*   ಆಟೋ ರಿಕ್ಷಾ ವ್ಹೀಲಿಂಗ್‌ ಮಾಡಲು ಮುಂದಾಗಿದ್ದ ಚಾಲಕ*  ಕಾರು ಪಲ್ಟಿ ಯುವತಿ ಸಾವು*  ಕಂಟೈನರ್‌ಗೆ ಕಾರು ಡಿಕ್ಕಿ: ಬೆಂಗಳೂರಿನ ವ್ಯಕ್ತಿ ಸಾವು

ಬೆಂಗಳೂರು(ಡಿ.27): ಮದ್ಯದ(Alcohol) ಅಮಲಿನಲ್ಲಿ ವ್ಹೀಲಿಂಗ್‌(Wheeling) ಮಾಡುವಾಗ ನಿಯಂತ್ರಣ ತಪ್ಪಿದ ಆಟೋ ಪಲ್ಟಿಯಾಗಿ ಚಾಲಕ(Driver) ಮೃತಪಟ್ಟು(Death). ಮೂವರು ಗಾಯಗೊಂಡಿರುವ ಘಟನೆ ಬಾಣಸವಾಡಿ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಜಾನಕಿರಾಮ ಲೇಔಟ್‌ ನಿವಾಸಿ ಮುತ್ತು (28) ಮೃತ ಆಟೋ ಚಾಲಕ. ಕಳೆದ ಬುಧವಾರ ಮುತ್ತು ಹಾಗೂ ಆತನ ಮೂವರು ಸ್ನೇಹಿತರು ಮದ್ಯದ ಪಾರ್ಟಿ ಮಾಡಿದ್ದಾರೆ. ಬಳಿಕ ಆಟೋದಲ್ಲಿ ಮನೆಗೆ ತೆರಳುವಾಗ ಬಾಣಸವಾಡಿ ನೆಹರು ರಸ್ತೆಯಲ್ಲಿ ಮುತ್ತು ಆಟೋ ರಿಕ್ಷಾವನ್ನು ವ್ಹೀಲಿಂಗ್‌ ಮಾಡಲು ಮುಂದಾಗಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿದ ಆಟೋ ಪಲ್ಟಿಯಾಗಿ ರಸ್ತೆ ಮೇಲೆ ಉರುಳಿದೆ. ಘಟನೆಯಲ್ಲಿ ಮುತ್ತು ಗಂಭೀರವಾಗಿ ಗಾಯಗೊಂಡಿದ್ದು, ಉಳಿದ ಮೂವರು ಸ್ನೇಹಿಯರು ಸಣ್ಣಪುಟ್ಟ ಗಾಯಗಳಾಗಿದ್ದವು. ಮುತ್ತವನ್ನು ತಕ್ಷಣ ಆಸ್ಪತ್ರೆಗೆ(Hospital) ಕರೆದೊಯ್ದರೂ ಚಿಕಿತ್ಸೆ(Treatment) ಫಲಿಸದೇ ಮೃತಪಟ್ಟಿದ್ದಾನೆ ಎಂದು ಪೊಲೀಸರು(Police) ತಿಳಿಸಿದ್ದಾರೆ. ಈ ಸಂಬಂಧ ಬಾಣಸವಾಡಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Wheeling & Danger: ಹುಡುಗಿ ಮುಂದೆ ಶೈನ್ ಮಾಡೋಕೋಗಿ ಸೊಂಟ ಮುರಿದುಕೊಂಡ

ಕಾರು ಪಲ್ಟಿ: ನಗರದ ಯುವತಿ ಸಾವು

ನಾಗಮಂಗಲ: ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯ ತಡೆಗೋಡೆಗೆ ಅಪ್ಪಳಿಸಿ, ಪಲ್ಟಿಯಾದ ಪರಿಣಾಮ ಕಾರು ಚಾಲನೆ ಮಾಡುತ್ತಿದ್ದ ಬೆಂಗಳೂರು(Bengaluru) ಮೂಲದ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಕೊಣನೂರು ಗೇಟ್‌ ಬಳಿ ಭಾನುವಾರ ಬೆಳಗ್ಗೆ ಸಂಭವಿಸಿದೆ.

ಬೆಂಗಳೂರಿನ ಬಾಗಲಗುಂಟೆಯ ಸೌಂದರ್ಯ ಕಾಲೇಜು ಸಮೀಪದ ರಾಮಯ್ಯ ಎನ್‌ಕ್ಲೀವ್‌ 5ನೇ ಕ್ರಾಸ್‌ ನಿವಾಸಿ ತನುಶ್ರೀ(21) ಮೃತಪಟ್ಟ ದುರ್ದೈವಿ. ತನುಶ್ರೀ ಮೈಸೂರಿನ(Mysuru) ಕಾಲೇಜೊಂದರಲ್ಲಿ ಅಂತಿಮ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದರು. ಮೈಸೂರಿನಲ್ಲಿ ಸ್ನೇಹತರೊಬ್ಬರ ಹುಟ್ಟುಹಬ್ಬ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಲುವಾಗಿ ಭಾನುವಾರ ಬೆಳಗ್ಗೆ ತಮ್ಮ ಕಾರಿನಲ್ಲಿ ಬೆಂಗಳೂರಿನಿಂದ ಕುಣಿಗಲ್‌ ನಾಗಮಂಗಲ ಮಾರ್ಗವಾಗಿ ಮೈಸೂರಿಗೆ ಒಬ್ಬರೇ ತೆರಳುತ್ತಿದ್ದರು. ಇದೇ ಮಾರ್ಗದಲ್ಲಿ ತನುಶ್ರೀಯ ಸ್ನೇಹಿತರೂ 2 ಕಾರುಗಳಲ್ಲಿ ಮೈಸೂರಿಗೆ ತೆರಳುತ್ತಿದ್ದರು. 

