ಶಿಗ್ಗಾಂವ್ ಗೆ ಪ್ರಗತಿಪರ ಕೃಷಿ ಪರಿಚಯಿಸಿದವರು ದಿ.ಹನುಮಂತಗೌಡ್ರು: ಸಿಎಂ ಬೊಮ್ಮಾಯಿ

ಶಿಗ್ಗಾಂವ್ ತಾಲ್ಲೂಕು ಕೃಷಿಯಿಂದ ಕೂಡಿದ್ದವು ಪ್ರಾಮಾಣಿಕವಾಗಿ ಬದುಕುವ ರೈತಾಪಿ ವರ್ಗ ಇಲ್ಲಿದೆ. ದಿ.ಹನುಮಮಂತಗೌಡ್ರು 50 ವರ್ಷದ ಹಿಂದೆಯೇ ಪ್ರಗತಿಪರ ಕೃಷಿಯನ್ನು ಹೇಗೆ ಮಾಡಬೇಕು, ಕೃಷಿಯಲ್ಲಿ ಲಾಭದಾಯಕ ಬೆಳೆಯನ್ನು ಹೇಗೆ ಬೆಳಯಬೇಕೆಂಬುದನ್ನು ತೋರಿಸಿಕೊಟ್ಟಿದ್ದರು ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದರು.

Dr. Hanumantha Goudru introduced progressive agriculture to Shiggaon says CM basavaraj Bommai gow

