Asianet Suvarna News Asianet Suvarna News

ಎಲ್ಲರ ಸ್ವಾತಂತ್ರ್ಯಕ್ಕೆ ಅಂಬೇಡ್ಕರ್‌ ಕಾರಣ: ಸಿಎಂ ಸಿದ್ದರಾಮಯ್ಯ

ಕೊಳ್ಳೇಗಾಲದ ಹೖದಯಭಾಗದಲ್ಲಿ ನಿಮಾ೯ಣವಾಗಿರುವ ಬಾಬಾ ಸಾಹೇಬರ ಪ್ರತಿಮೆ ಸುಂದರವಾಗಿದೆ. ಇದೊಂದು ಸುಂದರಮೂರ್ತಿ, ಇಂತಹ ಪ್ರತಿಮೆಗಳಿಂದ ಉತ್ತಮ ಸ್ಫೂರ್ತಿಯನ್ನು ನಾವೆಲ್ಲರೂ ಪಡೆದುಕೊಳ್ಳೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Dr BR Ambedkar is responsible for everyones freedom Says CM Siddaramaiah gvd
Author
First Published Sep 29, 2023, 10:43 PM IST

ಕೊಳ್ಳೇಗಾಲ (ಸೆ.29): ಕೊಳ್ಳೇಗಾಲದ ಹೖದಯಭಾಗದಲ್ಲಿ ನಿಮಾ೯ಣವಾಗಿರುವ ಬಾಬಾ ಸಾಹೇಬರ ಪ್ರತಿಮೆ ಸುಂದರವಾಗಿದೆ. ಇದೊಂದು ಸುಂದರಮೂರ್ತಿ, ಇಂತಹ ಪ್ರತಿಮೆಗಳಿಂದ ಉತ್ತಮ ಸ್ಫೂರ್ತಿಯನ್ನು ನಾವೆಲ್ಲರೂ ಪಡೆದುಕೊಳ್ಳೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕೊಳ್ಳೇಗಾಲದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಕೊಳ್ಳೇಗಾಲದಲ್ಲಿ ಸುಂದರವಾದ ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣಕ್ಕೆ ಓಲೆ ಮಹದೇವು ಸಹಕರಿಸಿದ್ದಾರೆ. ಇದು ಬಹಳ ಸುಂದರ ಮೂರ್ತಿ. ಡಾ. ಬಿ ಆರ್ ಅಂಬೇಡ್ಕರ್ ಅವರು ಸಂವಿಧಾನದ ಶಿಲ್ಪಿ. 

ಸಂವಿಧಾನ ರಕ್ಷಣೆ ನಮ್ಮೆಲ್ಲರ ಕತ೯ವ್ಯ , ಜವಾಬ್ದಾರಿ ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು, ಕೆಲವು ಶಕ್ತಿಗಳು ಸಂವಿಧಾನ ದುರ್ಬಲಗೊಳಿಸಲು ಪ್ರಯತ್ನ, ಅಂತಹ ಶಕ್ತಿ ವಿರುದ್ದ ನಾವು ದಮನಕ್ಕೆ ಪ್ರಯತ್ನಿಸಬೇಕಿದೆ ಎಂದರು. ಈ ಸಂದಭ೯ದಲ್ಲಿ ಸಚಿವರುಗಳಾದ ಎಚ್ ಸಿ ಮಹದೇವಪ್ಪ, ವೆಂಕಟೇಶ್, ಶಾಸಕ ಎ.ಆರ್. ಕೖಷ್ಣಮೂತಿ೯, ಪ್ರತಿಮೆ ನಿಮಾ೯ತೖ ಓಲೆ ಮಹದೇವು, ಸಮಾಜ ಸೇವಕ ಮಹೇಶ್ವರ್, ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ, ನಗರಸಭೆ ಮಾಜಿ ಅದ್ಯಕ್ಷರುಗಳಾದ ಶಾಂತರಾಜು, ರಮೇಶ್, ರೇಖಾ ರಮೇಶ್, ಅಂಬೇಡ್ಕರ್ ಸಂಘದ ಪದಾಧಿಕಾರಿಗಳು ಇದ್ದರು.

