ನಾಟಕದಿಂದ ಮನುಷ್ಯನ ಭಾವನೆಗಳನ್ನು ಹೆಚ್ಚಿಸಬಹುದು: ಹಿರಿಯ ನಟ ಶ್ರೀನಾಥ್

ನಾಟಕ ಒಂದು ಜೀವಂತ ಕಲೆಯಾಗಿದ್ದು ಅದರ ಮೂಲಕ ಮನುಷ್ಯನ ಭಾವನೆಗಳನ್ನು ಹೆಚ್ಚಿಸಬಹುದು ಎಂದು ಚಲನಚಿತ್ರ ಹಿರಿಯ ನಟ ಶ್ರೀನಾಥ್ ಹೇಳಿದರು.

Drama can enhance human emotions Says Veteran actor Srinath

ಹೊಳಲ್ಕೆರೆ (ಜ.10): ನಾಟಕ ಒಂದು ಜೀವಂತ ಕಲೆಯಾಗಿದ್ದು ಅದರ ಮೂಲಕ ಮನುಷ್ಯನ ಭಾವನೆಗಳನ್ನು ಹೆಚ್ಚಿಸಬಹುದು ಎಂದು ಚಲನಚಿತ್ರ ಹಿರಿಯ ನಟ ಶ್ರೀನಾಥ್ ಹೇಳಿದರು. ತಾಲೂಕಿನ ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ಪರಮಪೂಜ್ಯ ರಾಘವೇಂದ್ರ ಸ್ವಾಮೀಜಿ ಹಾಗೂ ಪೂಜ್ಯ ಸೂರುದಾಸ್ಜಿ ಸ್ವಾಮೀಜಿದ್ವಯರ ಪುಣ್ಯಾರಾಧನೆ ಅಂಗವಾಗಿ ತಿರುಕನೂರಿನಲ್ಲಿ ರಂಗದಾಸೋಹ ನಾಟಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾಟಕಗಳು ಜೀವಂತ ಕಲೆಯಾಗಿದ್ದು ಅವುಗಳಲ್ಲಿ ಸಕ್ರೀಯವಾಗಿ ತೊಡಗಿಕೊಂಡಾಗ ಮನುಷ್ಯನ ಭಾವನೆಗಳು ಹೆಚ್ಚಾಗಿ ಉತ್ತಮ ನಾಗರೀಕನಾಗಲು ಸಾಧ್ಯವಾಗುತ್ತದೆ. 

ವಿದ್ಯಾರ್ಥಿ ದೆಸೆಯಿಂದಲೇ ಇದರಲ್ಲಿ ಭಾಗವಹಿಸುತ್ತಿರುವುದು ಇಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿರುವುದು ಇಲ್ಲಿ ಓದುತ್ತಿರುವುದು ನಿಮ್ಮೆಲ್ಲರ ಪುಣ್ಯವಾಗಿದೆ. ಇಂತಹ ಉತ್ತಮವಾದ ಸಂಸ್ಕಾರ ಕೊಡುತ್ತಿರುವ ಆಡಳಿತ ಮಂಡಳಿಯನ್ನು ಶ್ಲಾಘಿಸಿದರು. ರಾಷ್ಟ್ರೀಯ ಕೃಷಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅಮೃತ್ ಆರ್ಗ್ಯಾನಿಕ್ಸ್‌ನ ಮಾಲೀಕರಾದ ಕೆ.ನಾಗರಾಜ್, ಅನಾಥ ಸೇವಾಶ್ರಮದ ಚಟುವಟಿಕೆಗಳನ್ನು ಇನ್ನಷ್ಟು ಮತ್ತಷ್ಟು ಹೆಚ್ಚಿಸುವ ದೃಷ್ಟಿಕೋನದಿಂದ ಹಿರಿಯ ವಿದ್ಯಾರ್ಥಿಗಳಾದ ನಾವೆಲ್ಲರೂ ಕೈಗೂಡಿದಾಗ ಮಾತ್ರ ಸಾಧ್ಯವಾಗುತ್ತದೆ ಎಂದರು. ಸಮಾಜದಲ್ಲಿ ನಮ್ಮೆಲ್ಲರಿಗೂ ಋಣ ತೀರಿಸುವ ಉದ್ದೇಶವಿದ್ದಲ್ಲಿ ಅನಾಥ ಸೇವಾಶ್ರಮದಂತಹ ಸೇವಾ ನಿರತ ಸಂಸ್ಥೆಯಲ್ಲಿ ತೊಡಗಿಕೊಂಡಾಗ ಮಾತ್ರ ಅದು ಸಾಧ್ಯವಾಗುತ್ತದೆ ಎಂದರು.

