Chamarajanagar: ಪಾಲಾರ್ ಗ್ರಾಮದಲ್ಲಿ ಕುಡಿಯುವ ನೀರಿಗೂ ಸೃಷ್ಠಿಯಾಯ್ತು ಹಾಹಾಕಾರ!
ಅದು ಸೋಲಿಗರೇ ವಾಸಿಸುವ ಗ್ರಾಮ. ಇಲ್ಲಿನ ಗ್ರಾಮಸ್ಥರಿಗೆ ಕುಡಿಯಲು ಕಾಡಿನ ಮದ್ಯೆ ಇರುವ ಹಳ್ಳದ ನೀರೇ ಗತಿ. ನೀರು ಹರಿಯುವ ಬದಿಯಲ್ಲೇ ಮರಳುಗುಂಡಿ ತೆಗೆದು ಅದರಲ್ಲಿ ಶೇಖರಣೆಯಾಗುವ ನೀರನ್ನೇ ಸೋಸಿ ಹೊತ್ತು ತರಬೇಕು.
ವರದಿ: ಪುಟ್ಟರಾಜು.ಆರ್.ಸಿ.ಏಷ್ಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ (ಮಾ.08): ಅದು ಸೋಲಿಗರೇ ವಾಸಿಸುವ ಗ್ರಾಮ. ಇಲ್ಲಿನ ಗ್ರಾಮಸ್ಥರಿಗೆ ಕುಡಿಯಲು ಕಾಡಿನ ಮದ್ಯೆ ಇರುವ ಹಳ್ಳದ ನೀರೇ ಗತಿ. ನೀರು ಹರಿಯುವ ಬದಿಯಲ್ಲೇ ಮರಳುಗುಂಡಿ ತೆಗೆದು ಅದರಲ್ಲಿ ಶೇಖರಣೆಯಾಗುವ ನೀರನ್ನೇ ಸೋಸಿ ಹೊತ್ತು ತರಬೇಕು. ಜಲಜೀವನ್ ಯೋಜನೆ ಗೆ ಅರಣ್ಯ ಇಲಾಖೆ ಅನುಮತಿ ನೀಡದ ಕಾರಣ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ. ಹನಿಹನಿ ನೀರಿಗೂ ಹಾಹಾಕಾರ ಉಂಟಾಗಿದೆ. ಜೀವಜಲಕ್ಕಾಗಿ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಕುಡಿಯುವ ನೀರಿಗೆ ಯಾವ ರೀತಿಯ ಶೋಚನೀಯ ಪರಿಸ್ಥಿತಿ.
ಖಾಲಿ ಕೊಡ ಹಿಡಿದು ಹೋಗುತ್ತಿರುವ ಮಹಿಳೆಯರ ದಂಡು.ಹನಿ ನೀರಿಗಾಗಿ ಅಲೆದಾಡುತ್ತಿರುವ ಹಂಗೆಳೆಯರು. ಮರಳು ಗುಂಡಿ ತೋಡಿದ ಜಾಗದಲ್ಲಿ ಬಂದ ನೀರನ್ನ ಸೋಸುತ್ತಿರುವ ಮಹಿಳೆಯರು ಈ ಎಲ್ಲಾ ದೃಶ್ಯ ಕಂಡುಬಂದಿದ್ದು ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪಾಲಾರ್ ಗ್ರಾಮದಲ್ಲಿ. ಮಹದೇಶ್ವರ ಬೆಟ್ಟ ವ್ಯಾಪ್ತಿಯಲ್ಲಿ ಬರುವ ಪಾಲಾರ್ನಲ್ಲಿ ಹೌದು ಬೇಸಿಗೆ ಆರಂಭದಲ್ಲೇ ನೀರಿಗಾಗಿ ಹಾಹಾಕಾರ ಸೃಷ್ಠಿಯಾಗಿದೆ. ಕುಡಿಯುವ ಹನಿ ನೀರಿಗಾಗಿ ಕಿಲೋ ಮೀಟರ್ ಗಟ್ಟಲೆ ಗ್ರಾಮಸ್ಥರು ಸಾಗಲೇ ಬೇಕಾದ ಅನಿವಾರ್ಯತೆ ಈಗ ಎದುರಾಗಿದೆ.
