ಕೊಡಗು (ಏ.03): ವ್ಯಕ್ತಿಯೊರ್ವ  ಹೆಂಡದ ಅಮಲಿನಲ್ಲಿ ತನ್ನ ಮನೆಗೆ ತಾನೇ ಬೆಂಕಿ ಇಟ್ಟು 6ಮಂದಿ ಸಾವಿಗೆ ಕಾರಣನಾಗಿದ್ದಾನೆ. 
 
ಕೊಡಗು ಜಿಲ್ಲೆಯ ಮುಗಟಕೇರಿ ಗ್ರಾಮದ ಕೂಲಿಕಾಮಿ೯ಕ ಬೋಜ ಎಂಬಾತ ಪತ್ನಿಯೊಂದಿಗೆ ಜಗಳವಾಡಿ ಕುಡಿದು ಬಂದು ಮನೆಗೆ ಬೆಂಕಿ ಇಟ್ಟ ಪರಿಣಾಮ 6 ಮಂದಿ ಸಜೀವ ದಹನವಾಗಿದ್ದಾರೆ. 

ಈತನ ಮನೆಗೆ ಸಂಬಂಧಿಗಳು ಆಗಮಿಸಿದ್ದು ಕುಡಿದಿದ್ದ ಆತ  ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚಿ ಮನೆ ಮೇಲೆ ಹತ್ತಿ ಹಂಚು ತೆಗೆದು ಸೀಮೆ ಎಣ್ಣೆ ಸುರಿದು ಬೆಂಕಿ ಹಾಕಿದ್ದು ಈ ವೇಳೆ ಮನೆಯಲ್ಲಿ ಮಗಿದ್ದವರು ಸಜೀವ ದಹನವಾಗಿದ್ದಾರೆ. 

ಮಂಡ್ಯ; ಮೊಮ್ಮಗಳಿಗೆ ಬಂದ ಅದೊಂದು ಅನುಮಾನ, ತಾತನನ್ನೇ ಕೊಂದಿದ್ದ ಮೊಮ್ಮಗ! ..
 
ಈತನ ಕೖತ್ಯಕ್ಕೆ ಮನೆಯಲ್ಲಿ ಮಲಗಿದ್ದ3 ಮಂದಿ ಸುಟ್ಟು ಕರಕಲಾಗಿದ್ದಾರೆ.  ಚಿಂತಾಜನಕ ಸ್ಥಿತಿಯಲ್ಲಿದ್ದ ಇಬ್ಬರು ಮಕ್ಕಳು ಮತ್ತು ಹಿರಿಯರೋವ೯ರನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಆದರೆ ಚಿಕಿತ್ಸೆ ಫಲಕಾರಿಯಾಗದೇ ಆ ಮೂವರು ಕೊನೆಯುಸಿರೆಳೆದಿದ್ದಾರೆ. ಒಟ್ಟು ಈತನ ದುಷ್ಕೃತ್ಯಕ್ಕೆ ಮನೆಯಲ್ಲಿ ಮಲಗಿದ್ದ 6 ಮಂದಿ ಸಜೀವ ದಹನವಾಗಿದ್ದಾರೆ.