ಶಿರಸಿ, (ಜೂ.20):  ಕುಡಿದ ಮತ್ತಿನಲ್ಲಿ ಮಗನ ಮೇಲೆ ತಂದೆ ಗುಂಡು ಹಾರಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ನರೇಬೈಲ್ ನಲ್ಲಿ ನಡೆದಿದೆ.

ರಾವಯ್ಯ ಗುಂಡು ಹಾರಿಸಿದ ತಂದೆ. ರಾವಯ್ಯ ಕುಡಿದ ಅಮಲಿನಲ್ಲಿ ತನ್ನ ಮಗ ನಾಗೇಂದ್ರ ಮೇಲೆ ಗುಂಡು ಹಾರಿಸಿದ್ದಾನೆ.  

ರಾವಯ್ಯ ಹಾಗೂ ನಾಗೇಂದ್ರ ನಡುವೆ ಆಸ್ತಿ ಸಂಬಂಧ ಮನಸ್ತಾಪ ಇತ್ತು. ಬುಧವಾರ ಈ ವಿಚಾರದ ಬಗ್ಗೆ ಮಾತುಕತೆ ನಡೆದಿದೆ. ಈ ವೇಳೆ ಜಗಳ ತಾರಕಕ್ಕೇರಿದ್ದು ಕುಡಿದ ಅಮಲಿನಲ್ಲಿ ಇದ್ದ ತಂದೆ ರಾವಯ್ಯ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ.

ಚಿಕ್ಕಮಗಳೂರು: ತನ್ನ ಮಗುವನ್ನೆ ಕತ್ತು ಹಿಸುಕಿ ಕೊಂದ ಪಾಪಿ ತಂದೆ

 ಪರಿಣಾಮ ಮಗನ ಹೊಟ್ಟೆ ಸೀಳಿದೆ. ಅಕ್ಕಪಕ್ಕದ ಮನೆಯವರೆಲ್ಲರೂ ಸೇರಿ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸಾವು ಬದುಕಿನ ನಡುವೆ ಹೋರಾಡುತಿದ್ದಾನೆ .

ಈ ಬಗ್ಗೆ ಶಿರಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ತಂದೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.