊತ್ತಿ ಉರಿದಿದೆ. ಬೆಂಕಿ ಕಾಣಿಸಿಕೊಳ್ತಿದಂತೆ ಮೇವಿನ ರಕ್ಷಣೆಗೆ ಹರಸಾಹಸ ಪಟ್ಟ ಚಾಲಕ. ಆದರೆ ಬೆಂಕಿ ಕೆನ್ನಾಲಿಗೆಗೆ  ಸಂಪೂರ್ಣವಾಗಿ ಸುಟ್ಟು ಹೋದ ಟ್ರಾಲಿಯಲ್ಲಿದ್ದ ಮೇವು. ಅದೃಷ್ಟವಶಾತ್ ತಪ್ಪಿದ ದೊಡ್ಡ ಅನಾಹುತ. ಕೂಡ್ಲಿಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

ಮನೆಮುಂದೆ ನಿಲ್ಲಿಸಿದ್ದ ಬೈಕ್ ಗೆ ದುಷ್ಕರ್ಮಿಗಳಿಂದ ಬೆಂಕಿ 

Dry fodder burned in the tractor after hitting the electric wire at vijayanagar rav

ಚಳ್ಳಕೆರೆ: ನಗರದ ಹಳೇಟೌನ್ ವ್ಯಾಪ್ತಿಯ ಹೊಸಮನೆ ಬಡಾವಣೆಯಲ್ಲಿ ಮೋಟಾರ್ ಬೈಕ್‌ಗೆ ಅಪರಿಚಿತರು ಬೆಂಕಿಹಚ್ಚಿ ಪರಾರಿಯಾಗಿದ್ಧಾರೆ. ಬೈಕ್ ಸಂಪೂರ್ಣವಾಗಿ ಸುಟ್ಟುಕರಕಲಾಗಿದೆ. ಬೈಕ್ ಮಾಲೀಕ ರಮೇಶ್ ಈ ಬಗ್ಗೆ ಮಾಹಿತಿ ನೀಡಿ, ಎಂದಿನಂತೆ ರಾತ್ರಿ ಮನೆಯ ಮುಂಭಾಗದಲ್ಲಿ ಬೈಕ್ ನಿಲ್ಲಿಸಿದ್ದು, ಬೆಳಗೆ ಎದ್ದು ನೋಡಿದಾಗ ಬೈಕ್ ಪೂರ್ಣಪ್ರಮಾಣದಲ್ಲಿ ಸುಟ್ಟಿದ್ದು, ಸುಮಾರು ೪೦ ಸಾವಿರಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ತಿಳಿಸಿದ್ದಾನೆ.

 

Follow Us:
Download App:
  • android
  • ios