Asianet Suvarna News Asianet Suvarna News

ಹುಟ್ಟುಹಬ್ಬದಂದು ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷಧಿ ವಿತರಿಸಿದ ಡಾ.ಎಸ್.ಬಿ.ಕಾಮರೆಡ್ಡಿ

 ಖ್ಯಾತ ವೈದ್ಯ ಡಾ.ಎಸ್.ಬಿ.ಕಾಮರೆಡ್ಡಿ ಅವರ ಜನುಮ ದಿನದ ಪ್ರಯುಕ್ತ ಉಚಿತ ಆರೋಗ್ಯ ಶಿಬಿರವನ್ನು ಯಾದಗಿರಿ ಜಿಲ್ಲೆಯ ವಡಿಗೇರಾ ಪಟ್ಟಣದ ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಆವರಣದಲ್ಲಿ ಆಯೋಜನೆ ಮಾಡಲಾಗಿತ್ತು.  ಆರೋಗ್ಯ ಶಿಬಿರಕ್ಕೆ ನೂರಾರು ಜನ ಹರಿದು ಬಂದರು.

Dr.S.B.Kamareddy free health check-up on his birthday event in raichur gow
Author
First Published Nov 21, 2022, 3:23 PM IST

ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್ 

ಯಾದಗಿರಿ (ನ.21): ಗ್ರಾಮೀಣ ಭಾಗದ ಜನರಿಗೆ ಸರಿಯಾದ ಆರೋಗ್ಯ ಸೇವೆ ಮರಿಚೀಕೆಯಾಗುತ್ತಿದೆ. ಸರಿಯಾದ ರೋಗವನ್ನು ಪತ್ತೆ ಹಚ್ಚಸಿಕೊಳ್ಳದೇ ಹಲವಾರು ಜನ ರೋಗಕ್ಕೆ ತುತ್ತಾಗಿ ಸಾವಿಗೀಡಾಗುತ್ತಿದ್ದಾರೆ. ಇಂತಹ ಗ್ರಾಮಾಂತರ ಜನರಿಗೆ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಮಾತೋ ಶ್ರೀ ಗೌರಮ್ಮ ಬಸವರಾಜಪ್ಪ ಬೆಂಡೆಗಂಬಳಿ ಮತ್ತು ಕಾಮರೆಡ್ಡಿ ಟ್ರಸ್ಟ್ ಹಾಗೂ ಅಭಿಮಾನಿಗಳ ಬಳಗದ ಸಹಯೋಗದಲ್ಲಿ ಖ್ಯಾತ ವೈದ್ಯ ಡಾ.ಎಸ್.ಬಿ.ಕಾಮರೆಡ್ಡಿ ಅವರ ಜನುಮ ದಿನದ ಪ್ರಯುಕ್ತ ಉಚಿತ ಆರೋಗ್ಯ ಶಿಬಿರವನ್ನು ಯಾದಗಿರಿ ಜಿಲ್ಲೆಯ ವಡಿಗೇರಾ ಪಟ್ಟಣದ ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಆವರಣದಲ್ಲಿ ಆಯೋಜನೆ ಮಾಡಲಾಗಿತ್ತು. ನಗರ ಪ್ರದೇಶದಲ್ಲಿರುವ ಜನರಿಗೆ ಒಳ್ಳೊಳ್ಳೆ ಆಸ್ಪತ್ರೆ, ಸರಿಯಾದ ಸಮಯಕ್ಕೆ ಚಿಕಿತ್ಸೆ ಸೀಗುತ್ತದೆ. ಅದ್ರೆ ಗ್ರಾಮೀಣ ಭಾಗದ ಜನರಿಗೆ ಸರಿಯಾದ ಸಮಯಕ್ಕೆ, ಸರಿಯಾದ ಚಿಕಿತ್ಸೆ ಸೀಗುವುದಿಲ್ಲ, ಜೊತೆಗೆ ಯಾವುದೇ ಸೌಲಭ್ಯಗಳ ಕೂಡ ಸಿಗುವುದಿಲ್ಲ. ಇದರಿಂದಾಗಿ ಹಲವಾರು ಜನರು ನಗರ-ನಗರಕ್ಕೆ ತಪಾಸಣೆ ಹಾಗೂ ಚಿಕಿತ್ಸೆಗಾಗಿ ಪರದಾಡುವಂತ ಪರಿಸ್ಥಿತಿ ಹಳ್ಳಿಗಾಡಿನ ಜನರದ್ದು. ಅಂತಹ ಹಳ್ಳಿಗಾಡಿನ ಜನರ ಬಗ್ಗೆ ಕಾಳಜಿ ಹೊಂದಿರುವ ಖ್ಯಾತ ವೈದ್ಯ ಡಾ.ಎಸ್.ಬಿ.ಕಾಮರೆಡ್ಡಿ ತಾವು ಹುಟ್ಟಿ ಬೆಳೆದ ವಡಿಗೇರಾ, ಯಾದಗಿರಿ ಜನರಿಗೆ ಖ್ಯಾತ ವೈದ್ಯರಿಂದ ಉಚಿತ ತಪಾಸಣೆ, ಚಿಕಿತ್ಸೆ ಹಾಗೂ ಉಚಿತ ಔಷಧಿಯನ್ನು ಕೂಡ ವ್ಯವಸ್ಥೆ ಮಾಡಿದ್ದಾರೆ. ಇದರಿಂದ ಪಟ್ಟಣ ಹಾಗೂ ನಗರಗಳತ್ತ ಪರದಾಡುತ್ತಿದ್ದ ಜನರಿಗೆ ನಿಟ್ಟುಸಿರು ಬಿಟ್ಟಂತಾಗಿದೆ. ಜೊತೆಗೆ ಗ್ರಾಮೀಣ ಭಾಗದ ಜನರಿಗೆ ಸರಿಯಾದ ಚಿಕಿತ್ಸೆ ಕೂಡ ಸಿಕ್ಕಂತಾಗಿದೆ.

