ಹರಪನಹಳ್ಳಿ(ಏ.20): ಕೊರೋನಾ ವೈರಸ್‌ ಪ್ರಪಂಚದಾದ್ಯಂತ ವ್ಯಾಪಕವಾಗಿ ಹರಡುತ್ತಲಿದೆ. ಜ್ವರ, ಸುಸ್ತು, ನೆಗಡಿ, ಒಣಕೆಮ್ಮು ಇದರ ಲಕ್ಷಣಗಳು. ಶೇ. 80 ರಷ್ಟು ಈ ವೈರಸ್‌ ಬಂದವರು ಚಿಕಿತ್ಸೆಯ ನಂತರ ಗುಣಮುಖರಾಗುತ್ತಾರೆ, ಶೇ. 20ರಷ್ಟು ಜನರು ತೀವ್ರ ಸ್ವರೂಪದ ಕಾಯಿಲೆಯಿಂದ ಬಳಲಿ ಸಾವನ್ನಪ್ಪಬಹುದು ಎಂದು ಹರಪನಹಳ್ಳಿಯ ಶಿವಕೃಪ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ  ಲ್ಯಾಪ್ರೋಸ್ಕೋಪಿಕ್‌ ಸರ್ಜನ್‌ ಡಾ. ಹರ್ಷ ಜಿ.ವಿ ಅವರು ಹೇಳಿದ್ದಾರೆ.

ಅದರಲ್ಲೂ ಹಿರಿಯ ನಾಗರಿಕರು, ಸಕ್ಕರೆ ಕಾಯಿ​ಲೆ, ಬಿಪಿ, ಹೃದಯ ಕಾಯಿಲೆ ಇರುವವರಲ್ಲಿ ಸಾವು ಸಂಭವಿಸಬಹುದು. ಸೋಂಕಿತ ವ್ಯಕ್ತಿ ಸೀನಿದಾಗ, ಕೆಮ್ಮಿದಾಗ, ಉಗುಳಿನ ಕಣಗಳು ಒಂದು ಮೀಟರ್‌ ಚಿಮ್ಮುತ್ತವೆ, ಆದ್ದರಿಂದ ಎಲ್ಲರೂ ಮಾಸ್ಕ್‌ ಧರಿಸಬೇಕು, ಒಂದು ಮೀಟರ್‌ ಅಂತರ ಕಾಪಾಡಿಕೊಳ್ಳಬೇಕು, ಹ್ಯಾಂಡ್‌ ವಾಶ್‌ ಮಾಡಿಕೊಳ್ಳುತ್ತಿರಬೇಕು.

ಹೃದಯ ಕಾಯಿಲೆಗೂ, ಕೋವಿಡ್‌ಗೂ ನೇರ ಸಂಬಂಧವಿದೆಯಾ?

ಯಾವುದೇ ಭಯ ಬೇಡ, ಮನೆಯಲ್ಲಿಯೇ ಇದ್ದು, ಅಂತರ ಕಾಪಾಡಿಕೊಂಡು, ಆದಷ್ಟು ಜನರು ಪರಸ್ಪರ ಭೇಟಿ ಆಗಬಾರದು, ದೂರವಾಣಿ ಮೂಲಕ ಸಂಪರ್ಕ ಸಾಧಿಸಬೇಕು, ಈ ಸಾಂಕ್ರಾಮಿಕ ರೋಗ ಹರಡುವುದು ನಿಲ್ಲುವವರೆಗೂ ಅಥವಾ ಔಷಧಿ ಕಂಡು ಹಿಡಿಯುವವರೆಗೂ ಲಾಕ್‌ ಡೌನ್‌ ಅನಿವಾರ್ಯ. ಒಟ್ಟಿನಲ್ಲಿ ಮಾಸ್ಕ್‌ , ಸಾಮಾಜಿಕ ಅಂತರ, ಕೈ ತೊಳೆಯುವುದು ಈ ಮಂತ್ರ ಜಪಿಸಿದರೆ, ಕೋರೋನಾದಿಂದ ದೂರ ಇರಬಹುದು ಎಂದು ಹೇಳಿದ್ದಾರೆ.