ವರದಿ: ಪವನ್ ಕುಮಾರ್ ಏಷ್ಯಾನೆಟ್ ಸುವರ್ಣ ನ್ಯೂಸ್

ಹಾವೇರಿ ( ಡಿ.4): ಶಿಗ್ಗಾಂವ್ ತಾಲ್ಲೂಕು ಕೃಷಿಯಿಂದ ಕೂಡಿದ್ದವು ಪ್ರಾಮಾಣಿಕವಾಗಿ ಬದುಕುವ ರೈತಾಪಿ ವರ್ಗ ಇಲ್ಲಿದೆ. ದಿ.ಹನುಮಮಂತಗೌಡ್ರು 50 ವರ್ಷದ ಹಿಂದೆಯೇ ಪ್ರಗತಿಪರ ಕೃಷಿಯನ್ನು ಹೇಗೆ ಮಾಡಬೇಕು, ಕೃಷಿಯಲ್ಲಿ ಲಾಭದಾಯಕ ಬೆಳೆಯನ್ನು ಹೇಗೆ ಬೆಳಯಬೇಕೆಂಬುದನ್ನು ತೋರಿಸಿಕೊಟ್ಟಿದ್ದರು ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದರು. ಅವರು ಇಂದು ಶಿಗ್ಗಾಂವ್ ಹೊಸ ಬಸ್ ನಿಲ್ದಾಣದ ಬಳಿ ನೂತನವಾಗಿ ನಿರ್ಮಾಣ ಮಾಡಿರುವ ಹನುಮಂತಗೌಡ್ರು ಪಾಟೀಲ ಕಲ್ಯಾಣ ಭವನ ಹಾಗೂ ಪಾಟೀಲ ಕಂಫರ್ಟ್ಸ್ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಶಿಗ್ಗಾಂವ್ ನ ಕಿರೀಟ ಪ್ರಾಯವಾಗಿರುವ ಮನೆತನ ದಿ.ಹನುಮಂತೇಗೌಡ ಪಾಟೀಲರ ಮನೆತನ. ಇಡೀ ಶಿಗ್ಗಾಂವ್ ತಾಲ್ಲೂಕಿನ ಜನ ಅವರನ್ನು ಗೌರವ ಮತ್ತು ಪೂಜ್ಯ ಭಾವನೆಯಿಂದ ನೋಡುತ್ತಿದ್ದರು. ದಿ.ಹನುಮಂತಗೌಡರು ಮತ್ತು ದಿ.ಶಂಕರಗೌಡರ ನೆನಪಿನಲ್ಲಿ ಸಿದ್ದಾಂತ್ ಗೌಡ ಪಾಟೀಲ ಅವರು ನೀ ಭವ್ಯ ಕಲ್ಯಾಣಮಂಟಪ ನಿರ್ಮಾಣ ಮಾಡಿರುವುದು ಸಂತೋಷದ ವಿಚಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಒಕ್ಕಲುತನದಲ್ಲಿ ಹಾಜರಿ ಪುಸ್ತಕ ಇಟ್ಟಿದ್ದರು: 
ನಾವು ಶಾಲೆಯಲ್ಲಿ, ಫ್ಯಾಕ್ಟರಿಯಲ್ಲಿ ಹಾಜರಿ ಪುಸ್ತಕವನ್ನು ನೋಡಿದ್ದೇವೆ. ಆದರೆ ದಿ. ಹನುಮಂತೇಗೌಡರು ಒಕ್ಕಲುತನದಲ್ಲಿ ಹಾಜರಿ ಪುಸ್ತಕ ಇಟ್ಟಿದ್ದರು. ಅದನ್ನು ಸುಮಾರು 50 ವರ್ಷ ನಿರ್ವಹಣೆ ಮಾಡಿದ್ದರು. ಗೊಬ್ಬರ ಎಷ್ಟು ಬಳಕೆ ಮಾಡಬೇಕು, ಯಾವ ಬೀಜ ತರಬೇಕು, ಎತ್ತುಗಳನ್ನು ಹೇಗೆ ನೋಡಿಕೊಕೊಳ್ಳಬೇಕೆಂದು ವೈಜ್ಞಾನಿಕವಾಗಿ ಮಾಡುತ್ತಿದ್ದರು. ಎಸ್ ಆರ್ ಬೊಮ್ಮಾಯಿ ಅವರಿಗೆ ಮತ್ತು ಹನುಮಂತಗೌಡ್ರಿಗೆ ಅತ್ಯಂತ ಪ್ರೀತಿ ವಿಶ್ವಾಸ ಇತ್ತು. ಜನರಿಗೆ ಸದಾ ಪರೋಪಕಾರಿ ಕೆಲಸಗಳನ್ನು ಮಾಡುತ್ತಿದ್ದ ಮನೆತನ ಇವರದ್ದಾಗಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಚುನಾವಣೆಗೆ ಒಲ್ಲೆ ಎಂದಿದ್ದ ಗೌಡರು:
ದಿ.ಹನುಮಂತಗೌಡರ ಮಗ ದಿ.ಶಂಕರಗೌಡರು ಸಹ ತಾಲ್ಲೂಕಿನ ಅಭಿವೃದ್ಧಿ ಬಗ್ಗೆ ಸದಾ ಕಾಳಜಿ ವಹಿಸುತ್ತಿದ್ದರು. 78ರಲ್ಲಿ ಚುನಾವಣೆ ಸಂದರ್ಭದಲ್ಲಿ ಹನುಮಂತ ಗೌಡ್ರಿಗೆ ಚುನಾವಣೆ ನಿಲ್ಲಿ ಎಂದು ಇಡೀ ತಾಲ್ಲೂಕಿನ ಜನ ಒತ್ತಾಯ ಮಾಡಿದ್ರೂ ಅವರು ಎಂದೂ ರಾಜಕಾರಣಕ್ಕೆ ಬರಲ್ಲ ಎಂದು ಹೇಳಿದ್ರು. ಅವರ ಮಗ ಶಂಕರಗೌಡ ಪಾಟೀಲ್ ಚುನಾವಣೆಗೆ ನಿಂತರೂ ಅವರು ಪರಾಭವಗೊಂಡ ಹಿನ್ನೆಲೆ ನಂತರ ಅವರೂ ರಾಜಕಾರಣಕ್ಕೆ ಬರಲಿಲ್ಲ. ಭೂ ವ್ಯಾಜ್ಯ ಒಂದಕ್ಕೆ ತಮ್ಮ ವಕೀಲರು ಸರಿಯಾಗಿ ನಿರ್ವಹಣೆ ಮಾಡಿಲ್ಲವೆಂದು ಸ್ವತಃ ತಾವೇ ಕಾನೂನು ಪದವಿ ಪಡೆದು ತಮ್ಮ ಪ್ರಕರಣವನ್ನು ತಾವೇ ವಾದಿಸಿ ಗೆದ್ದು ತೋರಿಸಿದರು ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಶಿಗ್ಗಾಂವ್ ಶೀಘ್ರದಲ್ಲೇ ವಾಣಿಜ್ಯ ಕೇಂದ್ರವಾಗಲಿದೆ:
ಶಿಗ್ಗಾಂವ್ ತಾಲ್ಲೂಕು ವಾಣಿಜ್ಯ ಕೇಂದ್ರವಾಗಿ ಬೆಳೀತಿದೆ. ನ್ಯಾಷನಲ್ ಹೈವೇ ಇರೋದ್ರಿಂದ ಮುಂದಿನ ದಿನಗಳಲ್ಲಿ ಇದು ಪ್ರಮುಖ ಕೇಂದ್ರ ಆಗಲಿದೆ. ಸಾಕಷ್ಟು ಯೋಜನೆಗಳನ್ನು ಇಲ್ಲಿದೆ ತರುತ್ತಿದ್ದೇವೆ. ಈಗಾಗಲೇ ಟೆಕ್ಸ್ಟೈಲ್ ಪಾರ್ಕ್ ಬರುತ್ತಿದೆ, ಬೃಹತ್ ಕಾರ್ಖಾನೆ ಬರಲು ಹಲವರಿಗೆ ಆಹ್ವಾನ ಕೊಡಲಾಗಿದೆ. ವಿದ್ಯಾ ಸಂಸ್ಥೆಗಳು ಇಲ್ಲಿಗೆ ಬರಲಿದೆ. ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಆಗಲಿದೆ. ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ಶಿಗ್ಗಾಂವ್ ತಾಲ್ಲೂಕಿಗೆ ಇದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಬೀದರ್‌ ಜಿಲ್ಲೆಗೆ ಅನು​ದಾನ ಕೊಡಿ: ಕೇಂದ್ರ ಸಚಿವರಿಗೆ ಖೂಬಾ ಮನವಿ

