Asianet Suvarna News Asianet Suvarna News

ಬಡಾವಣೆಗೆ ಕುಡಿಯುವ ನೀರಿನ ಸಮಸ್ಯೆ ಆಗುತ್ತೆ ಎಂದಿದ್ದಕ್ಕೆ ಹಲ್ಲೆ ಮಾಡಿಸಿದ ಫ್ಯಾಕ್ಟರಿ ಮಾಲೀಕ!

ಬಡಾವಣೆಯಲ್ಲಿ ನಿಮಗೆಲ್ಲಾ ಅನುಕೂಲ ಮಾಡಿಕೊಡ್ತೀನಿ ಅಂತ ಜನರಿಗೆ ನಂಬಿಸಿ ಸರ್ಕಾರದಿಂದ ಗ್ಲೋಬಲ್ ಪಾಪಡ್ ರೈಸ್ ಫ್ಯಾಕ್ಟರಿ ಕಟ್ಟಿಸಿದ ಮಹಾನ್ ಭಾವ ಈಗ ಜನರ ಮೇಲೆ ತಿರುಗಿ ಬಿದ್ದು, ಅವರ ಮೇಲೆಯೇ ಹಲ್ಲೆ ನಡೆಸಿರೋ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

factory owner attacked against  for drinking water problem in chitradurga gow
Author
First Published Mar 21, 2023, 8:01 PM IST | Last Updated Mar 21, 2023, 8:01 PM IST

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಮಾ.21): ಏರಿಯಾ ಅಂದ ಮೇಲೆ ಎಲ್ಲರೂ ಅಣ್ಣ ತಮ್ಮಂದಿರಂತೆ ಇದ್ಕೊಂಡ್ ಹೋಗೋದು ಸಾಮಾನ್ಯ. ಆದ್ರೆ ಇಲ್ಲೊಂದು ಬಡಾವಣೆಯಲ್ಲಿ ನಿಮಗೆಲ್ಲಾ ಅನುಕೂಲ ಮಾಡಿಕೊಡ್ತೀನಿ ಅಂತ ಜನರಿಗೆ ನಂಬಿಸಿ ಸರ್ಕಾರದಿಂದ ಗ್ಲೋಬಲ್ ಪಾಪಡ್ ರೈಸ್ ಫ್ಯಾಕ್ಟರಿ ಕಟ್ಟಿಸಿದ ಮಹಾನ್ ಭಾವ ಈಗ ಜನರ ಮೇಲೆ ತಿರುಗಿ ಬಿದ್ದು, ಅವರ ಮೇಲೆಯೇ ಹಲ್ಲೆ ನಡೆಸಿರೋ ಘಟನೆ ನಡೆದಿದೆ. ಪ್ರಶ್ನೆ ಮಾಡಿದ್ದಕ್ಕೆ ಈ ರೀತಿ  ಹಲ್ಲೆಗೊಳಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜನರು. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಕೋಟೆನಾಡು ಚಿತ್ರದುರ್ಗ. ನಗರದ ನೆಹರೂ ಬಡಾವಣೆಯಲ್ಲಿ ಇರುವ ಮಂಡಕ್ಕಿ ಭಟ್ಟಿ ಏರಿಯಾದಲ್ಲಿ ಜನರಿಗೆ ಅನುಕೂಲ ಆಗಲಿದೆ ನಿವೆಲ್ಲರೂ 5 ಸಾವಿರ ಹಣ ಕೊಡಿ ಎಂದು ವಂಚನೆ ಮಾಡಿ ಸರ್ಕಾರದ ವತಿಯಿಂದ 9 ಕೋಟಿ ಅನುದಾನದಲ್ಲಿ ಗ್ಲೋಬಲ್ ಪಾಪಡ್ ರೈಸ್ ಫ್ಯಾಕ್ಟರಿಯನ್ನು ಮಹಮದ್ ಹುಸೇನ್ ಕಟ್ಟಿಸುತ್ತಾನೆ.

ಆದ್ರೆ ಈಗ ನಿಮಗೂ ಇದಕ್ಕೂ ಯಾವುದೇ ಸಂಬಂಧವೇ ಇಲ್ಲ ಎಂದು ಬೆದರಿಸಿ ಏರಿಯಾದಲ್ಲಿ ರೌಡಿಸಂ ಶುರು ಮಾಡಿದ್ದಾನೆ. ಏನೋ ಒಂದೇ ಏರಿಯಾ ಬಿಡು ಎಂದು ಜನರು ಸುಮ್ಮನಾಗಿದ್ದಾರೆ. ಆದ್ರೆ ನಿನ್ನೆ ಏರಿಯಾಕ್ಕೆ ನೀರು ಬರುವುದೇ ವಾರಕ್ಕೆ ಎರಡು ಬಾರಿ, ಅಲ್ಲಿನ ಜನರಿಗೆ ಕುಡಿಯಲಿಕ್ಕೆ ಆ ನೀರು ಸಾಲದು. ಆದ್ರೆ ಗ್ಲೋಬಲ್ ಫ್ಯಾಕ್ಟರಿ ಗೆ ನೀರು ಹರಿಸುವ ಉದ್ದೇಶದಿಂದ ಪೈಪ್ ಲೈನ್ ತೆಗೆಸಲು ಹುಸೇನ್ ಮುಂದಾಗಿದ್ದನ್ನು ಪ್ರಶ್ನಿಸಿದ ಏರಿಯಾದ ಯುವಕರಿಗೆ ತಮ್ಮ ಚೇಲಾಗಳಿಂದ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಕುಡಿಯುವ ನೀರಿಗೆ ತೊಂದರೆ ಆಗುತ್ತೆ ಎಂದು ಕೇಳಿದ್ದಕ್ಕೆ ಈ ರೀತಿ ಹಲ್ಲೆ ಮಾಡಿರೋದು ಖಂಡನೀಯ ಎಂದು ಹಲ್ಲೆಗೊಳಗಾಗಿ ನೊಂದಿರೋ ಜನರು ನಮಗೆ ನ್ಯಾಯ ಒದಗಿಸಿ ಎಂದು ಮಾಧ್ಯಮದ ಮೊರೆ ಹೋಗಿದ್ದಾರೆ.

