ಮಳವಳ್ಳಿ (ಸೆ.06): ಜಿಲ್ಲೆಯ ನಾಗಮಂಗಲ ಮತ್ತು ಮದ್ದೂರು ತಾಲೂಕಿನಲ್ಲಿ ಡ್ರಗ್ಸ್‌ ಮತ್ತು ಗಾಂಜಾ ಸಿಗತ್ತೆ ಎಂಬ ಚರ್ಚೆ ನಡೆಯುತ್ತಿರುವ ವೇಳೆಯಲ್ಲಿಯೇ ಶಾಸಕ ಡಾ.ಕೆ.ಅನ್ನದಾನಿ ಮಳವಳ್ಳಿಯ ಹಲವೆಡೆ ಡ್ರಗ್ಸ್‌ ಮತ್ತು ಗಾಂಜಾ ವಾಸನೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು.

ಕಳೆದ ಒಂದು ವಾರದಿಂದ ಮಾಧ್ಯಮದಲ್ಲಿ ಡ್ರಗ್ಸ್‌ ದಂಧೆ ಬಗ್ಗೆ ಸಾಕಷ್ಟುಚರ್ಚೆ ನಡೆದು ಸಿನಿಮಾರಂಗ ಮತ್ತು ರಾಜಕೀಯ ನಾಯಕರ ಮಕ್ಕಳನ್ನು ಸುತ್ತುವರೆದಿರುವ ಇಂತಹ ಸಂದರ್ಭದಲ್ಲಿ ಶಾಸಕರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಡ್ರಗ್ಸ್ ಮಾಫಿಯಾ ಗದ್ದಲದ ಮಧ್ಯೆ ಸಂಚಲನ ಮೂಡಿಸಿದ ಸಿದ್ದರಾಮಯ್ಯ ಪತ್ರ ..

ಹಲಗೂರಿನಲ್ಲಿ ಈಚೆಗೆ ಹಾಡಹಗಲಲ್ಲೇ ಇಬ್ಬರ ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪಿಗಳು ಗಾಂಜಾದ ಅಮಲಿನಲ್ಲಿ ಇದ್ದರು ಎನ್ನುವುದು ತಿಳಿದು ಬಂದಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೆ. ಗಾಂಜಾದ ವಾಸನೆಯ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿತ್ತು. ಮಳವಳ್ಳಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಡ್ರಗ್ಸ್‌ ಮತ್ತು ಗಾಂಜಾ ವಾಸನೆ ಇದೆ. ಇದು ಬಹಳ ಆತಂಕಕಾರಿ ಬೆಳವಣಿಗೆಯಾಗಿದ್ದು, ಪೊಲೀಸ್‌ ಇಲಾಖೆಯ ಇದಕ್ಕೆ ತಕ್ಷಣವೇ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಪುರಸಭೆ ಸದಸ್ಯರಾದ ನಂದಕುಮಾರ್‌, ಬಸವರಾಜು, ಪ್ರಮೀಳಾ, ವಡ್ಡರಹಳ್ಳಿ ಸಿದ್ದರಾಜು, ನೂರುಲ್ಲಾ, ಪುರಸಭೆ ಮಾಜಿ ಅಧ್ಯಕ್ಷರಾದ ದೊಡ್ಡಯ್ಯ, ಚಿಕ್ಕರಾಜು, ಮಡಿವಾಳ ಸಂಘದ ಅಧ್ಯಕ್ಷ ಕುಮಾರ್‌, ಜೆಡಿಎಸ್‌ ಮುಖಂಡರಾದ ಆನಂದ್‌, ಪೊತಡ್ಡೆ ನಾಗರಾಜು, ಅಂಕರಾಜು ಸೇರಿದಂತೆ ಹಲವರು ಇದ್ದರು.