ದಿವಂಗತರನ್ನು ನೆನೆದು ಭಾವುಕರಾದ ಸಿಎಂ:
ಶಂಕರಗೌಡರ ಮನೆತನಕ್ಕೆ ನಾನು ಸದಾ ಚಿರಋಣಿ. ಅವರು ತೋರಿಸಿರುವ ಪ್ರೀತಿ, ವಿಶ್ವಾಸ, ಮಾರ್ಗದರ್ಶನ ನನ್ನ ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ಯಾವುದೇ ಫಲಾಪೇಕ್ಷೆ ಇಲ್ಲದೇ ಅವರು ತಾಲ್ಲೂಕಿನ ಹಿತಕ್ಕಾಗಿ ಮಾರ್ಗದರ್ಶನ ಮಾಡಿಕೊಂಡು ಬಂದಿದ್ದರು. ಇನ್ನೂ ಹಲವು ದಶಕಗಳ ಕಾಲ ಅವರು ಇರಬೇಕಿತ್ತು. ಅವರನ್ನು ಕಳೆದುಕೊಂಡು ನಾವು ಬಡವಾಗಿದ್ದೇವೆ ಎಂದು ಹೇಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕ್ಷಣಕಾಲ ಭಾವುಕರಾದರು.

Vijayapura: ಕೃಷಿ ಹೊಂಡಕ್ಕೆ ಬಿದ್ದು ಸಹೋದರಿಬ್ಬರು ಸಾವು

ಕಾರ್ಯಕ್ರಮದಲ್ಲಿ ಶಿಗ್ಗಾಂವ್ ವಿರಕ್ತ ಮಠದ ಶ್ರೀ ಸಂಗಮೇಶ್ವರ ಮಹಾಸ್ವಾಮಿಗಳು, ದಿ.ಶಂಕರಗೌಡರ ಧರ್ಮಪತ್ನಿ ಸುಶೀಲಮ್ಮ ಪಾಟೀಲ, ಉದ್ಯಮಿ ವಿಜಯ ಸಂಕೇಶ್ವರ್, ಶಿವನಗೌಡ ಪಾಟೀಲ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು,

Latest Videos
Follow Us:
Download App:
  • android
  • ios