ಇನ್ನೂ ಮಂಡಕ್ಕಿ ಭಟ್ಟಿಯಲ್ಲಿ ಇರುವ ಗ್ಲೋಬಲ್ ಪಾಪಡ್ ರೈಸ್ ಫ್ಯಾಕ್ಟರಿಗೆ ಏರಿಯಾದ ಪ್ರತಿಯೊಬ್ಬರ ಪಾಲೂ ಇದೆ. ಆದ್ರೆ ಈಗ ಅವನ ಬಳಿ ಹೋಗಿ‌ ಕೇಳಿದ್ರೆ ಇದು ನಮ್ಮ ಕುಟುಂಬದವರಿಗೆ ಮಾತ್ರ ಸೇರಿದ್ದು ಎಂದು ಜನರಿಗೆ ಮೋಸ ಮಾಡಲು ಮುಂದಾಗಿದ್ದಾನೆ. ಫ್ಯಾಕ್ಟರಿ ಓಪನ್‌ ಆದ್ರೆ ದುಡಿಮೆಗೆ ಒಂದು ದಾರಿ ಆಗುತ್ತಲ್ಲಪ್ಪ ಎಂದು ಆಸೆಯಲ್ಲಿದ್ದ ಏರಿಯಾ ಜನರಿಗೆ ಚಳ್ಳೆ ಹಣ್ಣು ತಿನ್ನಿಸಿರುವ ಭೂಪ‌ ಮೊಹಮದ್ ಹುಸೇನ್ ಈಗ ಜನರ ಮೇಲೆ ಹಲ್ಲೆ ದೌರ್ಜನ್ಯ ಎಸಗಿದ್ದಾನೆ.‌

ಕೊಪ್ಪಳದಲ್ಲಿ ಬಾಣಂತಿ ಹತ್ಯೆ, ಅಮವಾಸ್ಯೆ ಹಿನ್ನೆಲೆ ನಿಧಿಗಾಗಿ ನಡೆಯಿತಾ ಭೀಕರ ಕೊಲೆ!?

ಎಲ್ಲಾ ಅಧಿಕಾರಿಗಳ ಜೊತೆ ಶಾಮೀಲಾಗಿ  ಸರ್ಕಾರದಿಂದ ಬರುವ ಅನುದಾನವನ್ನು ಗುಳುಂ ಮಾಡಲು ಪ್ಲಾನ್ ಮಾಡ್ತಿದ್ದಾನೆ. ಆದ್ದರಿಂದ ಯಾವ ಅಧಿಕಾರಿಗಳು ನಮಗೆ ನ್ಯಾಯ ಕೊಡ್ತಿಲ್ಲ. ಪಾಪಡ್ ರೈಸ್  ಫ್ಯಾಕ್ಟರಿಯಲ್ಲಿ ನಾವು ಕೂಡ ಪಾಲುದಾರರು ಇದೀವಿ ಹಾಗಾಗಿ ಅಧಿಕಾರಿಗಳು ಸೂಕ್ತ‌ ತನಿಖೆ ನಡೆಸಿ ಫ್ಯಾಕ್ಟರಿ ತೆರೆಯುವ ಮುನ್ನ ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸಲಿ ಎಂದು ಸ್ಥಳೀಯರ ಒತ್ತಾಯವಾಗಿದೆ.

ಲೋಕಾಯುಕ್ತ ದಾಳಿ: 40 ಸಾವಿರ ಲಂಚ ಪಡೆವಾಗ ಸಿಕ್ಕಿಬಿದ್ದ ರಾಣೆಬೆನ್ನೂರು ಪಿಎಸ್‌ಐ

ಒಟ್ಟಾರೆಯಾಗಿ ಮೊದಲಿಗೆ ಜನರಿಗೆ ನಂಬಿಸಿ ಹಣ ಪೀಕಿದ್ದ ಆಸಾಮಿ ಫ್ಯಾಕ್ಟರಿ ಓಪನ್ ಆಗಲು ಸಜ್ಜಾಗ್ತಿರುವಾಗ ಪಾಲುದಾರರನ್ನು ದೂರ ಸರಿಸಲು ಮುಂದಾಗ್ತಿರೋದು ಖಂಡನೀಯ. ಕೂಡಲೇ‌ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ ನೊಂದವರ ಧ್ವನಿಯಾಗಬೇಕಿದೆ.

Latest Videos
Follow Us:
Download App:
  • android
  • ios