ದಲಿತರ ಕೇರಿಗಳಿಗೆ ಮೂಲಸೌಕರ್ಯ ಕಲ್ಪಿಸಿದ್ದೇ ಬಿಜೆಪಿ: ಕೆ.ಎಸ್.ಈಶ್ವರಪ್ಪ
ಕಿಲೋಮೀಟರ್ ದೂರದಲ್ಲಿ ಕಾಡಿನ ಮದ್ಯದಲ್ಲಿ ಹರಿಯುವ ಹಳ್ಳದ ನೀರನ್ನು ಹೊತ್ತು ತರಬೇಕಿದೆ. ಹಳ್ಳದಲ್ಲಿ ಮರಳು ಗುಂಡು ನ ತೋಡಿ ಅದರಲ್ಲಿ ಶೇಖರಣೆಯಾಗುವ ನೀರನ್ನ ಸಂಗ್ರಹಿಸಿ ಸೋಸಿ ಹೊತ್ತು ತಂದು ದಾಹವನ್ನ ತೀರಿಸಿ ಕೊಳ್ಳಬೇಕಿದೆ. ಹೀಗೆ ನೀರು ಹೊತ್ತು ತರುವಾಗ ಕಾಡು ಪ್ರಾಣಿ ಗಳು ದಾಳಿ ನಡೆಸುವ ಆತಂಕವೂ ಇದೆ.. ಇನ್ನು ಈ ಗ್ರಾಮಕ್ಕೆ ಜಲ ಜೀವನ್ ಮಿಷನ್ ಆಡಿಯಲ್ಲಿ ನಲ್ಲಿ ವ್ಯವಸ್ಥೆ ಮಾಡಲಾಗಿದ್ರು ನಲ್ಲಿಗೆ ನೀರಿನ ಸಂಪರ್ಕವೇ ನೀಡಿಲ್ಲ. ಇದರ ಪರಿಣಾಮ ಕುಡಿಯುವ ನೀರಿಗೂ ಆಹಾಕಾರ ಸೃಷ್ಟಿಯಾಗಿದೆ. ಬೋರ್ವೆಲ್ ಹಾಗು ಟ್ಯಾಂಕ್ ನಿರ್ಮಾಣ ಮಾಡಲು ಅರಣ್ಯ ಇಲಾಖೆ ಅನುಮತಿ ನೀಡದ ಪರಿಣಾಮ ಕಾಮಗಾರಿ ಸ್ಥಗಿತಗೊಂಡಿದೆ.
ಬಿಜೆಪಿಗೆ ಸುಳ್ಳೇ ಮನೆದೇವರು, ಅವರಿಂದ ರಾಜ್ಯಕ್ಕೆ ಬಿಡಿಗಾಸೂ ಸಿಗ್ತಿಲ್ಲ: ಡಿ.ಕೆ.ಶಿವಕುಮಾರ್
ಇನ್ಮು ಗ್ರಾಮದ ಮಾರ್ಗವಾಗಿಯೇ ಮಹದೇಶ್ವರ ಬೆಟ್ಟಕ್ಕೆ ಕಾವೇರಿ ನೀರು ಪೈಪ್ ಲೈನ್ ಹಾಕಲಾಗಿದ್ದು ಈ ಪೈಪ್ ಲೈನ್ನಿಂದ ಗ್ರಾಮಕ್ಕೆ ಒಂದು ಸಂಪರ್ಕ ನೀಡಲಾಗಿದ್ದರು ಪ್ರಯೋಜನವಾಗ್ತಿಲ್ಲ. ಮೂರು ದಿನಕ್ಕೊಮ್ಮೆ ನೀರು ಬಿಡುವುದರಿಂದ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ. ಇನ್ನೊಂದೆಡೆ ಹಳ್ಳದ ನೀರು ಸಹ ಬತ್ತಿ ಹೋಗುತ್ತಿದೆ. . ಬೇಸಿಗೆ ಆರಂಭದ ದಿನಗಳಲ್ಲೇ ನೀರಿಗಾಗಿ ಪಾಲಾರ್ ಗ್ರಾಮಸ್ಥರು ಪಡಬಾರದ ಕಷ್ಟ ಪಡುತ್ತಿದ್ದಾರೆ. ಬರುವ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ಕುಡಿಯುವ ನೀರಿನ ಕಾಮಗಾರಿಗು ಅಡ್ಡಿ ಉಂಟು ಮಾಡುತ್ತಿರುವ ಅರಣ್ಯ ಇಲಾಖೆ ತನ್ನ ಧೋರಣೆ ಬದಲಿಸಿಕೊಳದಿದ್ದರೆ ಪಾಲಾರ್ ಗ್ರಾಮಸ್ಥರ ಸ್ಥಿತಿ ಮತ್ತಷ್ಟು ಶೋಚನೀವಾಗಲಿದೆ.