ನಟ Jaggesh ದಿಢೀರ್ ಆಸ್ಪತ್ರೆಗೆ ದಾಖಲು: ಆತಂಕ ಹುಟ್ಟಿಸಿದ ನವರಸ ನಾಯಕನ ಪೋಟೋಸ್!

‘ಎಲ್ಲರ ಸ್ವಾತಂತ್ರ್ಯಕ್ಕೆ ಅಂಬೇಡ್ಕರ್‌ ಕಾರಣ’: ನಮ್ಮೆಲ್ಲರಿಗೂ ಇಂದು ಎಲ್ಲಾ ರೀತಿಯ ಸ್ವಾತಂತ್ರ್ಯ, ಮೂಲಭೂತ ಹಕ್ಕು ದಕ್ಕುವುದಕ್ಕೆ ಅವರೇ ಕಾರಣ. ಅವರಿಲ್ಲದಿದ್ದರೆ, ಸಂವಿಧಾನ ಕರುಡು ಸಮಿತಿಯ ಅಧ್ಯಕ್ಷರಾಗಿರದಿದ್ದರೆ ಸಮನತೆಯ ಸಂವಿಧಾನ ನಮ್ಮೆಲ್ಲರಿಗೂ ದೊರಕುತ್ತಿರಲಿಲ್ಲ, ದೇಶದ 143 ಕೋಟಿಯ ಜನರಿಗೂ ಸಮಾನ ಅವಕಾಶ ಕಲ್ಪಿಸಿದೆ.

ಮಳೆ ಬೆಳೆಗಾಗಿ ಮಾದಪ್ಪನ ಮೊರೆ ಹೋದ ಸಿಎಂ ಸಿದ್ದು: ರಾಜ್ಯದಲ್ಲಿ ಉತ್ತಮ ಮಳೆಬೆಳೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರಾರ್ಥನೆ ಮಾಡಿಕೊಂಡರು. ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆಯೋಜಿಸಲಾಗಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಭಾಗವಹಿಸುವ ಮುನ್ನಾ ಮಹದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.

Udupi: ಕಪಿಲಾ ಸೀಮೋಲ್ಲಂಘನೆ: ಪೇಜಾವರ ಶ್ರೀ ಚಾತುರ್ಮಾಸ ಸಂಪನ್ನ!

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಮಳೆಗಾಗಿ ಮಾದಪ್ಪನ ಬಳಿ ದೇವರಲ್ಲಿ ಪ್ರಾರ್ಥಿಸಿರುವೆ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಮಳೆಗಾಗಿ ಮೊರೆ ಹೋಗಿರುವೆ ಮಾದಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿರುವೆ ಮಾದಪ್ಪನ ಮೇಲೆ ನನಗೆ ನಂಬಿಕೆ ಇದೆ. ಉತ್ತಮ ಮಳೆ ಬೀಳುವ ನೀರೀಕ್ಷೆ ಇದೆ ಎಂದ ಅವರು ತಿಳಿಸಿದರು. ಸಚಿವರಾದ ಕೆ.ವೆಂಕಟೇಶ್, ಎಚ್.ಸಿ.ಮಹದೇವಪ್ಪ ಜೊತೆಗೂಡಿ ಬಂದ ಸಿದ್ದರಾಮಯ್ಯ ಮಾದಪ್ಪನಬೆಟ್ಟದಲ್ಲಿ ಬೆಳ್ಳಿ ದಂಡ ಹಿಡಿದು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿದರು. ಬೆಳ್ಳಿರಥ ಸೇವೆ ನಡೆಸಿದರು.

Follow Us:
Download App:
  • android
  • ios