ಶಿವಮೊಗ್ಗ: ಘಟ್ಟಪ್ರದೇಶದಲ್ಲಿ ತುಂತುರು ಮಳೆ ಆರಂಭ
ಮಲೆನಾಡಿನಲ್ಲಿ ಬಿರುಸಿನ ಗಾಳಿ ಮಳೆ ಮಾಯವಾಗಿ ಈಗ ತುಂತುರು ಮಳೆ ಸುರಿಯುತ್ತಿದೆ. ಘಟ್ಟ ಪದೇಶಗಳಲ್ಲಿ ತುಂತುರು ಮಳೆಯಾಗುತ್ತಿದ್ದು, ಶಿವಮೊಗ್ಗ ಸೇರಿದಂತೆ ಬಯಲು ನಾಡಿನ ಪ್ರದೇಶಗಳಲ್ಲಿ ಮಳೆ ಇಲ್ಲ. ಘಟ್ಟ ಪ್ರದೇಶದಲ್ಲಿ ಮತ್ತೊಮ್ಮೆ ಜಿಟಿಜಿಟಿ ಮಳೆ ಆರಂಭವಾಗಿರುವುದು ಜನರನ್ನು ಆತಂಕಕ್ಕೆ ದೂಡಿದೆ.
ಶಿವಮೊಗ್ಗ(ಆ.15): ವಾರದಿಂದ ಸುರಿದ ಅಶ್ಲೇಷ ಮಳೆಯ ಆರ್ಭಟ ಮುಗಿಯಿತು ಎಂದು ನಿಟ್ಟುಸಿರು ಬಿಡುತ್ತಿರುವಾಗಲೇ ಘಟ್ಟಪ್ರದೇಶದಲ್ಲಿ ತುಂತುರು ಮಳೆ ಮತ್ತೆ ಆರಂಭಗೊಂಡಿದೆ.
ಹೊಸನಗರ, ತೀರ್ಥಹಳ್ಳಿ ಭಾಗಗಳಲ್ಲಿ ಬೆಳಗ್ಗಿನಿಂದಲೇ ತುಂತುರು ಮಳೆ ಬರುತ್ತಿದ್ದು, ಜನರು ಪುನಃ ಆತಂಕಗೊಳ್ಳುವ ಸ್ಥಿತಿ ಎದುರಾಗಿದೆ. ಆದರೆ ಶಿವಮೊಗ್ಗ ಸೇರಿದಂತೆ ಬಯಲು ನಾಡಿನ ಪ್ರದೇಶಗಳಲ್ಲಿ ಮಳೆ ಇಲ್ಲ.
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಆಗಾಗ್ಗೆ ಬಿಸಿಲು ಮತ್ತು ಮೋಡ ಮುಸುಕಿದ ವಾತಾವರಣವಿತ್ತು. ನದಿಗಳಲ್ಲಿ ನೀರು ಸಂಪೂರ್ಣ ತಗ್ಗಿದೆ. ಜಲಾಶಯಗಳಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿಯೂ ಇಳಿಕೆ ಕಾಣಿಸಿದೆ. ಭದ್ರಾ ಜಲಾಶಯ ತುಂಬಲು ಐದು ಅಡಿ ಮಾತ್ರ ಬಾಕಿಯಿದೆ. ಲಿಂಗನಮಕ್ಕಿ ಭರ್ತಿಯಾಗಲು 7 ಅಡಿ ನೀರು ತುಂಬ ಬೇಕಿದೆ.
ಶಿವಮೊಗ್ಗ: ಪರಿಹಾರ ಸಾಮಾಗ್ರಿ ಸಂಗ್ರಹ