ಕಾಂಗ್ರೆಸ್ ಎಷ್ಟು ಸ್ಥಾನ ಗೆಲ್ಲುತ್ತೆ ಅಂತ ಹೇಳೋಕೆ ನಾನೇನು ಜ್ಯೋತಿಷಿನಾ?
ಸಿದ್ದರಾಮಯ್ಯ ವಿರುದ್ಧ ಮಾತನಾಡಲು ಬಿಜೆಪಿ ಅವರಿಗೆ ವಿಷಯಗಳೇ ಇಲ್ಲ| ಆದ್ದರಿಂದ ಸಿದ್ದರಾಮಯ್ಯ ಏಕಾಂಗಿ ಅಂತ ಹೇಳುತ್ತಿದ್ದಾರೆ ಎಂದ ಪರಮೇಶ್ವರ್| ಸಿದ್ದರಾಮಯ್ಯ ನಮ್ಮ ನಾಯಕರು| ಅವರ ನಾಯಕತ್ವದಲ್ಲೇ ನಾವು ಚುನಾವಣೆ ಎದುರಿಸುತ್ತಿದ್ದೇವೆ| ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲುತ್ತೇವೆ|
ಮೈಸೂರು(ನ.25): ಈಗಿನ ರಾಜಕೀಯ ವಿದ್ಯಮಾನಗಳು ಏನು ಎಂಬುದು ಎಲ್ಲರಿಗೂ ಗೊತ್ತಿದೆ. ಹರಿಯಾಣ, ಮಧ್ಯಪ್ರದೇಶದಲ್ಲೂ ಪಕ್ಷಾಂತರ ಮಾಡಿದವರು ಸೋತಿದ್ದಾರೆ. ಇಲ್ಲಿನ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದರೆ ನಾವು ಗೆದ್ದಾಗಿದೆ. ಹುಣಸೂರು ಕ್ಷೇತ್ರದ ನಮ್ಮ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ಗೆಲುವು ಸಾಧಿಸಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಹೇಳಿದ್ದಾರೆ.
ಸೋಮವಾರ ನಗರದ ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಬೇರೆ ಯಾವುದೇ ವಿಷಯ ಇಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾತನಾಡಲು ಬಿಜೆಪಿ ಅವರಿಗೆ ವಿಷಯಗಳೇ ಇಲ್ಲ. ಆದ್ದರಿಂದ ಸಿದ್ದರಾಮಯ್ಯ ಏಕಾಂಗಿ ಅಂತ ಹೇಳುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸಿದ್ದರಾಮಯ್ಯ ನಮ್ಮ ನಾಯಕರಾಗಿದ್ದಾರೆ. ಅವರ ನಾಯಕತ್ವದಲ್ಲೇ ನಾವು ಚುನಾವಣೆ ಎದುರಿಸುತ್ತಿದ್ದೇವೆ. ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಎಷ್ಟು ಸ್ಥಾನ ಅಂತ ಹೇಳಲು ಜ್ಯೋತಿಷಿ ಅಲ್ಲ. ಬಿಜೆಪಿ ಸರ್ಕಾರ ಉಳಿಯುತ್ತೋ ಇಲ್ವೋ ಎಂಬುದನ್ನು ಡಿಸೆಂಬರ್ 5ರ ನಂತರ ಹೇಳುತ್ತೇನೆ ಎಂದು ಜಿ.ಪರಮೇಶ್ವರ್ ಅವರು ಹೇಳಿದ್ದಾರೆ.
ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.