ಡಾ. ರಾಜ್ ಯೋಗಗುರು ಡಾ. ಎಚ್‌ಎಫ್ ನಾಯ್ಕರ್ ಇನ್ನಿಲ್ಲ

 * ವರನಟ ಡಾ. ರಾಜ್‌ಕುಮಾರ್ ಅವರ ಯೋಗಗುರು ಇನ್ನಿಲ್ಲ
* ಧಾರವಾಡದ ಮೂಲದ ಹೊನ್ನಪ್ಪ ಯೋಗ ಸಾಧಕರು
* 1994 ರಲ್ಲಿ ರಾಷ್ಟ್ರಪತಿ ಪದಕ ಪುರಸ್ಕಾರಕ್ಕೆ ಪಾತ್ರವಾಗಿದ್ದರು
*  ಕಾಮನಬಿಲ್ಲು, ಭಕ್ತ ಪ್ರಹ್ಲಾದ, ಒಂದು ಮುತ್ತಿನ  ಕತೆ ಚಿತ್ರದ ಯೋಗ ನಿರ್ದೇಶನ

Dr rajkumar yoga guru dr honnappa fakeerappa naikar succumbs to corona mah

ಬೆಂಗಳೂರು (ಮೇ. 20)  ವರನಟ ಡಾ. ರಾಜ್‌ಕುಮಾರ್ ಅವರ ಯೋಗಗುರು ಕೆಎಸ್‌ಆರ್‌ಪಿ ನಿವೃತ್ತ ಡಿಐಜಿ ಡಾ. ಹೊನ್ನಪ್ಪ ಫಕೀರಪ್ಪ ನಾಯ್ಕರ್ (90)  ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.  ಮೃತರು ಪತ್ನಿ ,ಮೂವರು ಪುತ್ರರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಕೊರೋನಾ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದರು. 

ಧಾರವಾಡದ ಕುಂದಗೋಳ ಮೂಲದವರಾಗಿದ್ದ ನಾಯ್ಕರ್ ಕಳೆದ ಐದು ದಶಕಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು, ಕನಕಪುರ ರಸ್ತೆ ಬಿ.ಎಂ.ಕಾವಲ್‌ನಲ್ಲಿ ಮಹಾಯೋಗಕ್ಷೇತ್ರ ಸ್ಥಾಪಿಸುವ ಮೂಲಕ ಡಾ.ರಾಜ್‌ಕುಮಾರ್ ಸೇರಿ ವಿವಿಧ ಕ್ಷೇತ್ರದ ಗಣ್ಯರಿಗೆ ಯೋಗ ತರಬೇತಿ ನೀಡಿದ್ದರು.

ಸಂಕಷ್ಟದಲ್ಲಿದ್ದವರ ನೆರವಿಗೆ ಸರ್ಕಾರದ ಪ್ಯಾಕೇಜ್

ಸಬ್ ಇನ್ಸ್ ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ನಾಯ್ಕರ್ ಗೋವಾ ವಿಮೋಚನಾ ಚಳವಳಿಯಲ್ಲಿಯೂ ಕೆಲಸ ಮಾಡಿದ್ದರು. ಚೀನಾ ಜತೆಗಿನ ಯುದ್ಧದಲ್ಲಿ ಉಗ್ರರನ್ನು ಸದೆ ಬಡಿದಿದ್ದರು.  ಇವರ ಮಾರ್ಗದರ್ಶನದಲ್ಲಿ ಸಾವಿರಾರುನ ಜನರು ಯೋಗ ತರಬೇತಿ ಪಡೆದುಕೊಂಡಿದ್ದರು.

1994 ರಲ್ಲಿ ರಾಷ್ಟ್ರಪತಿ ಪದಕ ಪುರಸ್ಕಾರಕ್ಕೆ ಪಾತ್ರವಾಗಿದ್ದರು. ಕಾಮನಬಿಲ್ಲು, ಭಕ್ತ ಪ್ರಹ್ಲಾದ, ಒಂದು ಮುತ್ತಿನ ಕತೆ ಚಿತ್ರದಲ್ಲಿ ಡಾ. ರಾಜ್ ಪ್ರದರ್ಶಿಸಿದ ಯೋಗ ಸಾಧನೆಯ ನಿರ್ದೇಶನ ಹೊನ್ನಪ್ಪ ಅವರದ್ದು ಆಗಿತ್ತು.

 

 

 

Latest Videos
Follow Us:
Download App:
  • android
  • ios