ಹಳ್ಳಿಯತ್ತ ಬಂದ ಪ್ರಸಿದ್ಧ ವೈದ್ಯರ ತಂಡ!
ಖ್ಯಾತ ವೈದ್ಯ ಡಾ.ಎಸ.ಬಿ.ಕಾಮರೆಡ್ಡಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರಕ್ಕೆ ಕಲಬುರಗಿಯ ಪ್ರಸಿದ್ಧ ವೈದ್ಯರ ತಂಡ ಆಗಮಿಸಿತ್ತು. ನೇತ್ರ ತಪಾಸಣೆ, ವಿಶೇಷವಾಗಿ ಕ್ಯಾನ್ಸರ್ ಸೇರಿದಂತೆ ವಿವಿಧ ರೋಗಕ್ಕೆ ಸಂಬಂಧಪಟ್ಟ ವೈದ್ಯರು ಆಗಮಿಸಿದ್ದರು. ಈ ಖ್ಯಾತ ವೈದ್ಯರಿಂದ ಗ್ರಾಮಾಂತರ ಪ್ರದೇಶದ ಜನ ಸದುಪಯೋಗ ಪಡೆದುಕೊಂಡರು. ವಡಿಗೇರಾ ತಾಲೂಕಿನ ಬೆಂಡೆಗಳಬಳಿ, ಐಕೂರ್, ಹೈಯ್ಯಾಳ, ಚೆನ್ನೂರು, ಕೋನಳ್ಲಿ, ಬಿಳ್ಹಾರ, ತುಮಕೂರು, ಕೊಂಕಲ್, ಗೊಂದೆನೋರ್ ಸೇರಿದಂತೆ ಹಲವಾರು ಗ್ರಾಮದ ಜನರು ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ ಹಾಗೂ ಔಷಧಿ ಪಡೆದುಕೊಂಡರು.

