ಮಂಡ್ಯ (ಸೆ.03): ರಾಜ್ಯ ರಾಜಧಾನಿ ಬೆಂಗಳೂರು ಅಥವಾ ಸ್ಯಾಂಡಲ್‌ವುಡ್‌ನಲ್ಲಿ ಮಾತ್ರವಲ್ಲ, ಮಂಡ್ಯದ ನಾಗಮಂಗಲದಲ್ಲೂ ಡ್ರಗ್ಸ್‌, ಗಾಂಜಾ ಸಿಗುತ್ತೆ. ಆದರೆ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಹೊಸ ಬಾಂಬ್‌ ಸಿಡಿಸಿದ್ದಾರೆ.

"

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಲನಚಿತ್ರ ನಿರ್ದೇಶಕ, ಪತ್ರಕರ್ತ ಇಂದ್ರಜಿತ್‌ ಲಂಕೇಶ್‌ ಹೇಳಿಕೆಯನ್ನು ಪ್ರಬಲವಾಗಿ ಸಮರ್ಥಿಸಿಕೊಂಡರು. ಏಳೆಂಟು ತಿಂಗಳ ಹಿಂದೆ ನಾಗಮಂಗಲ ಮೂಲದ ಕಾಂಗ್ರೆಸ್‌ ಮುಖಂಡರೊಬ್ಬರ ಮಗನನ್ನು ಕೆಲವರು ಕಿಡ್ನಾಪ್‌ ಮಾಡಿದ್ದರು. ಆ ಹುಡುಗನನ್ನು ಒತ್ತೆಯಾಳಾಗಿಟ್ಟುಕೊಂಡಿದ್ದ ಸ್ಥಳದಲ್ಲಿ ಡ್ರಗ್ಸ್‌ ಸೇವನೆ ಮಾಡಿರುವುದು ಬೆಳಕಿಗೆ ಬಂದಿತ್ತು. ಈ ವಿಷಯ ನನ್ನ ಗಮನಕ್ಕೆ ಬಂದ ಮೇಲೆ ಅಂದಿನ ನಾಗಮಂಗಲ ಡಿವೈಎಸ್ಪಿ, ಸರ್ಕಲ್‌ ಇನ್ಸ್‌ಪೆಕ್ಟರ್‌ ಅವರಿಗೆ ವಿಷಯ ತಿಳಿಸಿ ಅದೆನ್ನು ಹತ್ತಿಕ್ಕುವಂತೆ ಒತ್ತಾಯಿಸಿದ್ದೆ ಎಂದರು.

ಈಗ ಕೇರಳ ಚಿತ್ರರಂಗಕ್ಕೂ ಡ್ರಗ್ಸ್ ಶಾಕ್, ಮಾಜಿ ಗೃಹಮಂತ್ರಿ ಪುತ್ರನಿಗೂ ಲಿಂಕ್!...

ಮಂಡ್ಯದಲ್ಲಿ ಪ್ರತಿಷ್ಠಿತ ಕಾಲೇಜಿನಿಂದ ಹೊರಗೆ ನೀಗ್ರೋಗಳು, ಹೊರಗಿನಿಂದ ಬಂದ ಡ್ರಗ್‌ ಪೆಡ್ಲರ್‌ಗಳು ದಂಧೆ ನಡೆಸುತ್ತಿದ್ದಾರೆ. ನಮ್ಮ ಕಾಲೇಜಿನ ಬಳಿಯೂ ಡ್ರಗ್ಸ್‌, ಗಾಂಜಾ ಮಾರಾಟ ನಡೆಯುತ್ತಿತ್ತು. ಪೊಲೀಸರಿಗೆ ವಿಷಯ ತಿಳಿಸಿ ಅದನ್ನು ಹತ್ತಿಕ್ಕಿದೆ ಎಂದರು.

ಇದೇವೇಳೆ ಮೈತ್ರಿ ಸರ್ಕಾರವನ್ನು ಡ್ರಗ್ಸ್‌ ದಂಧೆಕೋರರು ಬೀಳಿಸಿದರು ಎಂಬ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಆರೋಪವನ್ನು ಸಮರ್ಥಿಸಿಕೊಂಡ ಅವರು, ರಾಜ್ಯದಲ್ಲಿರುವ ಮೈತ್ರಿ ಸರ್ಕಾರವನ್ನು ಡ್ರಗ್ಸ್‌ ಮಾರಾಟ ಮಾಡುವವರು, ರಾತ್ರಿ ದಂಧೆಕೋರರು ಬೀಳಿಸಿದರು. ಅದರಲ್ಲಿ ಒಬ್ಬ ನೇಪಾಳಕ್ಕೆ ಮತ್ತೊಬ್ಬ ಗೋವಾಕ್ಕೆ ಕದ್ದು ಹೋದರು. ಅವರನ್ನು ಹಿಡಿಯುವ ಪ್ರಯತ್ನವನ್ನು ಯಾರೂ ಮಾಡಲಿಲ್ಲ ಎಂದರು.