ಕುಡಿಯುವ ನೀರಿಗಾಗಿ ಹಾಹಾಕಾರ: ಚುನಾವಣೆ ಬಹಿಷ್ಕರಿಸಲು ಮಲಸಿಂಗನಹಳ್ಳಿ ಗ್ರಾಮಸ್ಥರು ನಿರ್ಧಾರ
ಅದೊಂದು ಗಡಿ ಭಾಗದ ಹಳ್ಳಿ. ಇಲ್ಲಿಗೆ ಚುನಾವಣೆ ವೇಳೆ ಮತ ಕೇಳೋಕೆ ಬರುವ ರಾಜಕಾರಣಿಗಳು ಗೆದ್ದ ಮೇಲೆ ತಿರುಗಿ ಕೂಡ ನೋಡಲ್ವಂತೆ. ಹೀಗಾಗಿ ಕುಡಿಯುವ ನೀರಿನ ಹಾಹಾಕಾರ ಹೆಚ್ಚಾಗಿದ್ದು, ಈ ಬಾರಿ ಚುನಾವಣೆ ಬಹಿಷ್ಕಾರಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಮಾ.30) :ಅದೊಂದು ಗಡಿ ಭಾಗದ ಹಳ್ಳಿ. ಇಲ್ಲಿಗೆ ಚುನಾವಣೆ ವೇಳೆ ಮತ ಕೇಳೋಕೆ ಬರುವ ರಾಜಕಾರಣಿಗಳು ಗೆದ್ದ ಮೇಲೆ ತಿರುಗಿ ಕೂಡ ನೋಡಲ್ವಂತೆ. ಹೀಗಾಗಿ ಕುಡಿಯುವ ನೀರಿನ ಹಾಹಾಕಾರ ಹೆಚ್ಚಾಗಿದ್ದು, ಈ ಬಾರಿ ಚುನಾವಣೆ ಬಹಿಷ್ಕಾರಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ.
ನೋಡಿ ಹೀಗೆ ನೀರನ್ನು ತರಲು ಪರದಾಡ್ತಿರೋ ವಯೋ ವೃದ್ಧರು. ನೀರಿನ ಹಾಹಾಕಾರ ನೀಗಿಸಲು ಕಲ್ಯಾಣಿ ಸ್ವಚ್ಛತೆಗೆ ಮುಂದಾದ ಗ್ರಾಮಸ್ಥರು. ಈ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಮಲಸಿಂಗನಹಳ್ಳಿ ಗ್ರಾಮ(Malasinganahalli)ದ ಬಳಿ.
ಹೈವೇ ಅಪಘಾತ ಕಡಿಮೆ ಮಾಡಲು ಸಿಸಿಟಿವಿ ಅಳವಡಿಕೆ: ಕೋಟೆನಾಡಿನ ಪೊಲೀಸರಿಂದ ವಿನೂತನ ಪ್ರಯೋಗ!