ನಮ್ಮ ಮನೆಗೆ ಬಂದ ಡಾಕ್ಟರ್, ನಮಗೆ ಬಹಳ ಖುಷಿಯಾಗಿದೆ: ರೋಗಿ ಸಂತಸ
ಬೇರೆ ಹಳ್ಳಿಗಳಿಂದ ಹಲವಾರು ಕಾಯಿಲೆಗಳನ್ನು ತಪಾಸಣೆ ಮಾಡಿಸಿಕೊಳ್ಳಲು ಬಂದಿದ್ದ ರೋಗಿಗಳ ಸರಿಯಾಗಿ ಸರತಿ ಸಾಲಿನಲ್ಲಿ ನಿಂತು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಒಬ್ಬ ರೋಗಿ ಮಾತನಾಡಿ, ನಾವು ನಮ್ಮ ರೋಗವನ್ನು ತೋರಿಸಲು ಬೇರೆ ಬೇರೆ ಊರುಗಳಿಗೆ ಹೋಗಬೇಕಾಗಿತ್ತು. ಇದರಿಂದ ಒಳ್ಳೊಳ್ಳೆ ಡಾಕ್ಟರ್ ಗಳ ನಮ್ಮ ಮನೆ ಬಾಗಿಲಿಗೆ ಬಂದಿದ್ದಾರೆ, ಇದರಿಂದ ನಮಗೆ ಬಹಳ ಖುಷಿಯಾಗಿದೆ. ನಮ್ಮ ರೋಗಕ್ಕೆ ಎಲ್ಲವನ್ನೂ ಉಚಿತವಾಗಿ ನೀಡ್ತಿದ್ದಾರೆ ಎಂದರು.

ನನಗೆ ಜನರ ಆರೋಗ್ಯ, ಕಾಳಜಿ ಮುಖ್ಯ: ಡಾ.ಎಸ್.ಬಿ.ಕಾಮರೆಡ್ಡಿ
ಇನ್ನು ನೂರಾರು ಜನರಿಗೆ ಉಚಿತ ಆರೋಗ್ಯ ಶಿಬಿರ ಏರ್ಪಡಿಸಿದ್ದ ಖ್ಯಾತ ವೈದ್ಯ ಎಸ್.ಬಿ.ಕಾಮರೆಡ್ಡಿ ಜನರಿಗೆ ಸರಿಯಾಗಿ ಆರೋಗ್ಯವನ್ನು ತಪಾಸಣೆಯನ್ನು ಮಾಡಿಸಿಕೊಳ್ಳುವುದಕ್ಕೆ ಆಗ್ತಿಲ್ಲ. ಅದರಲ್ಲೂ ಗ್ರಾಮೀಣ ಭಾಗದ ಜನರಿಗಂತೂ ಅದು ಸಾಧ್ಯವಿಲ್ಲದಂತಾಗಿದೆ. ನಮ್ಮ ಕುಟುಂಬಕ್ಕೆ ಜನರ ಆರೋಗ್ಯ ಮತ್ತು ಕಾಳಜಿ ಬಹಳ ಮುಖ್ಯ. ಕಲಬುರಗಿ ಸೇರಿದಂತೆ ವಿವಿಧ ಕಡೆಯಿಂದ ಪ್ರಸಿದ್ಧ ವೈದ್ಯರ ತಂಡ ಬಂದಿದೆ. ಜ‌ನರು ಇದರ ಸದುಪಯೋಗ ಪಡೆದುಕೊಂಡು ಉತ್ತಮವಾದ ಆರೋಗ್ಯವನ್ನು ಕಾಪಾಡಿಕೊಂಡರೇ ನನ್ನ ಹುಟ್ಟುಹಬ್ಬ ಆಚರಣೆಗೆ ಒಂದು ಅರ್ಥ ಎಂದರು.

Follow Us:
Download App:
  • android
  • ios