ಉಡುಪಿ: ಹಡಿಲು ಭೂಮಿ ಕೃಷಿ ನಾಟಿ ಕಾರ್ಯಕ್ಕೆ ಚಾಲನೆ
* ಹಡಿಲು ಭೂಮಿ ಕೃಷಿ ನಾಟಿ ಕಾರ್ಯಕ್ಕೆ ಚಾಲನೆ ನೀಡಿದ ಬನ್ನಂಜೆ ಬಾಬು ಅಮೀನ್, ಮನೋಹರ್ ಶೆಟ್ಟಿ
* ಹಡಿಲು ಭೂಮಿ ಕೃಷಿ ಅಂದೋಲನ
* ನಾಟಿ ಕಾರ್ಯಕ್ಕೆ ಚಾಲನೆ ನೀಡಲಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್
ಉಡುಪಿ(ಜೂ.25): "ಹಡಿಲು ಭೂಮಿ ಕೃಷಿ ಅಂದೋಲನ"ದಡಿ ಬನ್ನಂಜೆ ವಾರ್ಡಿನ ಮೂಡನಿಡಂಬೂರು ಗರಡಿ 1ನೇ ಅಡ್ಡರಸ್ತೆ ಬಳಿ ಹಡಿಲು ಭೂಮಿ ಕೃಷಿ ನಾಟಿ ಕಾರ್ಯಕ್ಕೆ ತುಳು ಜಾನಪದ ವಿದ್ವಾಂಸರಾದ ಬನ್ನಂಜೆ ಬಾಬು ಅಮೀನ್ ಹಾಗೂ ಸಾಯಿ ರಾಧಾ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕರಾದ ಮನೋಹರ್ ಶೆಟ್ಟಿ ಅವರೊಂದಿಗೆ ಚಾಲನೆ ನೀಡಲಾಗಿದೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಅವರು ತಿಳಿಸಿದ್ದಾರೆ.
ಇಂದು(ಶುಕ್ರವಾರ) ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರುವ ರಘುಪತಿ ಭಟ್ ಅವರು, ಮೂಡನಿಡಂಬೂರು ಗರಡಿ 1ನೇ ಅಡ್ಡರಸ್ತೆ ಬಳಿ ಹಡಿಲು ಭೂಮಿ ಕೃಷಿ ನಾಟಿ ಕಾರ್ಯಕ್ಕೆ ಬನ್ನಂಜೆ ಬಾಬು ಅಮೀನ್ ಹಾಗೂ ಮನೋಹರ್ ಶೆಟ್ಟಿ ಅವರು ಚಾಲನೆ ನೀಡಿದರು ಎಂದು ಹೇಳಿದ್ದಾರೆ.
ಕಾಲು ಕಳೆದುಕೊಂಡ ಶ್ವಾನಕ್ಕೆ ಹೊಸ ಜೀವನ ಕೊಟ್ಟ ಉಡುಪಿ ಕುಟುಂಬ
"ಹಡಿಲು ಭೂಮಿ ಕೃಷಿ ಅಂದೋಲನ"ದಡಿ ಕಡೆಕಾರ್ ಭಾಗದಲ್ಲಿ ನಾಳೆ(ಶನಿವಾರ) ಉಡುಪಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ನಾಟಿ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ. ಹೀಗಾಗಿ ಸಚಿವರು ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಉಡುಪಿ ಶಾಸಕ ರಘುಪತಿ ಭಟ್ ಅವರು ನಿನ್ನೆ(ಗುರುವಾರ) ಸ್ಥಳಕ್ಕೆ ಭೇಟಿ ನೀಡಿ ಕೃಷಿ ಚಟುವಟಿಕೆಗಳನ್ನು ವೀಕ್ಷಿಸಿ ಪೂರ್ವ ತಯಾರಿ ಬಗ್ಗೆ ಚರ್ಚೆ ನಡೆಸಿದ್ದರು.