ಹೌದು, ಸತತ 75 ವರ್ಷಗಳಿಂದ ಈ ಗ್ರಾಮದಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲ. ಹೀಗಾಗಿ ಕುಡಿಯುವ ನೀರಿನ ಗಾಹಾಕಾರ ಮುಗಿಲು ಮುಟ್ಟಿದೆ. ಇಲ್ಲಿನ ಜನರು ದಿನ ಬೆಳಗಾದರೆ ನೀರಿಗಾಗಿ ಪರದಾಡ್ತಿದ್ದಾರೆ. ತೋಟದ ಬಾವಿಗಳು, ಕಲ್ಯಾಣಿಗಳು ಹಾಗು ಕೆರೆ ಕಟ್ಟೆಗಳ ಮೊರೆಗೆ ಧಾವಿಸ್ತಿದ್ದಾರೆ. ಈ ವೇಳೆ ನೀರಿನ ಗಾಡಿ ತಳ್ಳುವ ಭರಾಟೆಯಲ್ಲಿ ಆಯ ತಪ್ಪಿಬಿದ್ದಿರುವ ಮಹಿಳೆಯರು ವಿಕಲಚೇತನರು ಆಗಿದ್ದಾರಂತೆ. ಇದರಿಂದಾಗಿ ಈ ಗ್ರಾಮದ ಯುವಕರಿಗೆ ಹೆಣ್ಣು ಕೊಡಲು ಸಹ ಜನರು ಹಿಂದೇಟು ಹಾಕ್ತಿದ್ದು, ಹಲವರಿಗೆ ವಿವಾಹ ಭಾಗ್ಯವೇ ಸಿಗದಂತಾಗಿದೆ. ಈ ಬಗ್ಗೆ ಗಮನ ಹರಿಸಬೇಕಾದ ಜನಪ್ರತಿನಿಧಿಗಳು ಜಾಣಕುರುಡು ಪ್ರದರ್ಶಿಸುತಿದ್ದು,ಗ್ರಾಮಸ್ಥರು ನೀರಿಗಾಗಿ ಪರದಾಡ್ತಾ, ನಿತ್ಯ ಯಾತನೆ ಅನುಭವಿಸುವಂತಾಗಿದೆ ಅಂತ ಕಿಡಿಕಾರಿದ್ದಾರೆ.
ಇನ್ನು ಈ ಗ್ರಾಮಕ್ಕೆ ಚುನಾವಣೆ ವೇಳೆ ಓಟು ಕೇಳಲು ಬರುವ ರಾಜಕಾರಣಿಗಳು ಗೆದ್ದ ಬಳಿಕ ಒಮ್ಮೆಯೂ ಗ್ರಾಮದತ್ತ ತಿರುಗಿ ನೋಡಿಲ್ಲ. ಈ ಸಮಸ್ಯೆ ಬಗ್ಗೆ ಹಲವು ಬಾರಿ ಶಾಸಕ ಚಂದ್ರಪ್ಪ(Chandrappa MLA) ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಈಬಾರಿ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿರುವ ಗ್ರಾಮಸ್ಥರು.
ನಮಗೆ ನೀರು ಕೊಡಿ; ವೋಟು ಪಡಿ:
'ನಮಗೆ ನೀರು ಕೊಡಿ; ವೋಟು ಪಡಿ'ಎಂಬ ಅಭಿಯಾನ ಆರಂಭಿಸಲು ಮುಂದಾಗಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಚುನಾವಣೆ ಘೋಷಣೆ ಆಗಿದೆ. ಚುನಾವಣೆ ವೇಳೆ ಜನಪ್ರತಿನಿಧಿಗಳಿಗೆ ಸರಿಯಾದ ಪಾಠ ಕಲಿಸ್ತೀವಿ ಅಂತಾರೆ ಊರಿನ ಗ್ರಾಮಸ್ಥರು.
ಬಡಾವಣೆಗೆ ಕುಡಿಯುವ ನೀರಿನ ಸಮಸ್ಯೆ ಆಗುತ್ತೆ ಎಂದಿದ್ದಕ್ಕೆ ಹಲ್ಲೆ ಮಾಡಿಸಿದ ಫ್ಯಾಕ್ಟರಿ ಮಾಲೀಕ!
ಒಟ್ಟಾರೆ ಗಡಿನಾಡ ಹಳ್ಳಿಯ ಕುಡಿಯುವ ನೀರಿನ ಯಾತನೆ ಕೇಳೋರಿಲ್ಲ ಎಂಬಂತಾಗಿದೆ. ಹೀಗಾಗಿ ಆಕ್ರೋಶಗೊಂಡ ಜನರು ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಇನ್ನಾದ್ರು ಸಂಬಂಧಪಟ್ಟವರು ಈ ಗ್ರಾಮಕ್ಕೆ ಅಗತ್ಯ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಮುಂದಾಗಬೇಕಿದೆ....