ತನುಶ್ರೀ ಕಾರನ್ನು ಹಿಂದಿಕ್ಕಿದ ಸ್ನೇಹಿತರು ಅತಿವೇಗವಾಗಿ ಮುಂದೆ ಸಾಗಿದರು. ಈ ವೇಳೆ ತನುಶ್ರೀ ಸಹ ವೇಗವಾಗಿ ಕಾರು ಚಾಲನೆ ಮಾಡಿದ್ದು, ನಿಯಂತ್ರಣ ತಪ್ಪಿದ ಕಾರು ರಸ್ತೆಬದಿಯ ತಡೆಗೋಡೆಗೆ ಅಪ್ಪಳಿಸಿ, ಮೂರ್ನಾಲ್ಕು ಬಾರಿ ಪಲ್ಟಿ ಹೊಡೆದು ಗದ್ದೆಗೆ ಉರುಳಿಬಿದ್ದಿದೆ. ತಲೆಗೆ ತೀವ್ರ ಪೆಟ್ಟಾಗಿ ತನುಶ್ರೀ ಕಾರಿನಲ್ಲಿಯೇ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಂಟೈನರ್‌ಗೆ ಕಾರು ಡಿಕ್ಕಿ: ಬೆಂಗಳೂರಿನ ವ್ಯಕ್ತಿ ಸಾವು

ಮದ್ದೂರು: ರಸ್ತೆ ಬದಿ ನಿಂತಿದ್ದ ಕಂಟೈನರ್‌ ಲಾರಿಗೆ ಕಾರು ಡಿಕ್ಕಿಯಾಗಿ ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ತಾಲೂಕಿನ ಗೆಜ್ಜಲಗೆರೆ ಸಮೀಪದ ಬಾಲಾಜಿ ಕಲ್ಯಾಣ ಮಂಟಪದ ಬಳಿ ಭಾನುವಾರ ಸಂಜೆ ಜರುಗಿದೆ.

ಕಾರು ಚಾಲನೆ ಮಾಡುತ್ತಿದ್ದ ಬೆಂಗಳೂರು ಎನರ್ಜಿ ಕಂಪನಿಯ ಪ್ರಾಜೆಕ್ಟರ್‌ ಮ್ಯಾನೇಜರ್‌ ಎಚ್‌.ಎನ್‌.ಸುಂದರೇಶ್‌(61) ಮೃತ. ಕಾರಿನಲ್ಲಿದ್ದ ಮುರಳೀಧರ್‌(58) ಹಾಗೂ ಸುಬ್ರಹ್ಮಣ(70) ಗಾಯಗೊಂಡು ಮದ್ದೂರಿನ ಸಾರ್ವಜನಿಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾರ್ವಜನಿಕರಿಂದ ದೂರಿನ ಸುರಿಮಳೆ: ವ್ಹೀಲಿಂಗ್‌ ಮಾಡಿದ್ರೆ ಕ್ರಿಮಿನಲ್‌ ಕೇಸ್

ಮೃತರು ಹಾಗೂ ಗಾಯಗೊಂಡವರು ಬೆಂಗಳೂರಿನ ನಾಗರಬಾವಿ 2ನೇ ಹಂತದ ಮಲತ್ತಹಳ್ಳಿ ನಿವಾಸಿಗಳು. ಗಾಯಾಳು ಮುರುಳೀಧರ್‌ ತಂದೆ ಶನಿವಾರ ವಯೋಸಹಜವಾದ ಕಾಯಿಲೆಯಿಂದ ಮೃತಪಟ್ಟಿದ್ದರು. ಇವರ ಅಸ್ಥಿಯನ್ನು ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ವಿಸರ್ಜನೆ ಮಾಡಿದ ನಂತರ ವಾಪಸ್‌ ಬೆಂಗಳೂರಿಗೆ ತೆರಳುತ್ತಿದ್ದರು.

ಗೆಜ್ಜಲಗೆರೆ ಸಮೀಪದ ಬಾಲಾಜಿ ಕಲ್ಯಾಣ ಮಂಟಪದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ(Bengaluru-Mysuru National Highway) ಕಂಟೈನರ್‌ ಲಾರಿಗೆ ಕಾರು ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ಸಂಬಂಧ ಸಂಚಾರಿ ಠಾಣೆ ಪಿಎಸ್‌ಐ ರವಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರಿನಲ್ಲಿ ಸಿಲುಕಿದ್ದ ಗಾಯಳುಗಳನ್ನು ಆಸ್ಪತ್ರೆಗೆ ಸಾಗಿಲು ಕ್ರಮ ಕೈಗೊಂಡರು. ಈ ಸಂಬಂಧ ಪಟ್ಟಣದ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.