ಮುಖ್ಯ ಅತಿಥಿಯಾಗಿದ್ದ ದಾವಣಗೆರೆ ವಿನ್ನರ್ ಅಕಾಡೆಮಿಯ ಸ್ಥಾಪಕ ಡಾ.ಶಿವರಾಜ್ ಕಬ್ಬೂರ್ ಮಾತನಾಡಿ, ಗ್ರಾಮೀಣ ಪ್ರದೇಶದಂತಹ ಮಲ್ಲಾಡಿಹಳ್ಳಿಯನ್ನು ಜಗದ್ವಿಖ್ಯಾತಗೊಳಿಸಿದ್ದ ಪೂಜ್ಯರ ಕಾರ್ಯಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಪಾಲಿಸಬೇಕಾಗಿದೆ. ಇದರಿಂದ ಸಮಾಜದಲ್ಲಿ ಉತ್ತಮರಾಗಲು ಸಾಧ್ಯವಾಗುತ್ತದೆ ಎಂದರು. ಎಲ್ಲಾ ಸೌಕರ್ಯಗಳನ್ನು ಗ್ರಾಮೀಣ ಭಾಗದಲ್ಲಿ ಹೊಂದಿದೆ ಇದರ ಸದುಪಯೋಗವನ್ನು ನಾವೆಲ್ಲರೂ ಪಡೆದುಕೊಳ್ಳಬೇಕು ಎಂದರು.

ನನ್ನ ಸಿನಿಮಾ ಗುರಿ ತಲುಪಿದ್ದೇನೆ ಎಂದು ಯಾವತ್ತೂ ಅನಿಸಿಲ್ಲ, ನಾನಿನ್ನೂ ಇಲ್ಲೇ ಇದ್ದೀನಿ: ಪ್ರಣಯರಾಜ ಶ್ರೀನಾಥ್‌

ಅನಾಥ ಸೇವಾಶ್ರಮದ ಕಾರ್ಯದರ್ಶಿ ಎಸ್.ಕೆ.ಬಸವರಾಜನ್ ಪ್ರಸ್ತಾವಿಕವಾಗಿ ಮಾತನಾಡಿ, ಯೋಗ ಮತ್ತು ಆಯುರ್ವೇದ ಸಮಾಜದಲ್ಲಿ ಅತ್ಯಂತ ಮಹತ್ತರವಾದ ಪಾತ್ರವನ್ನು ಹೊಂದಿವೆ ಪರಮಪೂಜ್ಯ ರಾಘವೇಂದ್ರ ಸ್ವಾಮೀಜಿಯವರು 80 ವರ್ಷಗಳ ಹಿಂದೆಯೇ ಇದರ ಪ್ರಚಾರವನ್ನು ಮಾಡಿದ್ದರು ಇದರ ಮೂಲಕ ಸಮಾಜದಲ್ಲಿ ಲಕ್ಷಾಂತರ ಜನರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದರು. ಹಾಸನ ಸರ್ಕಾರಿ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಡಾ.ಹಾಲೇಶ್, ಹಿರಿಯ ವಿದ್ಯಾರ್ಥಿ ಪರಶುರಾಮ ಗಡ್ಡಿ ಮಾತನಾಡಿದರು. ಉಪಾಧ್ಯಕ್ಷ ರಾಘವೇಂದ್ರ ಪಾಟೀಲ ಖಜಾಂಚಿ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ವಿಶ್ವಸ್ತರಾದ ಕೆ.ಡಿ.ಬಡಿಗೇರ, ಎಂ.ಜಿ.ರಾಮದಾಸ್, ಪಿ.ಕೆ.ರಾಜಪ್ಪ, ಸುಧಾಕರ್, ಎಚ್.ಸಿ.ರವಿ ಆಶ್ರಮದ ಮುಖ್ಯಸ್ಥರು, ಅಧ್ಯಾಪಕರು ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios