ಕಣ್ಣನ್‌ ಮಾಮ ಮೇರು ವ್ಯಕ್ತಿತ್ವದ ಮಹಾಚೈತನ್ಯ: ಗುರುರಾಜ ಕರಜಗಿ

ವಾಗ್ಮಿ ಹಿರೇಮಗಳೂರು ಕಣ್ಣನ್‌ ವರಲ್ಲಿ ಮಹಾ ಚೈತನ್ಯ ಅಡಗಿದ್ದು, ಅವರದ್ದು ಬಣ್ಣಿಸಲಾಗದ ಮೇರು ವ್ಯಕ್ತಿತ್ವ ಎಂದು ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಹೇಳಿದರು. 

Dr Gururaj Karajagi Talks About Hiremagaluru Kannan At Mysuru gvd

ಮೈಸೂರು (ಜು.24): ವಾಗ್ಮಿ ಹಿರೇಮಗಳೂರು ಕಣ್ಣನ್‌ ವರಲ್ಲಿ ಮಹಾ ಚೈತನ್ಯ ಅಡಗಿದ್ದು, ಅವರದ್ದು ಬಣ್ಣಿಸಲಾಗದ ಮೇರು ವ್ಯಕ್ತಿತ್ವ ಎಂದು ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಹೇಳಿದರು. ಸರಸ್ವತಿಪುರಂ ಜೆಎಸ್‌ಎಸ್‌ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಮುದ್ದುರಾಮ ಪ್ರತಿಷ್ಠಾನ ಆಯೋಜಿಸಿದ್ದ ಮುದ್ದುರಾಮ ಪ್ರಶಸ್ತಿ/ ಪುರಸ್ಕಾರ ಹಾಗೂ ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿ, ಕಾವ್ಯ, ಸಂಗೀತ, ಸಾಹಿತ್ಯ ಎಲ್ಲವನ್ನು ಸೇರಿಸಿ ಹದಮಾಡಿ ಮಾತನಾಡುವ ಮೂಲಕ ಕಣ್ಣನ್‌ ಮಾಮಾ ಮಹಾ ರಸಿಕರಾಗಿದ್ದು, ನಮ್ಮನ್ನೂ ರಸಿಕರನ್ನಾಗಿ ಮಾಡಿದ್ದಾರೆ. 

ಅವರ ಮಾತನ್ನು ಕೇಳುವುದೇ ಸೊಗಸು, ಸೋಜಿಗ. ಅವರಲ್ಲಿ ಅಸಾಧ್ಯವಾದ ಚೈತನ್ಯ ಅಡಗಿದೆ ಎಂದರು. ಅವರೊಂದು ಬೆರಗು. ತಮ್ಮದೇ ಆದ ಸಾಧನೆಯ ಮೂಲಕ ಮೇರು ವ್ಯಕ್ತಿತ್ವವನ್ನು ಕಣ್ಣನ್‌ ಮಾಮಾ ಹೊಂದಿದ್ದಾರೆ. ಕಣ್ಣನ್‌ ಅವರಲ್ಲಿ ಬರವಣಿಗೆ ಮತ್ತು ಮಾತು ಎರಡೂ ಮೇಳೈಸಿದೆ. ಅವರು ಮಾತಿನೊಂದಿಗೆ ಬರವಣಿಗೆ ಮಾಡಿದರೆ ಚೆನ್ನಾಗಿರುತ್ತದೆ. ಕಣ್ಣನ್‌ ಮಾಮಾ ಅವರಿಗೆ ಮುದ್ದುರಾಮ ಪ್ರಶಸ್ತಿ ಬಂದಿರುವುದು ಸಂತಸದ ವಿಚಾರವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸ್ಕೃತಿ, ಪರಿಸರ, ಕನ್ನಡವನ್ನು ಉಳಿಸಿ: ಹಿರೇಮಗಳೂರು ಕಣ್ಣನ್‌ ಸಲಹೆ

ವಾಗ್ಮಿ ಹಿರೇಮಗಳೂರು ಕಣ್ಣನ್‌ ಮಾತನಾಡಿ, ಮಕ್ಕಳಲ್ಲಿ ಸಂಸ್ಕಾರದ ಕೊರತೆ ಇರುವುದರಿಂದ ಜೈನ ಮುನಿಗಳು, ತಾಯಂದಿರ ಹತ್ಯೆ ಆಗುತ್ತಿದೆ. ಆದ್ದರಿಂದ ಮಕ್ಕಳಿಗೆ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯದ ಮೂಲಕ ಸಂಸ್ಕಾರ ಕಲಿಸಬೇಕು. ಈ ನಿಟ್ಟಿನಲ್ಲಿ ಲಹರಿ ಸಂಸ್ಥೆಯವರು ಸಾಹಿತ್ಯವನ್ನು ಸಂಗೀತದ ಮೂಲಕ ತಲುಪಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಈ ವೇಳೆ ಹಿರೇಮಗಳೂರು ಕಣ್ಣನ್‌ ಅವರ ಮುದ್ದುರಾಮ ಲಹರಿ ಕೃತಿ ಮತ್ತು ಶ್ವೇತಾ ಪ್ರಕಾಶ್‌ ಅವರ ಪದ್ಮ ಪಲ್ಲವ(ಚೌಪದಿಗಳ ಸಂಕಲನ) ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. 

ಬಳಿಕ ಮುದ್ದುರಾಮ ಪ್ರಶಸ್ತಿಯನ್ನು ವಾಗ್ಮಿ ಹಿರೇಮಗಳೂರು ಕಣ್ಣನ್‌ ಅವರಿಗೆ ನೀಡಿದರೆ ಮುದ್ದುರಾಮ ಪುರಸ್ಕಾರವನ್ನು ಚೌಪದಿ ರಚಯಿತರಾದ ಎಂ. ಮುತ್ತುಸ್ವಾಮಿ ಅವರಿಗೆ ನೀಡಲಾಯಿತು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ವಿದ್ವಾಂಸ ಡಾ.ಟಿ.ವಿ. ವೆಂಕಟಾಚಲಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ವಾಗ್ಮಿ ಪೊ.ಎಂ. ಕೃಷ್ಣೇಗೌಡ, ಪ್ರೊ.ಕೆ.ಸಿ. ಶಿವಪ್ಪ, ಶ್ವೇತಾ ಪ್ರಕಾಶ್‌, ಉದ್ಯಮಿ ಶಿವಕುಮಾರ್‌ ಇದ್ದರು.

ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆಯುವಂತೆ ನಾನು ಹೇಳಿಲ್ಲ: ಸುನಿಲ್‌ ಬೋಸ್‌

ನಾನೆಂದಿಗೂ ಪ್ರಶಸ್ತಿಗೆ ತಲೆ ಬಾಗುವುದಿಲ್ಲ. ಪ್ರಶಸ್ತಿಯನ್ನು ಒಪ್ಪುವುದಿಲ್ಲ. ಈ ಮುದ್ದುರಾಮ ಪ್ರಶಸ್ತಿಯನ್ನು ಮಾತ್ರ ಸ್ವೀಕರಿಸುತ್ತೇನೆ. ಆದರೆ ಪ್ರಶಸ್ತಿಯ ಮೊತ್ತ ಸ್ವೀಕರಿಸುವುದಿಲ್ಲ. ಅದನ್ನು ಪ್ರತಿಷ್ಠಾನಕ್ಕೆ ಹಿಂದಿರುಗಿಸುವೆ.
- ಹಿರೇಮಗಳೂರು ಕಣ್ಣನ್‌, ವಾಗ್ಮಿ

Latest Videos
Follow Us:
Download App:
  • android
  • ios